1990ರ ಆರಂಭದಲ್ಲಿ ಎಸ್. ವಿಶ್ವನಾಥ್ ಮತ್ತು ಅವರ ಪತ್ನಿ ಚಿತ್ರ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದರು, ಪರಿಸರ ಸ್ನೇಹಿ ವಿಧಾನದಲ್ಲೇ ಮನೆಯನ್ನು ಸಜ್ಜುಗೊಳಿಸುವುದು ಅವರ ಬಯಕೆಯಾಗಿತ್ತು. ಸಿಲಿಕಾನ್ ನಗರ ಸೇರಿದಂತೆ ವಿಶ್ವ ಎದುರಿಸುತ್ತಿರುವ ಜಲಕ್ಷಾಮದ ಬಗ್ಗೆ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. ನೀರಿನ ಸಂರಕ್ಷಣೆಗೆ ಒತ್ತು ನೀಡುವುದು ಅವರ ಆದ್ಯತೆಯಾಗಿತ್ತು.
ಸಿವಿಲ್ ಎಂಜಿನಿಯರ್ ಆಗಿರುವ ವಿಶ್ವನಾಥ್ ಮತ್ತು ಆರ್ಕಿಟೆಕ್ಟ್ ಆಗಿರುವ ಚಿತ್ರಾ ಅವರಿಗೆ ಕಡಿಮೆ ವಿದ್ಯುತ್, ಕಡಿಮೆ ನೀರು ಮತ್ತು ಕಡಿಮೆ ಪರಿಕರಗಳ ಅಗತ್ಯವಿರುವಂತಹ ಮನೆಯನ್ನು ತಯಾರು ಮಾಡುವುದು ಅವರ ಕನಸಾಗಿತ್ತು. ಅವರ ಕನಸಿನಂತೆಯೇ ವಿದ್ಯಾರಣ್ಯಪುರದಲ್ಲಿ ಕೆಲವೇ ತಿಂಗಳಲ್ಲಿ ಸಂಕುಚಿತಗೊಳಿಸಿದ, ಸ್ಥಿರ ಅರ್ಥ್ ಬ್ಲಾಕ್ ಬಳಸಿ ಮನೆ ನಿರ್ಮಾಣ ಮಾಡಲಾಯಿತು. ಗಾಳಿ, ಬೆಳಕು ಅತ್ಯಂತ ಪರಿಶುದ್ಧವಾಗಿ ಮನೆಯನ್ನು ತಲುಪುವಂತೆ ಮನೆಯನ್ನು ವಿನ್ಯಾಸಗೊಳಿಸಲಾಯಿತು.
ಇವರ ಮನೆ ಹೊರಗಿನಿಂದ ಸಾಮಾನ್ಯ ಮನೆಯಂತೆ ಕಂಡರೂ, ಅದರೊಳಗೆ ಯಾವುದೇ ಫ್ಯಾನ್, ಎಸಿಗಳಿಲ್ಲ. ಒಂದೇ ಒಂದು ಟೇಬಲ್ ಫ್ಯಾನ್ ಇದೆ. ಅದು ಕೂಡ ನಾಯಿಗಾಗಿ ಮೀಸಲಿಡಲಾಗಿದೆ. ಮನೆಯ ಮೇಲ್ಮೈ ಅನ್ನು ಕೃಷಿ ತ್ಯಾಜ್ಯಗಳಿಂದ ಮುಚ್ಚಿರುವುದರಿಂದ ಅದು ಬಿಸಿಲು ಮತ್ತು ಸೆಖೆಯನ್ನು ನಿಯಂತ್ರಣ ಮಾಡುತ್ತದೆ. ಹೀಗಾಗಿ ಅವರಿಗೆ ಫ್ಯಾನ್ ಅಗತ್ಯ ಬೀಳುವುದಿಲ್ಲ. ಗ್ರೌಂಡ್ ಲೆವೆಲ್ನಲ್ಲಿರುವ ಬೇಸ್ಮೆಂಟ್ ವಿಂಡೋಗಳು ಕೂಡ ಅವರ ಮನೆಯನ್ನು ತಂಪಾಗಿರಿಸುತ್ತವೆ.
