>ನವದೆಹಲಿ: ಅಮೆರಿಕಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು ಮಂಗಳವಾರ ಭಾರತಕ್ಕೆ ಬಂದಿಳಿದಿದ್ದು, ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆಯನ್ನು ನಡೆಸಿದ್ದಾರೆ. ಮೋದಿಯವರು ಎರಡನೇಯ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ವಿದೇಶವೊಂದರ ಮೊದಲ ಉನ್ನತ ಮಟ್ಟದ ಭೇಟಿ ಇದಾಗಿದೆ.
ಪಾಂಪಿಯೋ ಅವರು ಇಂದು ವಿದೇಶಾಂಗ ಸಚಿವ ಜೈಶಂಕರ್ ಅವರನ್ನೂ ಭೇಟಿಯಾಗಲಿದ್ದು, ಭಯೋತ್ಪಾದನೆ, ಎಚ್-1ಬಿ ವೀಸಾ, ವ್ಯಾಪಾರ, ಭಾರತದ ಶಸ್ತ್ರಾಸ್ತ್ರ ಒಪ್ಪಂದ, ಇರಾನ್ ಮೇಲೆ ಅಮೆರಿಕಾ ವಿಧಿಸಿದ ನಿರ್ಬಂಧದಿಂದ ಉಂಟಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಿ20 ಶೃಂಗಸಭೆಯ ವೇಳೆ ಮಾತುಕತೆ ನಡೆಸಲಿರುವ ಮುಂಚಿತವಾಗಿ ಪಾಂಪಿಯೋ ಅವರು ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿಯೊಂದಿಗೆ ಅವರು ಮಾತುಕತೆ ನಡೆಸಿದ ಫೋಟೋವನ್ನು ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಅವರು ಹಂಚಿಕೊಂಡಿದ್ದು, “ನಮ್ಮ ಕಾರ್ಯತಾಂತ್ರಿಕ ಪಾಲುದಾರಿತ್ವವನ್ನು ವಿಸ್ತರಿಸಲು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಬರೆದಿದ್ದಾರೆ.
Working together to further deepen our strategic partnership@SecPompeo called on PM @narendramodi to exchange views on various aspects of Indo-US relationship. PM will meet President @realDonaldTrump on the sidelines of the upcoming #G20OsakaSummit pic.twitter.com/Jjjp9gTKbd
— Raveesh Kumar (@MEAIndia) June 26, 2019
ಇಂದು ಮಧ್ಯಾಹ್ನ ಪಾಂಪಿಯೋ ಅವರಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಔತಣಕೂಟವನ್ನು ಏರ್ಪಡಿಸಲಿದ್ದಾರೆ. ಈ ವೇಳೆ ಮಾತುಕತೆಗಳು ಜರುಗಲಿವೆ. “ನಾವು ಸಕಾರಾತ್ಮಕ ಮನೋಭಾವದಿಂದ ಭೇಟಿಯಾಗುತ್ತಿದ್ದೇವೆ. ಮೈಕ್ ಪೊಂಪಿಯೊ ಅವರೊಂದಿಗಿನ ಸಭೆ ಬಹಳ ಪ್ರಮುಖವಾದುದ್ದಾಗಿದೆ. ಉಭಯ ದೇಶಗಳ ನಡುವಿನ ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳನ್ನು ನಾವು ಖಂಡಿತವಾಗಿ ಚರ್ಚಿಸುತ್ತೇವೆ. ಎರಡೂ ದೇಶಗಳು ತಮ್ಮದೇ ಆದ ಹಿತಾಸಕ್ತಿಗಳನ್ನು ಹೊಂದಿರುವುದರಿಂದ ಕೆಲವು ಸಂಘರ್ಷಗಳು ಉಂಟಾಗುವುದು ಸಹಜ. ರಾಜತಾಂತ್ರಿಕತೆಯನ್ನು ಬಳಸಿಕೊಂಡು ಸಾಮಾನ್ಯ ನೆಲೆಯಲ್ಲಿ ಎಲ್ಲದಕ್ಕೂ ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ”ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.