ನವದೆಹಲಿ : ಜಗತ್ತಿನ ಮೂರು ಪ್ರಮುಖ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಲ್ಲಿ ಒಂದಾದ ಫಿಚ್, ಸಂಸತ್ತು ಚುನಾವಣಾ ಫಲಿತಾಂಶದ ನಂತರ ನರೇಂದ್ರ ಮೋದಿಯವರ ವಿಜಯವನ್ನು ಶ್ಲಾಘಿಸಿದೆ. ಇದರಿಂದ ಭಾರತದಲ್ಲಿ ಉದ್ಯೋಗ, ವ್ಯವಹಾರ ಮತ್ತು ಖಾಸಗಿ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ ಎಂದಿದೆ.
ಫಿಚ್ ಸಂಸ್ಥೆಯ ಏಷ್ಯಾ ಫೆಸಿಫಿಕ್ ವ್ಯವಹಾರಗಳ ನಿರ್ದೇಶಕ ಥಾಮಸ್ ರೂಕ್ ಮಾಕರ್ ಭಾರತೀಯ ಜನತಾ ಪಕ್ಷದ ಈ ದಿಗ್ವಿಜಯ ಒಂದು ಸ್ಥಿರ ಸರಕಾರವನ್ನು ನೀಡಲಿದೆ ಎಂದಿದ್ದಾರೆ. ಅಲ್ಲದೆ ಫಿಚ್ ಸಂಸ್ಥೆ ಮುಂಬರುವ ದಿನಗಳಲ್ಲಿ ಮೋದಿಯವರ ಹೊಸ ಸರ್ಕಾರ ಹೇಗೆ ದೇಶದ ಆದಾಯವನ್ನು, ಹಿಂದಿನ ಸರ್ಕಾರದ ಯೋಜನೆಗಳನ್ನು ಹಾಗೂ ಜಿಡಿಪಿಯನ್ನು ನಿರ್ವಹಿಸಲಿದೆ ಎಂಬುದನ್ನು ಗಮನಿಸಲಿದೆ ಎಂದರು.
ರೂಕ್ ಮಾಕರ್ ಹೀಗೆ ಹೇಳಿರುವುದು ಭಾರತವನ್ನು ಜಗತ್ತು ಎಷ್ಟು ಗಮನಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ನರೇಂದ್ರ ಮೋದಿಯವರು ಎರಡನೆಯ ಅವಧಿಯಲ್ಲಿ ವಿತ್ತೀಯ ಕೊರತೆ ಮತ್ತು ಆದಾಯ ನಿರ್ವಹಣೆಗೆ ಹೆಚ್ಚು ದಕ್ಷ ಹಾಗೂ ಪರಿಣಾಮಕಾರಿ ಯೋಜನೆಗಳನ್ನು ಕೈಗೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.