ಗುರುವಾಯೂರು: ಕೇರಳದ ಗುರುವಾಯೂರಿನ ಪ್ರಸಿದ್ಧ ಶ್ರೀಕೃಷ್ಣ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಾವರೆಯಲ್ಲಿ ತುಲಾಭಾರ ಸೇವೆಯನ್ನು ನೆರವೇರಿಸಿದರು. ಬಳಿಕ ಕಮಲದ ಹೂವುಗಳನ್ನು ದೇವರಿಗೆ ಸಮರ್ಪಿಸಲಾಯಿತು.
‘ಗುರುವಾಯೂರು ದೇವಸ್ಥಾನ ದೈವೀಕ ಮತ್ತು ಭವ್ಯವಾಗಿದೆ. ದೇಶದ ಪ್ರಗತಿ ಮತ್ತು ಸಮೃದ್ಧಿಗಾಗಿ ದೇಗುದಲ್ಲಿ ಪ್ರಾರ್ಥನೆ ಸಲ್ಲಿಸಿದೆ’ ಎಂದು ದೇವಸ್ಥಾನಕ್ಕೆ ಭೇಟಿ ನೀಡಿದ ವೀಡಿಯೋವನ್ನು ಮೋದಿ ಟ್ವೀಟ್ ಮಾಡಿದ್ದಾರೆ.
The Guruvayur Temple is divine and magnificent. Prayed at this iconic Temple for the progress and prosperity of India. pic.twitter.com/sB5I4GEYZA
— Narendra Modi (@narendramodi) June 8, 2019
‘ಗುರುವಾಯೂರು ದೇವಸ್ಥಾನದಲ್ಲಿ ಕೃತಾರ್ಥನಾದ ಕ್ಷಣ’ ಎಂದು ತುಲಾಭಾರದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
A blessed moment from the Guruvayur Temple. pic.twitter.com/MgBLNM3IHJ
— Narendra Modi (@narendramodi) June 8, 2019
ಶುಕ್ರವಾರವೇ ಅವರು ಕೊಚ್ಚಿಗೆ ಬಂದಿಳಿದಿದ್ದು, ಕೇರಳ ಗವರ್ನರ್ ಪಿ.ಸದಾಶಿವನ್ ಮತ್ತು ಕೇರಳ ಸಚಿವ ಮುರಳೀಧರನ್ ಅವರನ್ನು ಸ್ವಾಗತಿಸಿದರು. ಇಂದು ಬೆಳಗ್ಗೆ ಗುರುವಾಯೂರಿಗೆ ತೆರಳಿ ಸುಮಾರು ಒಂದು ಗಂಟೆಗಳ ಕಾಲ ಅಲ್ಲೇ ಇದ್ದು ದೇವರಿಗೆ ಸೇವೆಯನ್ನು ಸಲ್ಲಿಸಿದರು.
ಬಳಿಕ ಕೇರಳದ ತ್ರಿಶೂರಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ಚುನಾವಣೆಗಳು ಅದರ ಜಾಗದಲ್ಲಿರುತ್ತದೆ, ಆದರೆ ಚುನಾವಣೆ ಮುಗಿದ ಬಳಿಕ 130 ಕೋಟಿ ಜನರ ಜವಾಬ್ದಾರಿ ನಮ್ಮದಾಗುತ್ತದೆ. ನಮ್ಮನ್ನು ಗೆಲ್ಲಿಸಿದವರು ಕೂಡ ನಮ್ಮವರು, ನಮ್ಮನ್ನು ಗೆಲ್ಲಿಸದವರು ಕೂಡ ನಮ್ಮವರು. ವಾರಣಾಸಿಯಷ್ಟೇ ಕೇರಳ ಕೂಡ ನನ್ನದು” ಎಂದಿದ್ದಾರೆ.
ಚುನಾವಣೆ ಮಾತ್ರವಲ್ಲದೇ ವರ್ಷ ಪೂರ್ತಿ ಜನ ಸೇವೆ ಮಾಡುವ ಕೇರಳ ಬಿಜೆಪಿ ಕಾರ್ಯಕರ್ತರನ್ನು ಶ್ಲಾಘಿಸಿದ ಅವರು, ಬಿಜೆಪಿಯು ಸರ್ಕಾರ ರಚಿಸುವುದಕ್ಕಾಗಿ ರಾಜಕೀಯದಲ್ಲಿಲ್ಲ ಬದಲಾಗಿ ರಾಷ್ಟ್ರ ನಿರ್ಮಾಣ ಮಾಡಲು ರಾಜಕೀಯದಲ್ಲಿದೆ ಎಂದರು. “ಜಗತ್ತಿನಲ್ಲಿ ಭಾರತಕ್ಕೆ ಸರಿಯಾದ ಸ್ಥಾನಮಾನ ಸಿಗುವುದನ್ನು ನೋಡುವ ಸಲುವಾಗಿ ತಪಸ್ಸು ಮಾಡಲು ಬಂದಿದ್ದೇವೆ” ಎಂದರು.
ಕರಾವಳಿಯ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಕಟಿಬದ್ಧವಾಗಿದ್ದು, ಅದಕ್ಕಾಗಿ ಪ್ರತ್ಯೇಕ ಮೀನುಗಾರಿಕಾ ಮತ್ತು ಪಶು ಸಂಗೋಪನಾ ಸಚಿವಾಲಯ ನಿರ್ಮಿಸಿದ್ದೇವೆ ಎಂದರು. ಹಸುಗಳ ಕಾಲುಬಾಯಿ ರೋಗ ಹೋಗಲಾಡಿಸಲು ದೇಶವ್ಯಾಪಿ ಲಸಿಕಾ ಅಭಿಯಾನ ಆರಂಭಿಸಲಿದ್ದೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.