ನವದೆಹಲಿ: ಹೊಸ ಉತ್ಸಾಹ, ಹೊಸ ಹುರುಪಿನೊಂದಿಗೆ ನರೇಂದ್ರ ಮೋದಿ ಸರ್ಕಾರದ ಸಚಿವರುಗಳು ಕೆಲಸವನ್ನು ಆರಂಭಿಸಿದ್ದಾರೆ. ಮೋದಿ ಸಂಪುಟಕ್ಕೆ ಅಶ್ಚರ್ಯಕರವಾಗಿ ಎಂಟ್ರಿಯನ್ನು ನೀಡಿರುವ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈ ಶಂಕರ್ ಅವರು, ಶನಿವಾರ ವಿದೇಶಾಂಗ ಸಚಿವರಾಗಿ ಮೊದಲ ಬಾರಿಗೆ ಟ್ವಿಟ್ ಮಾಡಿದ್ದಾರೆ.
ಡಾ. ಎಸ್. ಜೈಶಂಕರ್ ಹೆಸರಿನಲ್ಲಿ ಖಾತೆ ಹೊಂದಿರುವ ಅವರು, 66.6 ಸಾವಿರ ಫಾಲೋವರ್ಗಳನ್ನು ಹೊಂದಿದ್ದಾರೆ. ಸಚಿವನಾಗಿರುವುದಕ್ಕೆ ತನಗೆ ಅಭಿನಂದನೆಗಳನ್ನು ತಿಳಿಸಿರುವ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿರುವ ಅವರು, ಸುಷ್ಮಾ ಸ್ವರಾಜ್ ಅವರ ಹೆಜ್ಜೆ ಗುರುತುಗಳನ್ನೇ ಅನುಸರಿಸುವ ಭರವಸೆಯನ್ನು ನೀಡಿದ್ದಾರೆ.
“ಅಭಿನಂದನೆ ತಿಳಿಸಿದ ನಿಮಗೆಲ್ಲರಿಗೂ ಧನ್ಯವಾದ. ಹೊಸ ಜವಾಬ್ದಾರಿಯಿಂದ ಗೌರವಾನ್ವಿತನಾಗಿದ್ದೇನೆ. ಸುಷ್ಮಾ ಜೀ ಅವರ ಹೆಜ್ಜೆ ಗುರುತು ಅನುಸರಿಲು ಹೆಮ್ಮೆ ಇದೆ” ಎಂದಿದ್ದಾರೆ.
My first tweet.
Thank you all for the best wishes!
Honoured to be given this responsibility.
Proud to follow on the footsteps of @SushmaSwaraj ji— Dr. S. Jaishankar (@DrSJaishankar) June 1, 2019
We at Team @MEAIndia continue to be at your service 24×7
Happy to be leading the effort with my colleague MoS Muraleedharan ji @VMBJP
— Dr. S. Jaishankar (@DrSJaishankar) June 1, 2019
ಚೀನಾ, ಅಮೆರಿಕಾ ಮತ್ತು ಪಾಕಿಸ್ಥಾನದೊಂದಿಗಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ವ್ಯಾಪಕವಾದ ಅನುಭವ ಹೊಂದಿರುವ ವೃತ್ತಿಪರ ರಾಜತಾಂತ್ರಿಕನಾಗಿರುವ ಇವರು, ಭದ್ರತೆಯ ಮೇಲಿನ ಸಂಪುಟ ಸಮಿತಿಯ ಪ್ರಬಲ ಮುಖವಾಗಿ ಮಾರ್ಪಟ್ಟಿದ್ದಾರೆ. ಮಾಜಿ ವಿದೇಶಾಂಗ ಕಾರ್ಯದರ್ಶಿಯಾಗಿರುವ ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಚಿವ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.