ನವದೆಹಲಿ: ವಂಚಕ ವಜ್ರದ ಉದ್ಯಮಿ ನೀರವ್ ಮೋದಿ ಮತ್ತು ಆತನ ಸಹೋದರಿ ಪೂರ್ವಿ ಮೋದಿಗೆ ಸೇರಿದ ರೂ.283.16 ಕೋಟಿ ಠೇವಣಿಯನ್ನು ಹೊಂದಿದ್ದ ನಾಲ್ಕು ಬ್ಯಾಂಕ್ ಖಾತೆಯನ್ನು ಸ್ವಿಟ್ಜರ್ಲ್ಯಾಂಟ್ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾರಿ ನಿರ್ದೇಶನಾಲಯವು ಹಣಕಾಸು ವಂಚನೆ ಕಾಯ್ದೆಯಡಿ ಮಾಡಿಕೊಂಡ ಮನವಿಯ ಹಿನ್ನಲೆಯಲ್ಲಿ ಈ ಖಾತೆಗಳನ್ನು ಸಿಝ್ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ಈ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇರುವ ಹಣ ಅಕ್ರಮವಾಗಿದ್ದು, ಭಾರತೀಯ ಬ್ಯಾಂಕುಗಳಿಗೆ ಸೇರಿದ್ದಾಗಿದೆ. ಹೀಗಾಗಿ ಇದನ್ನು ಮುಟ್ಟುಗೋಲು ಹಾಕಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು.
ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿಗಳನ್ನು ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ್ದಾನೆ. ಆತನನ್ನು ವಾಪಾಸ್ ಭಾರತಕ್ಕೆ ಕರೆತರಲು ಸಾಕಷ್ಟು ಪ್ರಯತ್ನಗಳನ್ನು ಆರಂಭಿಸಲಾಗಿದೆ.
ಪ್ರಸ್ತುತ ಈತನನ್ನು ಬ್ರಿಟನ್ನಿನ ಅತ್ಯಂತ ನಟೋರಿಯಸ್ ಜೈಲು ವಂಡ್ಸ್ವರ್ತ್ನಲ್ಲಿ ಇಡಲಾಗಿದೆ. ಮಾರ್ಚ್ ತಿಂಗಳಲ್ಲಿ ಈತನನ್ನು ಬಂಧಿಸಲಾಗಿದೆ. ಜಾಮೀನಿಗಾಗಿ ಆತ ಸಲ್ಲಿಸುತ್ತಾ ಬಂದ ಅರ್ಜಿಗಳು ವಜಾಗೊಂಡಿವೆ. ಭಾರತದ ಗಡಿಪಾರು ಮನವಿಗೆ ಸ್ಪಂದಿಸಿ ಯುಕೆ ಈತನನ್ನು ಬಂಧಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.