ನವದೆಹಲಿ: ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳ ವಿರುದ್ಧ ದೂರು ನೀಡುವುದನ್ನು ಸುಲಭವಾಗಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹೊಸ “ದೂರು ನಿರ್ವಹಣಾ ವ್ಯವಸ್ಥೆ” (Complaint Management System) ವೆಬ್ಸೈಟ್ ಅನ್ನು ಪ್ರಾರಂಭಿಸಿದೆ, ಇಲ್ಲಿ ಆರ್ಬಿಐ ಅಧೀನದಲ್ಲಿರುವ ಯಾವುದೇ ಸಂಸ್ಥೆಗಳ ವಿರುದ್ಧ ಯಾರು ಬೇಕಾದರೂ ದೂರು ನೀಡಬಹುದು.
ಆರ್ಬಿಐ ಬ್ಯಾಂಕಿಂಗ್ ತನಿಖಾಧಿಕಾರಿ (ಬಿಒ) ಮತ್ತು Consumer Education and Protection Cells (CEPCs) ಕಚೇರಿಗಳಲ್ಲಿ ಸ್ವೀಕರಿಸಿದ ದೂರುಗಳ ಪ್ರಕ್ರಿಯೆಯನ್ನು CMS ವೆಬ್ಸೈಟ್ ಪ್ರಾರಂಭದೊಂದಿಗೆ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ದೂರು ನಿರ್ವಹಣಾ ವ್ಯವಸ್ಥೆಯು, ಗ್ರಾಹಕರ ದೂರುಗಳಿಗೆ ಸಮಯೋಚಿತ ಪರಿಹಾರವನ್ನು ನೀಡುವಲ್ಲಿ, ಗ್ರಾಹಕರ ಅನುಭವವನ್ನು ಸುಧಾರಿಸುವಲ್ಲಿ ರಿಸರ್ವ್ ಬ್ಯಾಂಕಿನ ಬದ್ಧತೆಯನ್ನು ತೋರಿಸುತ್ತದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಆರ್ಬಿಐ ಅಧೀನದಲ್ಲಿರುವ ವಾಣಿಜ್ಯ ಬ್ಯಾಂಕು, ಕೋ-ಅಪರೇಟೀವ್ ಬ್ಯಾಂಕ್, ನಾನ್ ಬ್ಯಾಂಕಿಂಗ್ ಫಿನಾನ್ಶಿಯಲ್ ಕಂಪನಿಗಳ ಮೇಲೆ ಈ ವೆಬ್ಸೈಟ್ ಮೂಲಕ ದೂರನ್ನು ದಾಖಲಿಸಬಹುದಾಗಿದೆ.
ಯಾವುದೇ ಆರ್ಬಿಐ ನಿಯಂತ್ರಿತ ಘಟಕದ ವಿರುದ್ಧ ದೂರುಗಳನ್ನು ಸಲ್ಲಿಸಲು CMS ಈಗ ಸಿಂಗಲ್ ವಿಂಡೋ ಆಗಿದೆ. CMS ನಲ್ಲಿ ದಾಖಲಾದ ಎಲ್ಲಾ ದೂರುಗಳನ್ನು ಆರ್ಬಿಐನ ಒಂಬಡ್ಸ್ಮನ್/ ಪ್ರಾದೇಶಿಕ ಕಚೇರಿಗೆ ಡೈರೆಕ್ಟ್ ಮಾಡಲಾಗುತ್ತದೆ. ಈ ವೆಬ್ಸೈಟ್ ಲಿಂಕ್ ಮೂಲಕ ದೂರು ದಾಖಲಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.