ನವದೆಹಲಿ: ಜಪಾನಿನ ಒಸಕಾದಲ್ಲಿ ಜಿ20 ಶೃಂಗಸಭೆಯ ಸೈಡ್ಲೈನಿನಲ್ಲಿ ನಡೆದ ಬ್ರಿಕ್ಸ್ ಗುಂಪುಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಭಯೋತ್ಪಾದನೆಯನ್ನು ಹೊಡೆದೋಡಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ವಿಶ್ವ ನಾಯಕರುಗಳಿಗೆ ಕರೆ ನೀಡಿದರು.
ಈ ಬ್ರಿಕ್ಸ್ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮ್ಫೋಸ, ಮೋದಿ ಮತ್ತು ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನರೊ ಭಾಗಿಯಾಗಿದ್ದರು. ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳ ಒಕ್ಕೂಟವನ್ನು ಬ್ರಿಕ್ಸ್ ಎಂದು ಕರೆಯಲಾಗುತ್ತದೆ.
“ಭಯೋತ್ಪಾದನೆಯು ಮಾನವೀಯತೆಗೆ ದೊಡ್ಡ ಬೆದರಿಕೆಯಾಗಿದೆ. ಭಯೋತ್ಪಾದನೆಯು ಮುಗ್ಧರನ್ನು ಮಾತ್ರ ಟಾರ್ಗೆಟ್ ಮಾಡುತ್ತಿಲ್ಲ, ಅದು ಭಯದ ವಾತಾವರಣವನ್ನು ಸೃಷ್ಟಿ ಮಾಡುತ್ತಿದೆ. ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲೇ ಅಂತ್ಯಗೊಳಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕು” ಎಂದಿದ್ದಾರೆ.
ಜಾಗತಿಕ ಆರ್ಥಿಕತೆಯ ಅಭಿವೃದ್ಧಿಯು ಏಕಪಕ್ಷೀಯ ನಿರ್ಧಾರಗಳು ಮತ್ತು ಇಡೀ ವ್ಯವಸ್ಥೆಯುವ ಭಾವಿಸುವ ವಿವಾದಗಳಿಂದ ಹೆಚ್ಚಾಗಿ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. “ಜಾಗತಿಕ ಆರ್ಥಿಕತೆಯ ಸಮತೋಲಿತ ಅಭಿವೃದ್ಧಿಯನ್ನು ಸಾಧಿಸಲು ನಾವು ಹೆಚ್ಚಾಗಿ ವಿಶ್ವ ವಾಣಿಜ್ಯ ಸಂಸ್ಥೆ (WTO) ಸುಧಾರಣೆಯತ್ತ ಗಮನ ಹರಿಸಬೇಕು ಮತ್ತು ಈ ಬೆಳವಣಿಗೆಯು ಎಲ್ಲರಿಗೂ ಮುಕ್ತವಾಗಬೇಕು” ಎಂದರು.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಕೇಶವ್ ಗೋಖಲೆಯವರು ಮಾತನಾಡಿ, “ಇರಾನಿನಲ್ಲಿ ಸ್ಥಿರತೆಯನ್ನು ಕಾಪಾಡುವುದು ಹೇಗೆ ಎಂಬತ್ತ ನಮ್ಮ ಪ್ರಮುಖ ಗಮನ ಇರಬೇಕು, ಅಲ್ಲಿನ ಅಸ್ಥಿರತೆ ನಮಗೆ ಹಲವಾರು ವಿಧಗಳಲ್ಲಿ ಹಾನಿಯುಂಟು ಮಾಡುತ್ತದೆ. ಕೇವಲ ಇಂಧನದ ವಿಷಯದಲ್ಲಿ ಮಾತ್ರವಲ್ಲ, ಗಲ್ಫ್ನಲ್ಲಿ ನೆಲೆಸಿರುವ ಅಪಾರ ಪ್ರಮಾಣದ ವಿದೇಶಿಯರ ವಿಷಯದಲ್ಲೂ ತೊಂದರೆಯುಂಟು ಮಾಡುತ್ತದೆ. 8 ಮಿಲಿಯನ್ ಭಾರತೀಯರು ಗಲ್ಫ್ನಲ್ಲಿ ಇದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.