ಈ ದಂಪತಿ ಪರಿಸರ ಸ್ನೇಹಿಯಾದ ಮನೆಯನ್ನು ನಿರ್ಮಾಣ ಮಾಡಿದ್ದು ಮಾತ್ರವಲ್ಲ, ಪ್ರತಿ ವರ್ಷ ಮಳೆನೀರು ಕೊಯ್ಲು ಮೂಲಕ ಒಂದು ಲಕ್ಷ ಲೀಟರ್ ಮಳೆನೀರು ಉಳಿತಾಯ ಮಾಡಿದರು. ರೂಫ್ ಟಾಪ್ ನೀರನ್ನು ಮಳೆ ನೀರು ಕೊಯ್ಲು ವ್ಯವಸ್ಥೆಯ ಮೂಲಕ ಸಂರಕ್ಷಣೆ ಮಾಡುವಲ್ಲಿ ಇವರು ಯಶಸ್ವಿಯಾದರು. ಸ್ಟೇರ್ ಕೇಸ್ ರೂಮ್ನ ಕ್ಯಾಚ್ಮೆಂಟ್ ಏರಿಯಾ ಮೂಲಕ ಕುಡಿಯಲು ಮತ್ತು ಅಡುಗೆಗೆ ನೀರು ಬರುವಂತೆ ಮಾಡಿದರು. ಸಂರಕ್ಷಣೆ ಮಾಡಿದ ಸುಮಾರು 1,000 ಲೀಟರ್ ನೀರನ್ನು ಸ್ನಾನ ಮತ್ತು ಬಟ್ಟೆ ಒಗೆಯಲು ಇವರು ಬಳಕೆ ಮಾಡುತ್ತಾರೆ.
ಬೆಂಗಳೂರಿನ ಬಹುತೇಕ ಮನೆಗಳಲ್ಲಿ ಇರುವಂತೆ ಇವರ ಮನೆಯಲ್ಲೂ ಅಂಡರ್ ಗ್ರೌಂಡ್ ಟ್ಯಾಂಕ್ ಇದ್ದು, ಅದರಲ್ಲಿನ ನೀರನ್ನು ಇವರು ಇತರ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ರಿಚಾರ್ಜ್ ವೆಲ್ ಕೂಡ ಅವರ ಮನೆಯಲ್ಲಿ ಇದ್ದು, ಸ್ಟಾರ್ಮ್ ವಾಟರ್ ಡ್ರೈನ್ಗೆ ಕನೆಕ್ಟ್ ಆಗಿದೆ, ವಾರ್ಷಿಕ ಇದು 1 ಮಿಲಿಯನ್ ಲೀಟರ್ ನೀರನ್ನು ನೆಲ ಮತ್ತು ಸುತ್ತಲಿನ ಪ್ರದೇಶದಿಂದ ರಿಚಾರ್ಜ್ ಮಾಡುತ್ತದೆ.
“ಇದು ಮಳೆನೀರನ್ನು ನೆಲದಿಂದ ಸಂಗ್ರಹಿಸುತ್ತದೆ ಮತ್ತು ಸಂಪ್ ಟ್ಯಾಂಕ್ಗಳಿಂದ ತುಂಬಿ ಹರಿಯುತ್ತದೆ. ನೆಲದಲ್ಲಿನ ಪದರ ಮತ್ತು ಗ್ರೇನ್ ನೈಸರ್ಗಿಕ ಫಿಲ್ಟರ್ ಗಳಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ಖಾಲಿಯಾದ ಭೂಗರ್ಭದ ನೀರಿನ ಕೋಷ್ಟಕಗಳನ್ನು ಉಳಿಸುತ್ತವೆ “ಎಂದು ವಿಶ್ವನಾಥ್ ಹೇಳುತ್ತಾರೆ.
ಮಳೆ ನೀರು ಕೊಯ್ಲಿಯಿಂದ ಈ ದಂಪತಿಗಳ ನೀರಿನ ಬಿಲ್ ಕೂಡ ಕಡಿಮೆಯಾಗಿದೆ. 8-10 ತಿಂಗಳಿನಿಂದ ನಮ್ಮ ನೀರಿನ ಬಿಲ್ ಶೂನ್ಯ ಎಂದು ಈ ದಂಪತಿ ಹೇಳುತ್ತಾರೆ.
