ನವದೆಹಲಿ: ಭಾರತದ ಜಿಎಸ್ ಲಕ್ಷ್ಮೀ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ಮ್ಯಾಚ್ ರೆಫ್ರಿ ಸಮಿತಿಗೆ ನೇಮಕಗೊಂಡಿದ್ದಾರೆ. ಈ ಮೂಲಕ ಮ್ಯಾಚ್ ರೆಫ್ರಿ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷರ ಪಂದ್ಯಗಳಲ್ಲೂ ರೆಫ್ರಿ ಆಗಿ ಕಾರ್ಯನಿರ್ವಹಣೆ ಮಾಡುವ ಮಾನ್ಯತೆಯೂ ಇವರಿಗೆ ದೊರೆತಿದೆ.
ಆಂಧ್ರಪ್ರದೇಶ ಮೂಲದವರಾದ 51 ವರ್ಷದ ಲಕ್ಷ್ಮಿ ಅವರು ಭಾರತದ ಪರ ಕ್ರಿಕೆಟ್ ಆಡಿದ ಅನುಭವ ಹೊಂದಿರುವವರು. ಅಂಪೈರ್ ಆಗಿಯೂ ಕಾರ್ಯನಿರ್ವಹಿಸಿದ್ದರು. 2008-09ರಲ್ಲಿ ದೇಸಿ ಟೂರ್ನಿಗಳಲ್ಲಿ ಮ್ಯಾಚ್ ರೆಫ್ರಿಯಾಗಿದ್ದ ಅವರು, 3 ಮಹಿಳಾ ಏಕದಿನ ಹಾಗೂ 3 ಮಹಿಳಾ ಟಿ-20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ಮ್ಯಾಚ್ ರೆಫ್ರಿ ಸಮಿತಿಗೆ ಆಯ್ಕೆಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಲಕ್ಷ್ಮೀ, “‘ಐಸಿಸಿ ರೆಫ್ರಿ ಸಮಿತಿಗೆ ಸೇರ್ಪಡೆಗೊಂಡಿದ್ದಕ್ಕೆ ಬಹಳ ಹೆಮ್ಮೆಯಾಗುತ್ತಿದೆ. ಕ್ರಿಕೆಟರ್ ಆಗಿ, ಮ್ಯಾಚ್ ರೆಫ್ರಿಯಾಗಿ ಹಲವು ವರ್ಷಗಳ ಅನುಭವವಿದೆ. ಈ ಅನುಭವವನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ಸಮರ್ಥವಾಗಿ ಬಳಕೆ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ.
ಲಕ್ಷ್ಮಿ ಅವರ ನೇಮಕದ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಐಸಿಸಿಯ ಅಂಪೈರ್ ಹಾಗೂ ರೆಫ್ರಿಗಳ ವಿಭಾಗದ ಹಿರಿಯ ವ್ಯವಸ್ಥಾಪಕ ಏಡ್ರಿಯಾನ್ ಗ್ರಿಫಿತ್ ಅವರು, ” ರೆಫ್ರಿ ಸಮಿತಿಗೆ ಲಕ್ಷ್ಮೀ ಅವರನ್ನು ಸ್ವಾಗತಿಸುತ್ತೇನೆ. ಅವರು ತಮ್ಮ ಪ್ರತಿಭೆ, ಸಾಮರ್ಥ್ಯದಿಂದ ಈ ಮಟ್ಟಕ್ಕೇರಿದ್ದಾರೆ. ಅವರು ಹಲವಾರು ಮಂದಿ ಮಹಿಳೆಯರಿಗೆ ಲಕ್ಷ್ಮಿ ಸ್ಫೂರ್ತಿಯಾಗಲಿದ್ದಾರೆ’ ಎಂದು ಹೇಳಿದ್ದಾರೆ.
ICC welcomes first female match referee and boosts numbers on development panel – https://t.co/LELHYPqmUI via @ICC
— ICC Media (@ICCMediaComms) May 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.