ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಅಯೋಧ್ಯೆಗೆ ತೆರಳಿ 7 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಶೋಧ ಸಂಸ್ಥಾನ ಮ್ಯೂಸಿಯಂನಲ್ಲಿ ಅನಾವರಣಗೊಳಿಸಲಿದ್ದಾರೆ. ಈ ಪ್ರತಿಮೆಯನ್ನು ಕರ್ನಾಟಕದ ರೋಸ್ವುಡ್ನಿಂದ ಮಾಡಲಾಗಿದೆ.
ಈ ಪ್ರತಿಮೆ ರಾಮನ ಐದು ಅವತಾರಗಳಲ್ಲಿ ಒಂದಾದ ಕೋದಂಡ ರಾಮನನ್ನು ಪ್ರತಿನಿಧಿಸುತ್ತಿದೆ. ಶೋಧ ಸಂಸ್ಥಾನ ಮ್ಯೂಸಿಯಂನಲ್ಲಿ ರಾಮನಿಗೆ ಸಂಬಂಧಿಸಿದ 2,500 ಕಲಾಕೃತಿಗಳು ಇವೆ. ಆದರೆ ಇಲ್ಲಿ ಕೋದಂಡರಾಮನ ಪ್ರತಿಮೆ ಇರಲಿಲ್ಲ. ಹೀಗಾಗಿ ಕೋದಂಡ ರಾಮನ ಪ್ರತಿಮೆಯನ್ನು ಇಲ್ಲಿ ಸ್ಥಾಪನೆ ಮಾಡಲಾಗುತ್ತಿದೆ.
ಕೋದಂಡ ರಾಮನ ಪ್ರತಿಮೆಯನ್ನು ಕರ್ನಾಟಕದಿಂದ ಉತ್ತರಪ್ರದೇಶಕ್ಕೆ ಕೊಂಡೊಯ್ಯಲಾಗಿದೆ ಎಂಬುದು ಮತ್ತೊಂದು ವಿಶೇಷ.
ಮಧ್ಯಾಹ್ನ 2.30-3.2 0ರ ನಡುವೆ ಯೋಗಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಬಳಿಕ ಅವರು ಮಹಂತ ನೃತ್ಯ ಗೋಪಾದ್ ದಾಸ್ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯಾದಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕೂಗು ಹೆಚ್ಚುತ್ತಿರುವ ಸಂದರ್ಭದಲ್ಲಿ ಯೋಗಿ ಅಯೋಧ್ಯಾಗೆ ತೆರಳಿ ಅಲ್ಲಿ ಕೋದಂಡರಾಮನ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ಭಾರೀ ಮಹತ್ವವನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.