ನವದೆಹಲಿ: ಐಸಿಸಿ ವಿಶ್ವಕಪ್ ಪಂದ್ಯಾಟದಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ಥಾನ ಪರಸ್ಪರ ಸೆಣಸಾಡಲಿವೆ. ಈ ಎರಡು ದೇಶಗಳು ಕಾದಾಡಲು ಮೈದಾನಕ್ಕೆ ಇಳಿಯುತ್ತವೆ ಎಂದಾದರೆ ಅಭಿಮಾನಿಗಳ ಕಾತುರತೆಗೆ ಮಿತಿಯೇ ಇರುವುದಿಲ್ಲ. ಭಾವನೆಗಳೇ ಹೆಚ್ಚಾಗಿ ಮೇಳೈಸುವ ಈ ಕ್ರೀಡಾಕೂಟ ಉಭಯದೇಶಗಳ ಜನರಿಗೆ ಪ್ರತಿಷ್ಠೆಯ ವಿಷಯವಾಗಿರುತ್ತದೆ.
ಭಾರತ ಮತ್ತು ಪಾಕಿಸ್ಥಾನದ ನಡುವಿನ ನಾಳೆಯೇ ವಿಶ್ವಕಪ್ ಕದನ ಮ್ಯಾಂಚೆಸ್ಟರಿನ 26,000 ಸ್ಥಾನಗಳ ಸಾಮರ್ಥ್ಯವಿರುವ ಓಲ್ಡ್ ಟ್ರಾಫೋರ್ಡ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಒಂದು ತಿಂಗಳ ಹಿಂದೆಯೇ ರಿಲೀಸ್ ಆದ ಕೇವಲ 48 ಗಂಟೆಗಳೊಳಗೆ ಅಷ್ಟೋ ಟಿಕೆಟ್ಗಳು ಕೂಡ ಸಂಪೂರ್ಣ ಮಾರಾಟವಾಗಿವೆ. ಮುಕ್ಕಾಲು ಭಾಗದಷ್ಟು ಟಿಕೆಟ್ಗಳನ್ನು ಭಾರತೀಯ ಅಭಿಮಾನಿಗಳೇ ಕಾಯ್ದಿರಿಸಿಕೊಂಡಿದ್ದಾರೆ. ಕೇವಲ ಶೇ.18ರಷ್ಟು ಟಿಕೆಟ್ ಪಾಕಿಸ್ಥಾನಿಗಳ ಪಾಲಾಗಿದೆ. ಕೆಲವು ಅಭಿಮಾನಿಗಳಂತು ಲಕ್ಷಗಟ್ಟಲೆ ಖರ್ಚು ಮಾಡಿಕೊಂಡು ಟಿಕೆಟ್ ಪಡೆದುಕೊಂಡಿದ್ದಾರೆ. ಟಿಕೆಟ್ ಪಡೆಯಲು ಸಾಧ್ಯವಾಗದವರು ಹತಾಶೆಯಿಂದ ಟಿವಿಯೇ ಗತಿ ಎಂದು ಸಮ್ಮನಾಗಿದ್ದಾರೆ.
ಈಗಾಗಲೇ ಭಾರತ ಮತ್ತು ಪಾಕಿಸ್ಥಾನ ನಡುವಣ ಪಂದ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಇನ್ನೊಂದೆಡೆ, ಉಭಯ ದೇಶಗಳು ಜಾಹೀರಾತಿನ ಮೂಲಕ ಪರಸ್ಪರ ಕಾಲೆಳೆಯುತ್ತಿವೆ. ವಿಂಗ್ ಕಮಾಂಡರ್ ಅಭಿನಂದನ್ ಮಾದರಿಯ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಪಾಕಿಸ್ಥಾನ ಕುಚೋದ್ಯದ ಜಾಹೀರಾತು ಪ್ರಕಟಿಸಿತ್ತು, ಇದಕ್ಕೆ ಭಾರತದ ಮಾಧ್ಯಮಗಳು ತಕ್ಕ ಪ್ರತಿಕ್ರಿಯೆ ನೀಡಿವೆ.
ಪುಲ್ವಾಮ ದಾಳಿ ನಡೆದ ಬಳಿಕ ಉಭಯ ದೇಶಗಳ ನಡುವಣ ಸಂಬಂಧ ತೀವ್ರ ಸ್ವರೂಪದಲ್ಲಿ ಹದಗೆಟ್ಟಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಶಾಂಘೈ ಕೊಅಪರೇಶನ್ ಸಮಿತ್ ನಲ್ಲಿ ಇಮ್ರಾನ್ ಖಾನ್ ಅವರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ದೇಶಪ್ರೇಮಕ್ಕೆ ಹೆಸರಾಗಿರುವ ಭಾರತೀಯ ಕ್ರಿಕೆಟ್ ಆಟಗಾರರು ಪಾಕಿಸ್ಥಾನಿ ಆಟಗಾರರನ್ನು ಸಮ್ಮನೆ ಬಿಟ್ಟಾರೆಯೇ?
ಆದರೆ, ಬದ್ಧವೈರಿಗಳ ನಡುವಣ ಕಾದಾಟಕ್ಕೆ ವರುಣ ದೇವ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾನೆ ಎಂಬ ಬಗ್ಗೆಯೇ ಎಲ್ಲರಿಗೂ ಚಿಂತೆ ಕಾಡಲಾರಂಭಿಸಿದೆ. ಈಗಾಗಲೇ ಮಳೆಯ ಕಾರಣಕ್ಕೆ ವಿಶ್ವಕಪ್ ನ ಹಲವಾರು ಪಂದ್ಯಗಳು ರದ್ದಾಗಿವೆ. ಇದೇ ಪರಿಸ್ಥಿತಿ ಭಾರತ-ಪಾಕ್ ಪಂದ್ಯಕ್ಕೂ ಬಂದರೆ ಗತಿಯೇನು ಎಂಬ ಆತಂಕ ಎಲ್ಲರದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.