ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಮೆಟ್ರೋದಲ್ಲಿ ಭಾರತ ನಿರ್ಮಿತ ಸಂಪೂರ್ಣ ಸ್ವಯಂಚಾಲಿತ ಮತ್ತು ಚಾಲಕ ರಹಿತ ರೈಲು ಪ್ರಯಾಣವನ್ನು ಆರಂಭಿಸಿದೆ, ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಹೆಚ್ಚಿನ ಉತ್ತೇಜನ ದೊರೆತಂತಾಗಿದೆ.
ಸಿಡ್ನಿ ಇತ್ತೀಚಿಗಷ್ಟೇ ಚಾಲಕ ರಹಿತ ಮೆಟ್ರೋ ಲೈನ್ ಅನ್ನು ಆರಂಭಿಸಿದ್ದು, ಇದರ ಮೂಲಕ ಅದು 6 ಕೋಚುಗಳುಳ್ಳ 22 ಸ್ವಯಂ ಚಾಲಿತ ರೈಲನ್ನು ಓಡಿಸಲಿದೆ. ಎಲ್ಲಾ ಕೋಚುಗಳು ಕೂಡ ಆಲ್ಸ್ಟೋಂಮ್ ಸಂಸ್ಥೆಯ ಆಂಧ್ರಪ್ರದೇಶದಲ್ಲಿರುವ ಶ್ರೀ ಸಿಟಿ ಫೆಸಿಲಿಟಿಯಲ್ಲಿ ಅಭಿವೃದ್ಧಿಗೊಳ್ಳಲಿದೆ ಮತ್ತು ಉತ್ಪಾದನೆಗೊಳ್ಳಲಿದೆ.
2018ರ ಡಿಸೆಂಬರ್ ತಿಂಗಳಲ್ಲಿ ಅಲ್ಟ್ಸೋಂಮ್ ಇಂತಹ ಕೋಚುಗಳನ್ನು ಕೊನೆಯ ಬಾರಿಗೆ ಸಿಡ್ನಿ ಮೆಟ್ರೋಗೆ ನೀಡಿದೆ. ಈ ಕೋಚುಗಳು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಎಲ್ಇಡಿ ಲೈಟಿಂಗ್ಸ್, ಎಮರ್ಜೆನ್ಸಿ ಇಂಟರ್ಕಾಂ, ಸಿಸಿಟಿವಿ ಕ್ಯಾಮೆರಾ, ರಿಯಲ್ ಟೈಮ್ ಟ್ರಾವೆಲ್ ಇನ್ಫಾರ್ಮೇಶನ್, ಡಬಲ್ ಡೋರ್ ಸೇರಿದಂತೆ ಹಲವಾರು ವ್ಯವಸ್ಥೆಗಳನ್ನು ಹೊಂದಿದೆ.
ಗಮನಿಸಬೇಕಾದ ಒಂದು ಅಂಶವೆಂದರೆ, ಈ ರೈಲುಗಳನ್ನು ರಫ್ತು ಮಾಡಿದ ಆಂಧ್ರಪ್ರದೇಶ ಮೂಲದ ಫೆಸಿಲಿಟಿಯು ಅರ್ಬಲಿಸ್ 400 ಸಿಗ್ನಲಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಅದು ನಿಲ್ದಾಣಗಳಲ್ಲಿ ಸ್ಥಗಿತಗೊಳ್ಳುವ ಸಮಯವನ್ನು ಮತ್ತು ಅನೇಕ ಸೇವೆಗಳ ನಡುವಿನ ಸಮಯವನ್ನು ಕಡಿಮೆ ಮಾಡುತ್ತದೆ. ಆಲ್ಸ್ಟೋಂಮ್ನ ಬೆಂಗಳೂರು ಮೂಲದ ಎಂಜಿನಿಯರಿಂಗ್ ಕೇಂದ್ರದಲ್ಲಿ ಈ ಕೋಚುಗಳನ್ನು ಅರ್ಬಲಿಸ್ 400 ವ್ಯವಸ್ಥೆಯೊಂದಿಗೆ ಸಂಯೋಜನೆಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.