ನವದೆಹಲಿ: ಪತಂಜಲಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ‘UNSDG ಆರೋಗ್ಯ ಕಾಳಜಿಯ 10 ಪ್ರಭಾವ ಶಾಲಿ ವ್ಯಕ್ತಿಗಳು’ ಪ್ರಶಸ್ತಿಯನ್ನು ತಮ್ಮ ಸಂಸ್ಥೆಯ ಪರವಾಗಿ ಸ್ವೀಕಾರ ಮಾಡಿದ್ದಾರೆ.
ಜಿನೆವಾದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಟ್ವಿಟ್ ಮಾಡಿರುವ ಆಚಾರ್ಯ ಬಾಲಕೃಷ್ಣ ಅವರು, ಪ್ರತಿಷ್ಠಿತ ಪ್ರಶಸ್ತಿ ಪಡೆದು ವಿನೀತನಾಗಿದ್ದೇನೆ ಎಂದಿದ್ದಾರೆ. ಅಲ್ಲದೇ, ಜಾಗತಿಕ ಮಟ್ಟದಲ್ಲಿ ಯೋಗ ಮತ್ತು ಆಯುರ್ವೇದವನ್ನು ಮುನ್ನಲೆಗೆ ತರಲು ಶ್ರಮಿಸಿದ ಎಲ್ಲರಿಗೂ ಈ ಪ್ರಶಸ್ತಿಯನ್ನು ಅರ್ಪಣೆ ಮಾಡಿದ್ದಾರೆ.
“ಇಡೀ ಜಗತ್ತಿನ ಮುಂದೆ ಭಾರತದ ಸಂಸ್ಕೃತಿಯಾದ ಯೋಗ ಮತ್ತು ಆಯುರ್ವೇದವನ್ನು ಪ್ರತಿನಿಧಿಸಿದ್ದಕ್ಕೆ ನಾನು ಅತೀವ ಹೆಮ್ಮೆ ಪಟ್ಟುಕೊಂಡಿದ್ದೇನೆ. ಜಗತ್ತು ಈಗ ಯೋಗ ಮತ್ತು ಆಯುರ್ವೇದದವನ್ನು ಅತ್ಯಂತ ಕಾಳಜಿಯಿಂದ ಆಲಿಸುತ್ತದೆ ಮತ್ತು ಸ್ವೀಕರಿಸುತ್ತದೆ. ನನ್ನ ಧ್ವನಿಯನ್ನು ವಿಶ್ವಸಂಸ್ಥೆಯಲ್ಲಿ ಎತ್ತಲು ಅನುವು ಮಾಡಿಕೊಟ್ಟ ಸಂತರಿಗೆ ಋಣಿಯಾಗಿದ್ದೇನೆ” ಎಂದಿದ್ದಾರೆ.
ಈ ಸಾಧನೆಯ ಬಗ್ಗೆ ಮಾತನಾಡಿರುವ ಪತಂಜಲಿ ಮುಖ್ಯಸ್ಥ, ಯೋಗಗುರು ರಾಮ್ ದೇವ್ ಬಾಬಾ ಅವರು, “ಆಚಾರ್ಯ ಬಾಲಕೃಷ್ಣ ಅವರನ್ನು ಭಾರತದ ಪ್ರತಿನಿಧಿಯಾಗಿ ಆಹ್ವಾನಿಸಲಾಗಿದೆ. ಜಾಗತಿಕ ಆರೋಗ್ಯ ವಿಷಯದಲ್ಲಿ, ಯೋಗ, ಆಯುರ್ವೇದ, ಸಾಂಪ್ರದಾಯಿಕ ಆರೋಗ್ಯ ವಿಧಾನಗಳ ಮೂಲಕ ಹೇಗೆ ಜೀವನಶೈಲಿ ಸಮಸ್ಯೆಗಳನ್ನು ಗುಣಪಡಿಸಬಹುದು ಎಂಬುದರತ್ತ ಪತಂಜಲಿ ಕೊಡುಗೆಗಳನ್ನು ನೀಡಿದೆ. ಇದೇ ಕಾರಣಕ್ಕೆ ಆಚಾರ್ಯ ಅವರಿಗೆ UNSDG ಪ್ರಶಸ್ತಿ ದೊರೆತಿದೆ. ಇದು ನಮಗೆ ಹೆಮ್ಮೆ ತಂದಿದೆ” ಎಂದಿದ್ದಾರೆ.
I am humbled to receive the prestigious @UNSDGHealth Award to ten most influential people in Healthcare on behalf of Patanjali Group of Institutions. This award is dedicated to all who contributed to mainstream Yoga and Ayurveda at the Global Level. pic.twitter.com/FY8AYlDB29
— Acharya Balkrishna (@Ach_Balkrishna) May 26, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.