ನವದೆಹಲಿ: ಸಕಲ ಜೀವರಾಶಿಗಳನ್ನು ತನ್ನೊಡಲಲ್ಲಿ ಪೋಷಣೆ ಮಾಡುತ್ತಿರುವ ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯ. ಈ ಕರ್ತವ್ಯವನ್ನು ಆತನಿಗೆ ನೆನಪು ಮಾಡಿಕೊಡಲೆಂದೇ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷ ‘ಬೀಟ್ಏರ್ಪೊಲ್ಯುಷನ್’ ಎಂಬ ಘೋಷವಾಕ್ಯದೊಂದಿಗೆ ವಿಶ್ವಸಂಸ್ಥೆ ಪರಿಸರ ದಿನವನ್ನು ಆಚರಣೆ ಮಾಡುತ್ತಿದೆ.
ಏರುತ್ತಿರುವ ವಾಯು ಮಾಲಿನ್ಯವನ್ನು ತೊಡೆದು ಹಾಕುವಲ್ಲಿ ನಿಮ್ಮ ಧ್ವನಿಯನ್ನು ಗಟ್ಟಿಗೊಳಿಸಿ ಮತ್ತು ನಮ್ಮೊಂದಿಗೆ ಕೈಜೋಡಿಸಿ ಎಂದು ವಿಶ್ವಸಂಸ್ಥೆ ಕರೆ ನೀಡಿದೆ. ವಾಯುಮಾಲಿನ್ಯದಿಂದ ಭವಿಷ್ಯದಲ್ಲಿ ಅಪಾಯಗಳು ಎದುರಾಗಲಿದ್ದು ಅವುಗಳನ್ನು ತಡೆಗಟ್ಟಬೇಕಾದರೆ ಇಂದಿನಿಂದಲೇ ನಾವು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಅದು ಪ್ರತಿಪಾದಿಸಿದೆ.
ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು “ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ (ಭೂಮಿ ನನ್ನ ತಾಯಿ, ನಾನು ಅವಳ ಮಗು)” ಎಂಬ ಸಂಸ್ಕೃತ ಶ್ಲೋಕವನ್ನು ಸ್ಮರಿಸಿಕೊಂಡಿದ್ದಾರೆ. “ನಮ್ಮ ಭೂಮಿ ಮತ್ತು ನಮ್ಮ ಪರಿಸರ ನಮ್ಮನ್ನು ಪಾಲನೆ ಮಾಡುವಂತಹು. ಇಂದು ವಿಶ್ವ ಪರಿಸರ ದಿನ. ಸ್ವಚ್ಛ ಭೂಮಿಗಾಗಿ ನಮ್ಮ ಬದ್ಧತೆಯನ್ನು ನಾವು ಪುನರುಚ್ಛರಿಸುತ್ತೇವೆ” ಎಂದಿದ್ದಾರೆ.
ಪ್ರಕೃತಿಯೊಂದಿಗೆ ಸೌಹಾರ್ದವಾಗಿ ಬದುಕುವುದು ಉತ್ತಮ ಭವಿಷ್ಯವನ್ನು ನೀಡುತ್ತದೆ ಎಂದಿದ್ದಾರೆ. ಪ್ರಕೃತಿಗೆ ಸಂಬಂಧಿಸಿದ ವೀಡಿಯೋವನ್ನೂ ಹಂಚಿಕೊಂಡಿದ್ದಾರೆ.
माता भूमिः पुत्रोऽहं पृथिव्याः।
Our Planet and Environment is something we all cherish greatly. Today on #WorldEnvironmentDay, we reiterate our commitment to ensure a cleaner planet.
Living in harmony with nature will lead to a better future. pic.twitter.com/3V7yLD3d8U
— Narendra Modi (@narendramodi) June 5, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.