ಲಕ್ನೋ: ಕಳ್ಳತನ, ಲೂಟಿ ಮತ್ತು ಸೈಬರ್ ವಂಚನೆಯಂತಹ ಅಪರಾಧಗಳಲ್ಲಿ ಎಫ್ಐಆರ್ ದಾಖಲಿಸುವುದನ್ನು ಸರಾಗವಾಗಿಸುವ ಸಲುವಾಗಿ ಉತ್ತರ ಪ್ರದೇಶ ಪೊಲೀಸರು ‘ಯುಪಿ ಕಾಪ್ ಆ್ಯಪ್’ ಅನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಸೇವೆಯೂ ಈ ಒಂದು ಆ್ಯಪ್ನಲ್ಲಿ ಇದೆ.
“ಹಲವಾರು ಪ್ರಕರಣಗಳಲ್ಲಿ ಎಫ್ಐಆರ್ ನೋಂದಾಯಿಸಿಕೊಳ್ಳುವುದು ಅತ್ಯಗತ್ಯ. ಆದರೆ ಹಲವಾರು ಸಂತ್ರಸ್ಥರು ಎಫ್ಐಆರ್ ನೋಂದಾಯಿಸಿಕೊಳ್ಳಲು ಹಲವಾರು ಸುತ್ತು ಪೊಲೀಸ್ ಠಾಣೆಗಳಿಗೆ ಅಲೆಯಬೇಕಾಗುತ್ತದೆ. ಆದರೆ ಎಫ್ಐಆರ್ ದಾಖಲಿಸುವ ಪ್ರಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ. ಅದು ಮೊಬೈಲ್ ಫೋನ್ನ ಸ್ವೈಪ್ನಲ್ಲಿ ಲಭ್ಯವಿರುತ್ತದೆ ”ಎಂದು ಆ್ಯಪ್ ತಯಾರಿಸಲು ಸಹಾಯ ಮಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ತಾಂತ್ರಿಕ ಸೇವೆಗಳು) ಅಶುತೋಷ್ ಪಾಂಡೆ ಹೇಳಿದ್ದಾರೆ.
ನೌಕರರ ಪರಿಶೀಲನೆ, ಅಕ್ಷರ ಪ್ರಮಾಣಪತ್ರ ಪರಿಶೀಲನೆ, ಧರಣಿ / ಪ್ರತಿಭಟನೆಗೆ, ಸಿನಿಮಾ ಚಿತ್ರೀಕರಣಕ್ಕೆ, ಕಾರ್ಯಕ್ರಮ ಆಯೋಜನೆಗೆ ಅನುಮತಿ ಸೇರಿದಂತೆ 27 ಸೇವೆಗಳನ್ನು ಪಡೆಯಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ಇದು ಮರಣೋತ್ತರ ವರದಿ, ನಿಂದನಾ ವರದಿ, ಕಾಣೆಯಾದ ವ್ಯಕ್ತಿಯ ವರದಿ, ಕದ್ದ ಮತ್ತು ವಶಪಡಿಸಿಕೊಂಡ ವಾಹನಗಳ ಮಾಹಿತಿಯನ್ನು ಕೂಡ ಒದಗಿಸುತ್ತದೆ.
ಜಿಲ್ಲಾ ಕಲೆಕ್ಟರ್ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನೀಡುವ ಎಲ್ಲಾ ದಾಖಲೆಗಳಿಗೆ ಅರ್ಜಿ ಸಲ್ಲಿಸುವ ಸಲುವಾಗಿ ಈ ಆ್ಯಪ್ ಅನ್ನು ರಾಜ್ಯ ಸರ್ಕಾರದ ಇ-ಜಿಲ್ಲಾ ಪೋರ್ಟಲ್ಗೆ ಸಂಪರ್ಕಿಸಲಾಗಿದೆ. ಅಪರಾಧದ ಬಗೆಗಿನ ಗೌಪ್ಯ ಮಾಹಿತಿಯನ್ನು ಆ್ಯಪ್ ಮೂಲಕ ಪೊಲೀಸರೊಂದಿಗೆ ಹಂಚಿಕೊಳ್ಳಬಹುದು ಮತ್ತು ಹಂಚಿಕೊಂಡ ಜನರ ವಿವರಗಳನ್ನು ಪೊಲೀಸರು ಬಹಿರಂಗಪಡಿಸುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.