ಮುಸ್ಸೂರಿ: ಪ್ರವಾಸಿಗಳಿಗೆ ಎಲ್ಲೆಂದರಲ್ಲಿ ಕಸ ಬಿಸಾಕಬೇಡಿ ಎನ್ನುವ ಸಂದೇಶವನ್ನು ರವಾನಿಸುವ ಸಲುವಾಗಿ ಉತ್ತರಾಖಂಡದ ಮಸ್ಸೂರಿಯ ಬಂಗ್ಲೋ ಕಿ ಕಂಡಿ ಗ್ರಾಮದಲ್ಲಿ 15,000 ಬಿಸಾಕಿದ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ 1,500 ಅಡಿ ಉದ್ದದ ಮತ್ತು 12 ಅಡಿ ಅಗಲದ ‘ವಾಲ್ ಆಫ್ ಹೋಪ್’ ಎಂಬ ಗೋಡೆಯನ್ನು ನಿರ್ಮಾಣ ಮಾಡಲಾಗಿದೆ. ಈ ಗೋಡೆಯ ಮೂಲಕ ಕಸ ಬಿಸಾಕ ಬೇಡಿ ಎಂಬ ಸಂದೇಶವನ್ನು ರವಾನೆ ಮಾಡಲಾಗಿದೆ.
ಗ್ರಾಮದ ಪಂಚಾಯತ್ ಮುಖ್ಯಸ್ಥೆ ರೀನಾ ರಂಗಲ್ ಎಂಬುವವರು ಈ ಗೋಡೆಯನ್ನು ಅನಾವರಣಗೊಳಿಸಿದರು. ಗೋವಾ ಮ್ಯೂಸಿಯಂ ಸಂಸ್ಥಾಕ ಸುಬೋಧ್ ಕೆರ್ಕರ್ ಈ ಗೋಡೆ ನಿರ್ಮಾಣದ ಐಡಿಯಾವನ್ನು ನೀಡಿದ್ದರು.
“ಈ ಗೋಡೆಯನ್ನು ನಿರ್ಮಾಣ ಮಾಡುವ ಸಲುವಾಗಿ ಶಾಲೆ ಮತ್ತು ಕಾಲೇಜುಗಳ 50 ಮಂದಿ ಸ್ವಯಂಸೇವಕರು ಭಾಗಿಯಾಗಿದ್ದಾರೆ. ಗ್ರಾಮದ ನಿವಾಸಿಗಳು ಕೂಡ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಈ ಕಾರ್ಯ ಯಶಸ್ವಿಯಾಗಲು ಇವರೆಲ್ಲಾ ಅವಿರತ ಶ್ರಮಪಟ್ಟಿದ್ದಾರೆ” ಎಂದು ಗೋಡೆ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡ ಹಿಲ್ದಾರಿ ಗ್ರೂಪ್ ಮ್ಯಾನೇಜರ್ ಅರವಿಂದ್ ಶುಕ್ಲಾ ಹೇಳಿದ್ದಾರೆ.
ಸ್ಥಳಿಯರು, ಸ್ವಯಂಸೇವಕರು ಬಿಸಾಕಲ್ಪಟ್ಟ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಅವುಗಳನ್ನು ತುಂಡರಿಸಿ, ಅವುಗಳಿಗೆ ಕೇಸರಿ ಬಣ್ಣವನ್ನು ಬಳಿದಿದ್ದಾರೆ. ಬಳಿಕ ಇವುಗಳನ್ನು ಬಳಸಿ ಗೋಡೆ ನಿರ್ಮಾಣ ಮಾಡಲಾಗಿದೆ. ಈ ಗೋಡೆಯಿಂದಾಗಿ ಗ್ರಾಮವೀಗ ಹಿಂದಿಗಿಂತಲೂ ಸುಂದರವಾಗಿ ಕಂಗೊಳಿಸುತ್ತಿದೆ.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರದ ಅವಶ್ಯಕತೆಯ ಸಂದೇಶವನ್ನು ಸಾರುವ ಉದ್ದೇಶದೊಂದಿಗೆ ಈ ಗೋಡೆಯನ್ನು ನಿರ್ಮಾಣ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.