ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿತ್ಯ ಯೋಗದ ಒಂದೊಂದು ಆಸನಗಳು ಮತ್ತು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ತಮ್ಮ ಟ್ವಿಟರಿನ ಮೂಲಕ ಮಾಡುತ್ತಿದ್ದಾರೆ. ಇಂದು ಅವರು ಸೂರ್ಯ ನಮಸ್ಕಾರದ ಭಂಗಿಯನ್ನು ಹಂಚಿಕೊಂಡಿದ್ದು, ಅದರಿಂದಾಗುವ ಉಪಯುಕ್ತತೆಗಳ ಬಗ್ಗೆ ವಿವರಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮೋದಿಯವರು ಜೂನ್ 5 ರಿಂದ ವಿವಿಧ ಯೋಗ ಆಸನಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬರುತ್ತಿದ್ದಾರೆ. ಇದುವರೆಗೂ ಅಂತಹ 10 ವೀಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. 2014 ರಿಂದ ವಿಶ್ವದಾದ್ಯಂತ ಜೂನ್ 21 ರಂದು ಯೋಗ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಆ್ಯನಿಮೇಟೆಡ್ ವೀಡಿಯೋದಲ್ಲಿ, ಆಲಿವ್ ಗ್ರೀನ್ ಟ್ರ್ಯಾಕ್ ಪ್ಯಾಂಟ್ ಮತ್ತು ಕಿತ್ತಳೆ ಬಣ್ಣದ ಶರ್ಟ್ ತೊಟ್ಟ ಮೋದಿ ಸುಮಾರು 7 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಮಾಡುವುದನ್ನು ಕಾಣಬಹುದಾಗಿದೆ.
Have you made Surya Namaskar a part of your routine?
Do watch this video to know why it is a good idea to do so and the advantages that come with regularly practising it. #YogaDay2019 pic.twitter.com/CqfolZzRrj
— Narendra Modi (@narendramodi) June 19, 2019
“ನೀವು ಸೂರ್ಯ ನಮಸ್ಕಾರವನ್ನು ನಿಮ್ಮ ದಿನಚರಿಯ ಭಾಗವನ್ನಾಗಿಸಿಕೊಂಡಿದ್ದೀರಾ? ಹಾಗೇ ಮಾಡುವುದರಿಂದ ಏನು ಪ್ರಯೋಜನ ಮತ್ತು ಅದನ್ನು ನಿತ್ಯ ಅಭ್ಯಾಸ ಮಾಡುವುದರಿಂದಾಗುವ ಲಾಭವೇನು ಎಂಬುದನ್ನು ತಿಳಿದುಕೊಳ್ಳಲು ಈ ವೀಡಿಯೋವನ್ನು ನೋಡಿ” ಎಂದು ಮೋದಿ ಹ್ಯಾಶ್ ಟ್ಯಾಗ್ ಯೋಗ ಡೇ 2019 (#YogaDay2019) ಬಳಸಿ ಟ್ವಿಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.