2019 ರಲ್ಲಿ ನಡೆದ 17 ನೇ ಲೋಕಸಭಾ ಚುನಾವಣೆಯು ಹಲವು ವಿಶೇಷತೆಗಳಿಂದ ಮಹತ್ವ ಪಡೆದಿದೆ. ಚುನಾವಣಾ ಸಮಾವೇಶಗಳು, ಸೇರಿದ್ದ ಜನಸಾಗರ, ಮತ ಚಲಾವಣೆ, ಚುನಾವಣಾ ಫಲಿತಾಂಶ ಸೇರಿದಂತೆ ಹತ್ತು ಹಲವು ವಿಶೇಷತೆಗಳನ್ನು ಈ ಬಾರಿ ನೋಡಿದ್ದೇವೆ. ಅದರಲ್ಲಿ ಕೆಲವು ಹೀಗಿವೆ.
⭕ ನೆಹರು ಇಂದಿರಾ ನಂತರ ಎರಡನೇ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ನರೇಂದ್ರ ಮೋದಿ ನೇತೃತ್ವದ ಸರ್ಕಾರ.
⭕ 17ನೇ ಲೋಕಸಭೆಯಲ್ಲಿ ಈವರೆಗಿನ ಅತಿ ಹೆಚ್ಚು ಅಂದರೆ 78 ಮಹಿಳಾ ಸಂಸತ್ ಸದಸ್ಯರಿದ್ದಾರೆ. ಕಳೆದ ಬಾರಿ 65 ಜನ ಮಹಿಳಾ ಸಂಸತ್ ಸದಸ್ಯರು ಇದ್ದರು.
⭕ ಕಳೆದ ಬಾರಿ ಉತ್ತರಪ್ರದೇಶದಿಂದ ಯಾವೊಬ್ಬ ಮುಸ್ಲಿಂ ಸದಸ್ಯರು ಆಯ್ಕೆಯಾಗಿರಲಿಲ್ಲ ಈ ಬಾರಿ ಉತ್ತರ ಪ್ರದೇಶದಿಂದ 6 ಮುಸ್ಲಿಮರು ಸೇರಿ ಒಟ್ಟು 27 ಮುಸ್ಲಿಂ ಸದಸ್ಯರಿದ್ದಾರೆ. ಕಳೆದ ಬಾರಿ 23 ಮುಸ್ಲಿಂ ಸದಸ್ಯರಿದ್ದರು.
⭕ 4 ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಗಳಿಸಿರುವ 18 ಸಂಸತ್ ಸದಸ್ಯರಲ್ಲಿ 17 ಜನ ಬಿಜೆಪಿ ಸದಸ್ಯರು. ಇನ್ನೊಬ್ಬರು ರಾಹುಲ್ ಗಾಂಧಿ. ಅದರಲ್ಲಿ 10 ಮಂದಿ ಐದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ ಅವರೆಲ್ಲರು ಬಿಜೆಪಿ ಸದಸ್ಯರು.
⭕ ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನ 9 ಮಾಜಿ ಮುಖ್ಯಮಂತ್ರಿಗಳು ಸೇರಿ ಒಟ್ಟು 12 ಜನ ಮಾಜಿ ಮುಖ್ಯಮಂತ್ರಿಗಳು ಪರಾಭವಗೊಂಡಿದ್ದಾರೆ.
⭕ ಎನ್.ಡಿ.ಎ. 354 ಸದಸ್ಯರಲ್ಲಿ ಏಕೈಕ ಮುಸ್ಲಿಂ ಸಂಸತ್ ಸದಸ್ಯ ಜೆಡಿಯುನ ಕೈಸರ್ ಅಲಿ.
⭕ ದೇಶದಲ್ಲಿ ಚಲಾವಣೆಯಾದ ಒಟ್ಟು NOTA ಮತಗಳು 60 ಲಕ್ಷ ಅದರಲ್ಲಿ ಅತ್ಯಂತ ಹೆಚ್ಚು ಬಿಹಾರದಲ್ಲಿ 8.17 ಲಕ್ಷ ಕರ್ನಾಟಕದಲ್ಲಿ 2.47 ಲಕ್ಷ NOTA ಮತಗಳು ಬಿದ್ದಿವೆ. ಒಟ್ಟಾರೆ 1.1% NOTA ಮತಗಳು ಬಿದ್ದಿವೆ. ಕರ್ನಾಟಕದ ಉತ್ತರ ಕನ್ನಡ ಲೋಕಸಭಾ ಕ್ಷೆತ್ರದಲ್ಲಿ ಅತಿ ಹೆಚ್ಚು ಎಂದರೆ 16017, 1.39% NOTA ಮತಗಳು ಬಿದ್ದಿವೆ. ದಾವಣಗೆರೆಯಲ್ಲಿ ಅತ್ಯಂತ ಕಡಿಮೆ 3098, 0.26% ಮತಗಳು NOTAಗೆ ಬಿದ್ದಿವೆ.
⭕ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳು ಬರುವ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು 171 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
⭕ ಕರ್ನಾಟಕದಿಂದ ಸಂಸತ್ಗೆ ಆಯ್ಕೆಯಾದ ಮೊದಲ ಪಕ್ಷೇತರ ಮಹಿಳಾ ಸದಸ್ಯೆ ಶ್ರೀಮತಿ ಸುಮಲತಾ.
⭕ ಕರ್ನಾಟಕದ ಲೋಕಸಭಾ ಇತಿಹಾಸದಲ್ಲಿ ಬಿಜೆಪಿ ಮೊದಲ ಬಾರಿಗೆ 51% ಮತಗಳನ್ನು ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.