ಭುವನೇಶ್ವರ: ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪೃಥ್ವಿ-II ಅನ್ನು ಗುರುವಾರ ರಾತ್ರಿ ಒರಿಸ್ಸಾದ ಕರಾವಳಿಯಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೊಳಪಡಿಸಿದೆ. ಸೇನೆಯ ಯೂಸರ್ ಟ್ರಯಲ್ ಭಾಗವಾಗಿ ಇದನ್ನು ಪರೀಕ್ಷೆಗೊಳಪಡಿಸಲಾಗಿದೆ.
ಮೇಲ್ಮೈಯಿಂದ ಮೇಲ್ಮೈ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ಯಶಸ್ಸುಗೊಂಡಿದೆ, ಈ ಕ್ಷಿಪಣಿಯು 350 ಕಿಮೀ ಸ್ಟ್ರೈಕ್ ರೇಂಜ್ ಹೊಂದಿದೆ. ಇದನ್ನು ರಾತ್ರಿ ಸುಮಾರು 8.30 ಕ್ಕೆ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್)ನ ಲಾಂಚ್ ಕಾಂಪ್ಲೆಕ್ಸ್-IIIನ ಮೊಬೈಲ್ ಲಾಂಚರ್ನಿಂದ ಪರೀಕ್ಷೆಗೊಳಪಡಿಸಲಾಗಿದೆ.
“ಇದು ದಿನಚರಿಯ ಪ್ರಯೋಗ” ಎಂದು ಮೂಲಗಳು ತಿಳಿಸಿವೆ.
ಪೃಥ್ವಿ -II ಅನ್ನು ಚಂಡಿಪುರದ ಐಟಿಆರ್ ನಿಂದ 2018ರ ಫೆಬ್ರವರಿ 21 ರ ರಾತ್ರಿ ಕೂಡಾ ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ.
ಈ ಕ್ಷಿಪಣಿ 500/100 ಕೆಜಿ ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ ಮತ್ತು ಇದು ಲಿಕ್ವಿಡ್ ಪ್ರೊಪಲ್ಷನ್ ಟ್ವಿನ್ ಎಂಜಿನ್ಗಳಿಂದ ನಿಯಂತ್ರಿಸಲ್ಪಡುತ್ತದೆ. ಈ ಅತ್ಯಾಧುನಿಕ ಕ್ಷಿಪಣಿ ತನ್ನ ಗುರಿಯನ್ನು ತಲುಪಲು ಕುಶಲ ಪಥವನ್ನು ಹೊಂದಿರುವ ಸುಧಾರಿತ ಜಡತ್ವ ಮಾರ್ಗದರ್ಶನ ವ್ಯವಸ್ಥೆಯನ್ನು ಬಳಸುತ್ತದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.