ನವದೆಹಲಿ: ವಿದೇಶಾಂಗ ಸಚಿವರಾಗಿ ನೇಮಕವಾಗಿರುವ ಎಸ್.ಜೈ ಶಂಕರ್ ಅವರನ್ನು ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಲು, ಅದೇ ರೀತಿ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಎನ್ಡಿಎ ಅಭ್ಯರ್ಥಿಯಾಗಿ ಬಿಹಾರದಿಂದ ರಾಜ್ಯಸಭೆಗೆ ಆರಿಸಲು ಕೇಂದ್ರ ನಿರ್ಧರಿಸಿದೆ ಎನ್ನಲಾಗಿದೆ.
ರಾಜ್ಯಸಭಾ ಸದಸ್ಯರಾಗಿದ್ದ ಅಮಿತ್ ಶಾ, ಸ್ಮೃತಿ ಇರಾನಿ ಮತ್ತು ರವಿಶಂಕರ್ ಪ್ರಸಾದ್ ಅವರು ಲೋಕಸಭಾ ಚುನಾವಣೆಯಲ್ಲಿ ಆರಿಸಿ ಬಂದಿರುವ ಹಿನ್ನಲೆಯಲ್ಲಿ ಅವರ ರಾಜ್ಯಸಭಾ ಸ್ಥಾನಗಳು ಖಾಲಿ ಇವೆ. ಈ ಸ್ಥಾನಗಳಿಗೆ ಎಸ್. ಜೈಶಂಕರ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರನ್ನು ನೇಮಕಗೊಳಿಸಲು ನಿರ್ಧರಿಸಲಾಗಿದೆ.
ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಎಸ್. ಜೈಶಂಕರ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರು ಸಂಸತ್ತಿನ ಉಭಯ ಸದನಗಳ ಪೈಕಿ ಒಂದರಿಂದ ಆರಿಸಿ ಬರಲೇ ಬೇಕಿದೆ. ಗುಜರಾತಿನಲ್ಲಿ ಬಿಜೆಪಿ ಮತ್ತು ಬಿಹಾರದಲ್ಲಿ ಎನ್ಡಿಎ ಇರುವುದರಿಂದ ರಾಜ್ಯಸಭೆಗೆ ಇವರ ಆಯ್ಕೆಗೆ ಯಾವುದೇ ತೊಡಕುಗಳಿಲ್ಲ.
ಎಸ್.ಜೈ ಶಂಕರ್ ಅವರು 2014ರಲ್ಲಿ ಮೋದಿ ಪ್ರಧಾನಿಯಾದ ವೇಳೆ ಅಮೆರಿಕಾದ ಭಾರತ ರಾಯಭಾರಿಯಾಗಿದ್ದರು. ಬಳಿಕ ಅವರನ್ನು ಭಾರತಕ್ಕೆ ಕರೆಸಿ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಎರಡನೇಯ ಅವಧಿಯ ಮೋದಿ ಸರ್ಕಾರದಲ್ಲಿ ಅವರು ವಿದೇಶಾಂಗ ಸಚಿವರಾಗಿದ್ದಾರೆ. ಪಾಸ್ವಾನ್ ಅವರು ಹಲವಾರು ದಶಕಗಳಿಂದ ಸಂಸದನಾಗಿ ಗಮನ ಸೆಳೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.