ತಿರುವನಂತಪುರ: ಯೋಗ ದಿನಾಚರಣೆ ನಡೆದು ಒಂದು ವಾರಗಳ ಬಳಿಕ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ (ಕೆಸಿಬಿಸಿ) 27 ಪುಟಗಳ ನಿರ್ದೇಶನವೊಂದನ್ನು ಜಾರಿಗೊಳಿಸಿದ್ದು, ಯೋಗ ಮಾಡುವ ಎಲ್ಲಾ ಕ್ರಿಶ್ಚಿಯನ್ನರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದೆ. ಮಲಯಾಳಂನಲ್ಲಿ ಈ ನಿರ್ದೇಶನಗಳಿದ್ದು, ವೆಬ್ಸೈಟಿನಲ್ಲಿ ಪೋಸ್ಟ್ ಮಾಡಲಾಗಿದೆ.
“ಯೋಗವನ್ನು ಸೆಕ್ಯುಲರ್ ಎಂದು ಕರೆಯಲಾಗುತ್ತದೆಯಾದರೂ, ಅದನ್ನು ಅನುಸರಿಸುವ ಕ್ರಿಶ್ಚಿಯನ್ನರು ಕೆಲವೊಂದು ಅಂಶಗಳನ್ನು ಪಾಲಿಸಲೇಬೇಕು. ಯೋಗ ಮಾಡುವ ವೇಳೆ, ಧ್ಯಾನ ಮಾಡುವಾಗ ಹಿಂದೂ ಧರ್ಮವನ್ನು ಪಾಲಿಸುತ್ತಿಲ್ಲ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು” ಎಂದಿದೆ. ಶಾಂತಿಯುತ ಮನಸ್ಸಿಗಾಗಿ ಯೋಗವನ್ನು ಪಾಲಿಸಬಹುದು ಎಂಬುದಾಗಿಯೂ ಹೇಳಲಾಗಿದೆ.
ಅಲ್ಲದೇ ಯೋಗ ಅನುಸರಿಸುವ ವೇಳೆ ಹಿಂದೂ ಧರ್ಮದತ್ತ ಆಕರ್ಷಿಸಲ್ಪಡದಂತೆ ಎಚ್ಚರ ವಹಿಸಿಕೊಳ್ಳಬೇಕು. ಇತರ ಧರ್ಮದ ಪ್ರಾರ್ಥನೆಯನ್ನು ಪಠಿಸುವುದು ಅಥವಾ ಮೂರ್ತಿ ಪೂಜೆ ಮಾಡುವುದು ಸಲ್ಲದು ಎಂದಿದೆ.
ಕೆಸಿಬಿಸಿಯ ಈ ನಿರ್ದೇಶನಗಳಿಗೆ ವ್ಯಾಪಕವಾದ ಟೀಕೆಗಳು ವ್ಯಕ್ತವಾಗಿದೆ. ಯೋಗ ಕೇಂದ್ರ ನಡೆಸುತ್ತಿರುವ ಕ್ಯಾಥೋಲಿಕ್ ನನ್ ಇನ್ಫಾಂಟ್ ತ್ರೇಸಾ ಅವರು, ಇಂತಹ ನಿರ್ದೇಶನಗಳನ್ನು ಅನಗತ್ಯ ಎಂದಿದ್ದಾರೆ. ಕ್ರೈಸ್ತ ಮಾರ್ಗದಲ್ಲೂ ಯೋಗವನ್ನು ಅಭ್ಯಾಸಿಸಲು ಸಾಧ್ಯ ಎಂದಿದ್ದಾರೆ.
ಯೋಗವನ್ನು ಜಗತ್ತೇ ಒಪ್ಪಿಕೊಂಡಿರುವ ವೇಳೆ ಭಾರತದಲ್ಲೇ ಅದಕ್ಕೆ ಅಪಸ್ವರಗಳು ವ್ಯಕ್ತವಾಗುತ್ತಿರುವುದು ನಿಜಕ್ಕೂ ಖೇದಕರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.