ನವದೆಹಲಿ: ಪ್ರಯಾಣಿಕರಿಗೆ ಉತ್ತಮವಾದ ಸುರಕ್ಷತೆ ಮತ್ತು ಸೌಲಭ್ಯಗಳನ್ನು ಒದಗಿಸುವ ಉದ್ದೇಶದೊಂದಿಗೆ ರೈಲುಗಳನ್ನು ಓಡಿಸಲು ಖಾಸಗಿಯವರನ್ನು ಆಹ್ವಾನಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ರೈಲುಗಳನ್ನು ಓಡಿಸಲು ಖಾಸಗಿಯವರಿಗೆ, ತನ್ನ ಟಿಕೆಟಿಂಗ್ ಅಂಗಸಂಸ್ಥೆ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೇಶನ್ (ಐಆರ್ಸಿಟಿಸಿ) ಮೂಲಕ ಆಹ್ವಾನವನ್ನು ನೀಡಲು ರೈಲ್ವೆ ಸಚಿವಾಲಯ ಯೋಜಿಸುತ್ತಿದೆ.
ಯೋಜನೆಯ ಪ್ರಕಾರ, ರೈಲ್ವೆಯು ಐಆರ್ಸಿಟಿಸಿಗೆ ಓಡಿಸಲು ಕೆಲವು ರೈಲುಗಳನ್ನು ನೀಡುತ್ತದೆ, ಬದಲಿಗೆ ಅದು ಗಳಿಕೆಯ ಅಥವಾ ಆದಾಯದ ಕೆಲವು ಭಾಗವನ್ನು ರೈಲ್ವೆಗೆ ಹಿಂದಿರುಗಿಸಬೇಕಾಗುತ್ತದೆ ಎನ್ನಲಾಗಿದೆ.
ಐಆರ್ಸಿಟಿಸಿ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಖಾಸಗಿಯವರನ್ನು ಆಹ್ವಾನಿಸಲಿದೆ. ಹೆಚ್ಚಾಗಿ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಮಾರ್ಗಗಳಿಗೆ ಖಾಸಗಿಯವರನ್ನು ಆಹ್ವಾನಿಸುವ ನಿರ್ಧಾರ ಮಾಡಲಾಗುತ್ತಿದೆ.
ಪ್ರಯಾಣಿಕ ರೈಲುಗಳನ್ನು ಹೊರತುಪಡಿಸಿ ಸರಕು ಸಾಗಣೆ ರೈಲುಗಳಿಗೂ ಖಾಸಗಿ ಸಹಭಾಗಿತ್ವವನ್ನು ಕೋರಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರಯಾಣಿಕರಿಗೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ಖಾತ್ರಿಪಡಿಸುವುದು ಕೂಡ ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ. ಇದು ವಾಣಿಜ್ಯ ರೈಲುಗಳ ಒಟ್ಟಾರೆ ಗುಣಮಟ್ಟವನ್ನು ಸುಧಾರಿಸಲಿದೆ.
ಪ್ರೀಮಿಯಂ ರೈಲುಗಳನ್ನು ಓಡಿಸಲು ಸರ್ಕಾರವು ಹಂತಹಂತವಾಗಿ ಖಾಸಗಿ ವಲಯದವರನ್ನು ಆಹ್ವಾನಿಸಬಹುದು ಮತ್ತು ರಾಜಧಾನಿ ಮತ್ತು ಶತಾಬ್ದಿ ರೈಲುಗಳಿಗೆ ಟೆಂಡರ್ ಕರೆಯಬಹುದು ಎಂದು ನಿರೀಕ್ಷಿಸಲಾಗಿದೆ. ಇದುವರೆಗೆ, ಇದಕ್ಕಾಗಿ ನಿಖರವಾದ ಚೌಕಟ್ಟನ್ನು ಸಿದ್ಧಪಡಿಸಲಾಗಿಲ್ಲ. ಈ ಕುರಿತು ಅಂತಿಮ ಯೋಜನೆ ರೂಪಿಸಲು ಸರ್ಕಾರ 100 ದಿನಗಳ ಗುರಿಯನ್ನು ನಿಗದಿಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.