ಇತ್ತೀಚಿಗೆ ಎಲ್.ಕೆ. ಅಡ್ವಾಣಿಯವರು ಭಾರತದ ಮೇಲೆ ಇನ್ನೊಮ್ಮೆ ತುರ್ತು ಪರಿಸ್ಥಿತಿ ಬರಬಹುದು ಎಂದಿದ್ದರು. ಒಂದು ಕಡೆಯಿಂದ ನೋಡಿದರೆ ತುರ್ತು ಪರಿಸ್ಥಿತಿ ಹೇರುವುದು ಈ ಹಿಂದೆ ಹೇರಿದಷ್ಟು ಸುಲಭದ ಮಾತಲ್ಲ. ಇದಕ್ಕೆ ಸಂಬಂಧ ಪಟ್ಟ ಕಾನೂನನ್ನು ಈಗ ಬಿಗಿಗೊಳಿಸಲಾಗಿದೆ.
ಆದರೆ ಅಡ್ವಾಣಿಯವರ ಮಾತಲ್ಲಿ ಸುಳ್ಳಿಲ್ಲ ಅವರ ಮಾತನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಬೇಕು. ಅಡ್ವಾಣಿಯವರು ಸೇರಿದಂತೆ ಬಹುತೇಕ ಎಲ್ಲಾ ರಾಜಕೀಯ ನಾಯಕರಿಗೆ ಮಾಧ್ಯಮಗಳು ಕನಸಲ್ಲಿ ಕಾಡುವ ಭೂತದಂತೆ ಕಾಡುತ್ತಿದೆ. ಮಾಧ್ಯಮಗಳು ಆಡಳಿತದ ವೈಫಲ್ಯಗಳ ಹಿಂದೆ ಬೆನ್ನತಿ ಹೋಗುತ್ತದೆ. ಅಲ್ಲದೇ ಇಂದಿನ ಡಿಜಿಟಲ್ ಯುಗದಲ್ಲಿ ಮಾಧ್ಯಮಗಳೇ ಹಲವು ಹಗರಣಗಳನ್ನು ಹೊರತಂದದ್ದು ಅವರ ನಿದ್ದೆಗೆಡಲು ಮುಖ್ಯಕಾರಣ. ಅಡ್ವಾಣಿಗೆ ಪ್ರಜಾತಂತ್ರದಲ್ಲಿ ಮಾಧ್ಯಮದ ಪಾತ್ರ ಚೆನ್ನಾಗಿ ಗೊತ್ತಿದೆ. ಇಂದು ಮಾಧ್ಯಮಗಳು ಎಷ್ಟು ಬಲಿಷ್ಟ ಎಂಬ ಅರಿವೂ ಅವರಿಗಿದೆ.
ಕೆಲವೂಮ್ಮೆ ಮಾಧ್ಯಮಗಳು ತನ್ನ ಹಠವನ್ನು ಸಾಧಿಸಲು ಹೋಗುತ್ತದೆ. ಒಂದು ಸಲ ಮಾಧ್ಯಮ ಒಂದು ವಿಷಯದ ಬಗ್ಗೆ ಯೋಚಿಸಿದರೆ ಅದನ್ನು ಸಾಮಾನ್ಯವಾಗಿ ಬಿಡುವುದಿಲ್ಲ. ಅದು ಒಂದು ತೀರ್ಮಾನಕ್ಕೆ ಬರುವವರೆಗೆ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ. ಕೇವಲ ಅಡ್ವಾಣಿ ಮಾತ್ರವಲ್ಲ ಮಾಧ್ಯಮವನ್ನು ಬಳಸಿ ಬೆಳೆದವರಲ್ಲಿ ಎ.ಎ.ಪಿ. ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಇನ್ನು ಹತ್ತು ಹಲವಾರು ರಾಜಕಾರಿಣಿಗಳು ಸೇರಿದ್ದಾರೆ. ಅವರು ಅಥವಾ ಅವರ ಪಕ್ಷ ಉತ್ತರ ನೀಡಲಾಗದ ಸ್ಥಿತಿಗೆ ಬಂದಾಗ ದೂರುವುದು ಮಾಧ್ಯಮದವರನ್ನು.
ರಾಜಕಾರಣದಲ್ಲಿ ಈ ಹಿಂದೆ ಇದ್ದಹಾಗೆ ಪ್ರಬಲ ಸಮೀಕರಣಗಳಿಲ್ಲ. ರಾಜಕೀಯ ಸಿದ್ಧಾಂತಗಳಲ್ಲಿ ಯಾರು ಯಾರಿಗೆ ಶತ್ರುಗಳಲ್ಲ ಮಿತ್ರರೂ ಅಲ್ಲ. ಸಮಯಾಧಾರಿತ ರಾಜಕಾರಣ. ಆದುದರಿಂದ ಈ ಹಿಂದೆ ಹೇರಿದಂತೆ ತುರ್ತು ಪರಿಸ್ಥಿತಿ ಜನರ ಮೇಲೆ ಹೇರಿದರೂ ಜನರು ಈ ಎಲ್ಲದರೊಂದಿಗೆ ಸರಿದೂಗಿಸಿ ಕೊಳ್ಳಬಹುದು. ಆದರೆ ಮಾಧ್ಯಮಗಳು ಸುಮ್ಮನಿರುದಿಲ್ಲವಲ್ಲ ಆ ಸಮಯದಲ್ಲಿ ನಡೆವ ವ್ಯವಹಾರ ಅವ್ಯಹಾರಗಗಳ ಚಿತ್ರಣ ಜನರ ಮುಂದಿಟ್ಟು ತನ್ನ ಕೆಲಸ ಮಾಡಿಯೇ ಮಾಡುತ್ತದೆ. ಆದರೆ ಆಗಲೂ ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದರೆ ಅದು ಸುಮನೆ ಬಿಡುದಿಲ್ಲ.
ಇನ್ನೊಂದು ರೀತಿಯಲ್ಲಿ ಹೇಳುದಾದರೆ ತನ್ನ ಪಾಳೆಯದ ಸೂಷ್ಮಾಸ್ವರಾಜ್ಯ ಅವರು ಲಲಿತ್ ಮೋದಿ ವೀಸಾ ಪ್ರಕರಣದಲ್ಲಿ ಸಿಲುಕಿರುದರಿಂದ ಮಾಧ್ಯಮಗಳ ಗಮನವನ್ನು ಇದರಿಂದ ಬೇರೆಡೆ ಸೆಳೆಯಲು ಅಥವಾ ಮಾಧ್ಯಮಗಳಿಗೆ ನೀವು ನಿಮ್ಮ ಗಡಿ ಮೀರುತ್ತಿದ್ದೀರಿ ಎಂದು ಎಲ್.ಕೆ. ಅಡ್ವಾಣಿಯವರು ಪರೋಕ್ಷವಾಗಿ ಹೇಳಿದರೋ ಎಂಬುದೇ ಅನುಮಾನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.