ಕಾಸರಗೋಡು: ಅಕ್ರಮ ಮತದಾನ ನಡೆದ ಹಿನ್ನಲೆಯಲ್ಲಿ ಆಂಧ್ರಪ್ರದೇಶದ 5 ಮತಗಟ್ಟೆಗಳಲ್ಲಿ ಮತ್ತು ಕೇರಳದ ಎರಡು ಮತಗಟ್ಟೆಗಳಲ್ಲಿ ಮೇ 19 ರಂದು ಮರು ಮತದಾನವನ್ನು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಕಾಸರಗೋಡಿನ ಮೂರು ಮತಗಟ್ಟೆಗಳಲ್ಲಿ ಮತ್ತು ಕಣ್ಣೂರು ಲೋಕಸಭಾ ಕ್ಷೇತ್ರಗಳ 1 ಮತಗಟ್ಟೆಯಲ್ಲಿ ಬೋಗಸ್ ವೋಟಿಂಗ್ ನಡೆದ ಹಿನ್ನಲೆಯಲ್ಲಿ ಅಲ್ಲಿ ಮೇ 19ರಂದು ಮರು ಮತದಾನ ನಡೆಸಲು ನಿರ್ಧರಿಸಲಾಗಿದೆ.
ಚುನಾವಣಾ ಆಯೋಗವು, ಆಂಧ್ರಪ್ರದೇಶದ ಚಂದ್ರಗಿರಿ ವಿಧಾನಸಭಾ ಕ್ಷೇತ್ರ ಮತ್ತು ಚಿತ್ತೂರು ಸಂಸದೀಯ ಕ್ಷೇತ್ರದ 5 ಮತಗಟ್ಟೆಗಳಲ್ಲಿ ನಡೆದ ಮತದಾನವನ್ನು ಅಮಾನ್ಯ ಎಂದು ಪರಿಗಣಿಸಿದೆ.
ಈ ಮತಗಟ್ಟೆಗಳಲ್ಲಿ ಮೂರು ಮಹಿಳೆಯರು ಮತ್ತು ಓರ್ವ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬಾರಿ ಮತದಾನ ಮಾಡುವುದು ವೀಡಿಯೋಗಳಲ್ಲಿ ರೆಕಾರ್ಡ್ ಆಗಿತ್ತು. ಸುಮಾರು 13 ಮಂದಿ ಈ ಪ್ರಕರಣದಲ್ಲಿ ತಪ್ಪಿತಸ್ಥರು ಎಂಬುದು ತಿಳಿದು ಬಂದಿತ್ತು. ಸಿಪಿಐ-ಎಂ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಾರ್ಯಕರ್ತರು ತಪ್ಪಿತಸ್ಥರಲ್ಲಿ ಪ್ರಮುಖರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.