ನವದೆಹಲಿ: ಭಾರತೀಯ ವಾಯುಸೇನೆಯ ಉನ್ನತ ಯುದ್ಧ ವಿಮಾನ ಸುಖೋಯ್ ಸು-30 ಎಂಕೆಐ ಮತ್ತು ದೇಶೀಯ ಲಘು ಯುದ್ಧ ವಿಮಾನ ತೇಜಸ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪ್ರಸ್ತುತ ತಯಾರಿಸುತ್ತಿರುವ ವಿಮಾನಗಳಲ್ಲಿ ಸೇರಿಕೊಂಡಿವೆ. ಇವೆರಡನ್ನು ಹೊರತುಪಡಿಸಿ ಡಾರ್ನಿಯರ್ ಡಿಒ -228 ವಿಮಾನಗಳು, ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್-ಧ್ರುವ್ (ALH), ಚೇತಕ್ ಮತ್ತು ಚೀತಲ್ ಹೆಲಿಕಾಫ್ಟರ್ಗಳನ್ನು ತಯಾರಿಸಲು ಎಚ್ಎಎಲ್ ಆರ್ಡರ್ಗಳನ್ನು ಪಡೆದುಕೊಂಡಿದೆ.
ರಾಜ್ಯಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಪ್ರಸ್ತುತ ಇರುವ ಆರ್ಡರ್ಗಳನ್ನು ಪೂರೈಸಲು ಎಚ್ಎಎಲ್ ಸಮರ್ಥವಾದ ಸೌಲಭ್ಯಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಎಚ್ಎಎಲ್ಗೆ 2019 ರ ಜನವರಿಯಿಂದ 2019 ರ ಜೂನ್ವರೆಗೆ ರಕ್ಷಣಾ ಸೇವೆಗಳಿಂದ 8,140 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಮತ್ತು PSU ಡಿಫೆನ್ಸ್ ದಿಗ್ಗಜ ಕೂಡ ತನ್ನ ಕಾರ್ಯ ಬಂಡವಾಳದ ಅಗತ್ಯತೆಗಳನ್ನು ಅಗತ್ಯವಿದ್ದಾಗ ಪೂರೈಸಲು ಬ್ಯಾಂಕುಗಳಿಂದ ಸಾಲ ಪಡೆಯುತ್ತದೆ ಎಂದಿದ್ದಾರೆ.
“ಎಚ್ಎಎಲ್ ಸೇರಿದಂತೆ ವಿವಿಧ ಮಾರಾಟಗಾರರ ಬಾಕಿ ಹಣವನ್ನು ಹಣದ ಲಭ್ಯತೆ, ಯೋಜನೆಗಳ ಆದ್ಯತೆಗೆ ಅನುಗುಣವಾಗಿ ಪಾವತಿಸಲಾಗುತ್ತದೆ. ಎಚ್ಎಎಲ್ನೊಂದಿಗೆ ಬಾಕಿ ಇರುವ ಇತರ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಮೊತ್ತ 868.14 ಕೋಟಿ ರೂ ಆಗಿದೆ” ರಾಜನಾಥ್ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.