ಅಷ್ಟು ಮಾತ್ರವಲ್ಲದೇ ಈ ದಂಪತಿಯ ಮನೆಯಲ್ಲಿ ಎರಡು ಕಾಂಪೋಸ್ಟಿಕ್ ಟಾಯ್ಲೆಟ್ ಇದೆ. ಇದಕ್ಕೆ ನೀರಿನ ಅಗತ್ಯವಿಲ್ಲ. ಪ್ರತಿ ಬಳಕೆಯ ಬಳಿಕ ಉಂಟಾಗುವ ತ್ಯಾಜ್ಯವು ಇಲ್ಲಿ ಬೂದಿಯಾಗುತ್ತದೆ, ಬಳಿಕ ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತದೆ. ಇದನ್ನು ಇವರು ತಮ್ಮ ರೂಫ್ ಟಾಪ್ ಮೇಲಿನ ಗಾರ್ಡನ್ಗೆ ಬಳಕೆ ಮಾಡುತ್ತಾರೆ.
ಇವರ ಗಾರ್ಡನ್ನಲ್ಲಿ ಬಟಾಟೆ, ಹಲವಾರು ತರಕಾರಿ, ಭತ್ತ, ಸಿರಿಧಾನ್ಯ, ಹಣ್ಣ ಹಂಪಲುಗಳು ಇವೆ. ಇವೆಲ್ಲವನ್ನೂ ಸಾವಯವ ಮಾದರಿಯಲ್ಲೇ ಬೆಳೆಸಲಾಗುತ್ತದೆ. ಸ್ನಾನ ಮಾಡಿದ ಮತ್ತು ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿದ ನೀರುಗಳನ್ನು ಮಾತ್ರ ಈ ಗಿಡಗಳಿಗೆ ಅವರು ಬಳಕೆ ಮಾಡುತ್ತಾರೆ.
ಎಲ್ಲಾ ರೀತಿಯ ಚಿಟ್ಟೆಗಳು, ಕೀಟಗಳನ್ನು ಇವರ ಗಾರ್ಡನ್ ಆಕರ್ಷಿಸುತ್ತದೆ. ಇಡೀ ಮನೆಯನ್ನೇ ಕೂಲ್ ಆಗಿಡಲು ಈ ಗಾರ್ಡನ್ ಸಹಕಾರಿಯಾಗಿದೆ ಎನ್ನುತ್ತಾರೆ ವಿಶ್ವನಾಥ್.
ಅಡುಗೆ ಮನೆಯಲ್ಲಿನ ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿಸುವ ಯಂತ್ರವೂ ಇವರ ಬಳಿ ಇದೆ. ಹೇಳಬೇಕೆಂದರೆ ಇವರ ಮನೆ ಸಂಪೂರ್ಣ ಪರಿಸರ ಸ್ನೇಹಿಯಾಗಿದೆ.
ಸಾಮಾನ್ಯ ಮನೆಗಳನ್ನು ನಿರ್ಮಾಣ ಮಾಡುವುದಕ್ಕೆ ಶೇ. 10 ರಷ್ಟು ಕಡಿಮೆ ದರದಲ್ಲಿ ಪರಿಸರ ಸ್ನೇಹಿ ಮನೆಯನ್ನು ನಿರ್ಮಾಣ ಮಾಡಬಹುದು, ಅಷ್ಟೇ ಅಲ್ಲ ಮನೆ ನಿರ್ವಹಣೆ ವೆಚ್ಚವೂ ಶೇ. 75 ರಷ್ಟು ಕಡಿಮೆಯಾಗುತ್ತದೆ ಎಂದು ಈ ದಂಪತಿ ಹೇಳುತ್ತಾರೆ.
ನಮ್ಮ ಭವಿಷ್ಯದ ದೃಷ್ಟಿಯಿಂದ ಪರಿಸರ ಸಂರಕ್ಷಣೆ ಅನಿವಾರ್ಯವಾಗಿದೆ. ಬೆಂಗಳೂರಿನ ಈ ದಂಪತಿ ನಮ್ಮ ಭವಿಷ್ಯವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರಿಗೂ ಮಾದಿರಿ ಎನಿಸುವಂತಹ ಕಾರ್ಯವನ್ನೇ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.