ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವ ಸನ್ನದ್ಧವಾಗುತ್ತಿದೆ. ಸುಮಾರು 180 ದೇಶಗಳು ಈ ಬಾರಿ ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ. ಫ್ರಾನ್ಸಿನ ವಿಶ್ವವಿಖ್ಯಾತ ಐಫೆಲ್ ಟವರ್ ಸೇರಿದಂತೆ ನಾನಾ ಜಾಗಗಳು ಯೋಗವನ್ನು ಆಯೋಜನೆಗೊಳಿಸಲು ಸನ್ನದ್ಧವಾಗುತ್ತಿವೆ.
ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅವಿರೋಧವಾಗಿ ಅನುಮೋದಿಸಿದ ಬಳಿಕ 2015ರಿಂದ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
“ಈ ವರ್ಷ ವಿಶ್ವದ ಪ್ರಸಿದ್ಧ ಸ್ಮಾರಕಗಳ ಸಮೀಪ ಯೋಗ ದಿನಾಚರಣೆಯನ್ನು ಆಯೋಜನೆಗೊಳಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಯೋಗ ದಿನ ಈಗ ಹೆಚ್ಚು ಪ್ರಸಿದ್ಧಗೊಂಡಿರುವುದರಿಂದ ಸಮಾರಂಭದಲ್ಲಿ ಭಾಗಿಯಾಗುವವರ ಸಂಖ್ಯೆಯೂ ಏರಿಕೆಯಾಗುವ ನಿರೀಕ್ಷೆ ಇದೆ, ಹೀಗಾಗಿ ಭಾರತೀಯ ರಾಯಭಾರ ಕಛೇರಿ ಆವರಣಗಳು ಇದಕ್ಕೆ ಸಾಕಾಗುವುದಿಲ್ಲ. ಇದಕ್ಕಾಗಿ ವಿವಿಧ ರಾಜತಾಂತ್ರಿಕರ ಸಹಾಯ ಪಡೆದು ಬೇರೆ ಬೇರೆ ಕಡೆ ಯೋಗ ಸಮಾರಂಭ ಆಯೋಜನೆಗೊಳಿಸಲಾಗುತ್ತಿದೆ” ಎಂದು ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚ ಹೇಳಿದ್ದಾರೆ.
ದೇಶದಾದ್ಯಂತ, ವಿದೇಶಗಳಲ್ಲಿ ನಡೆಯಲಿರುವ ಯೋಗ ದಿನಾಚರಣೆಯ ಉಸ್ತುವಾರಿಯನ್ನು ಆಯುಷ್ ಸಚಿವಾಲಯ ವಹಿಸಿಕೊಳ್ಳುತ್ತಿದೆ. ಈ ಬಾರಿ ವಿವಿಧ ದೇಶಗಳಲ್ಲಿನ ರಾಯಭಾರ ಕಛೇರಿಗಳನ್ನು ಹೊರತಾಗಿಯೂ, ವ್ಯಕ್ತಿಗಳು, ಸಂಘಟನೆಗಳು ಪ್ರಖ್ಯಾತ ಸ್ಮಾರಕಗಳ ಸಮೀಪ ಯೋಗವನ್ನು ಆಯೋಜನೆಗೊಳಿಸುತ್ತಿವೆ ಎಂದು ಕೊಟೆಚ ಹೇಳಿದ್ದಾರೆ.
ಒಪೆರಾ ಹೌಸ್ ಆಸ್ಟ್ರೇಲಿಯಾ, ಕಾಂಬೋಡಿಯಾದ ಅಂಗ್ಕೊರ್ ವಾಟ್ ತೆಂಪಲ್, ಜಿಂಬಾಬ್ವೆಯ ವಿಕ್ಟೋರಿಯಾ ಫಾಲ್ಸ್ ಬ್ರಿಡ್ಜ್ ಮುಂತಾದ ಕಡೆ 180 ದೇಶಗಳಲ್ಲಿ ಈ ಬಾರಿ ಯೋಗ ದಿನಾಚರಣೆ ನಡೆಯಲಿದೆ. ಭಾರತದ ಝಾರ್ಖಾಂಡಿನ ರಾಂಚಿಯಲ್ಲಿ ಅತೀದೊಡ್ಡ ಯೋಗ ಸಮಾರಂಭ ಜರುಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.