ನವದೆಹಲಿ: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಮಂಡಳಿ (ಡಿಆರ್ಡಿಓ) ಸೋಮವಾರ ಅತ್ಯಂತ ಯಶಸ್ವಿಯಾಗಿ ಮೇಲ್ಮೈನಿಂದ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಆಕಾಶ್-1ಎಸ್ ಅನ್ನು ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಡಿಸಿದೆ.
ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಕಳೆದ ಎರಡು ದಿನಗಳಲ್ಲಿ ಇದು ಎರಡನೆಯ ಯಶಸ್ವಿ ಕ್ಷಿಪಣಿ ಪರೀಕ್ಷೆಯಾಗಿದೆ.
ಮೇಲ್ಮೈಯಿಂದ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಆಕಾಶ್-1ಎಸ್ ಅನ್ನು ಡಿಆರ್ಡಿಓ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಕಳೆದ ಎರಡು ದಿನಗಳಲ್ಲಿ ಇದು ಎರಡನೆಯ ಯಶಸ್ವಿ ಕ್ಷಿಪಣಿ ಪರೀಕ್ಷೆಯಾಗಿದೆ. ಇದು ಸ್ಥಳೀಯ ಅನ್ವೇಷಿಗೆ ಅಳವಡಿಸಲಾದ ಕ್ಷಿಪಣಿಗಳ ಒಂದು ಹೊಸ ಆವೃತ್ತಿಯಾಗಿದೆ.
DRDO today successfully test fired the Akash-1S surface to air defence missile system. This is the second successful test of the missile in last two days. This is a new version of the missile fitted with an indigenous seeker. pic.twitter.com/KK6Ig8XoK7
— ANI (@ANI) May 27, 2019
ಡಿಆರ್ಡಿಓ ಈ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಫೈಟರ್ ಜೆಟ್, ಕ್ರೂಸ್ ಮಿಸೈಲ್ ಮತ್ತು ವಾಯುನಿಂದ ಮೇಲ್ಮೈ ಕ್ಷಿಪಣಿ, ಖಂಡಾಂತರ ಕ್ಷಿಪಣಿ ಮುಂತಾದ ವಾಯು ಟಾರ್ಗೆಟ್ಗಳನ್ನು ಹತ್ತಿಕ್ಕುವ ಸಾಮರ್ಥ್ಯ ಇದಕ್ಕಿದೆ.
ಆಕಾಶ್ ಮೇಲ್ಮೈಯಿಂದ ವಾಯು ಕ್ಷಿಪಣಿಯನ್ನು ಶತ್ರುಗಳ ವಿಮಾನ ಮತ್ತು 18 ರಿಂದ 30 ಕಿಮೀ ದೂರದಲ್ಲಿನ ಶತ್ರುಗಳ ಕ್ಷಿಪಣಿಗಳನ್ನು ಪ್ರತಿಬಂಧಿಸಲು ವಿನ್ಯಾಸಗೊಳಿಸಲಾಗಿದೆ.
ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಈಗಾಗಲೇ ವಾಯುಸೇನೆಯ ನೆಲೆಗಳಾದ ಗ್ವಾಲಿಯರ್, ಹಶಿಮಾರಾ, ತೇಜ್ಪುರ್, ಜೋರ್ಹತ್ ಮತ್ತು ಪುಣೆಗಳಲ್ಲಿ 2013 ರಿಂದ ನಿಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.