ಕೋಲ್ಕತ್ತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ರಾಂಗ್ ಆಗಿದ್ದಾರೆ. ಕೋಲ್ಕತ್ತಾದಲ್ಲಿ ಬೃಹತ್ ಈದ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ವಿರೋಧಿಗಳಿಗೆ ಹಿಂದಿ ಸಿನಿಮಾದ ಫೇಮಸ್ ಡೈಲಾಗ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಜೊ ಹಮ್ಸೆ ಟಕರಾಯೇಂಗೆ, ವೊ ಚೂರ್ ಚೂರ್ ಹೋ ಜಾಯೇಂಗೆ (ಯಾರು ನಮ್ಮನ್ನು ಎದುರು ಹಾಕಿಕೊಳ್ಳುತ್ತಾರೋ ಅವರು ಚೂರು ಚೂರಾಗಿ ಹೋಗುತ್ತಾರೆ) ಎಂದಿದ್ದಾರೆ.
ಬಂಗಾಳದಲ್ಲಿ ಬಿಜೆಪಿಯ ವಿಜಯವನ್ನು ಉದಯಿಸಿ ಬಳಿಕ ಮುಳುಗುವ ಸೂರ್ಯನಿಗೆ ಹೋಲಿಸಿರುವ ಅವರು, ಸೂರ್ಯ ಪ್ರಖರವಾಗಿಯೇ ಹುಟ್ಟುತ್ತಾನೆ ಆದರೆ ಬಳಿಕ ಆತನ ಪ್ರಖರತೆ ಕ್ಷೀಣಿಸಿ ಮುಳುಗುತ್ತಾನೆ ಎಂದಿದ್ದಾರೆ. ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದಿದ್ದಾರೆ.
ಇನ್ನೊಂದೆಡೆ ಆಕ್ರಮಣಕಾರಿಯಾಗುತ್ತಿರುವ ಮಮತಾ ಬ್ಯಾನರ್ಜಿಯವರನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ, ತೃಣಮೂಲ ಶಾಸಕರು ಪಕ್ಷವನ್ನು ಬಿಟ್ಟು ಹೊರ ನಡೆಯುತ್ತಿದ್ದು, ಇದೇ ರೀತಿ ಮುಂದುವರೆದರೆ ಮಮತಾ ಸರ್ಕಾರ ಹೆಚ್ಚು ಕಾಲ ಉಳಿಯಲಾರದು ಎಂದಿದ್ದಾರೆ.
ಅಪಾರ ಪ್ರಮಾಣದ ತೃಣಮೂಲಕ ಶಾಸಕರು ಪಕ್ಷವನ್ನು ಬಿಟ್ಟು ಹೊರ ನಡೆಯಲು ಸಿದ್ಧರಾಗಿದ್ದಾರೆ, ಇದರಿಂದ 2021ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿಯೇ ಸರ್ಕಾರ ಪತನಗೊಳ್ಳಬಹುದು. ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯವರು ಮಮತಾ ಉತ್ತರಾಧಿಕಾರಿಯಾಗುತ್ತಿರುವುದು ಶಾಸಕರ ಬಂಡಾಯಕ್ಕೆ ಕಾರಣವಾಗಿದೆ ಎಂದು ಪಶ್ಚಿಮಬಂಗಾಳ ಬಿಜೆಪಿ ಉಸ್ತುವಾರಿ ಕೈಲಾಸ್ ವಿಜಯವರ್ಗೀಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.