ನವದೆಹಲಿ: ಭಾರತ ಇಡೀ ಜಗತ್ತಿನೊಂದಿಗೆ ತನ್ನ ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸಿಕೊಳ್ಳುತ್ತಿದೆ. ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದೇ ಸಲುವಾಗಿ, ಭಾರತ ಮಂಗೋಲಿಯಾಗೆ ತಳಮಟ್ಟದ ರಿಫೈನರಿ ಸ್ಥಾಪನೆಗಾಗಿ 1 ಬಿಲಿಯನ್ ಡಾಲರ್ ನೆರವನ್ನು ನೀಡಿದೆ.
ಮಂಗೋಲಿಯಾದ ಮೊತ್ತ ಮೊದಲ ರಿಫೈನರಿಯು ದೊರ್ನೊಗೊಬಿ ಪ್ರಾಂತ್ಯದ ಸೈನ್ಶಾದಿನಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ರಿಫೈನರಿಯು 1.5 MMTPA ಸಾಮರ್ಥ್ಯವನ್ನು ಇದು ಹೊಂದಿದೆ. ಎಕ್ಸಿಮ್ ಬ್ಯಾಂಕ್ ಫಂಡಿಂಗ್ ಮೂಲಕ ಇದನ್ನು ಸ್ಥಾಪನೆ ಮಾಡಲಾಗಿದೆ.
ಈ ರಿಫೈನರಿಯ ಸ್ಥಾಪನೆಯಿಂದಾಗಿ ರಷ್ಯಾ ಇಂಧನದ ಮೇಲಿನ ಮಂಗೋಲಿಯಾ ಅವಲಂಬನೆ ತಗ್ಗಲಿದೆ ಎಂದು ಹೇಳಲಾಗಿದೆ.
Sharing our resources with our strategic partner
India has extended a $ 1 bn Line of Credit to Mongolia to set up its first ever grass-root refinery in Sainshand, Dornogobi Province with a capacity of 1.5 MMTPA, implemented with Exim Bank funding. pic.twitter.com/lG6mruK8ZH
— Raveesh Kumar (@MEAIndia) May 14, 2019
“ಆಮದು ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಈ ರಿಫೈನರಿಯ ಸ್ಥಾಪನೆ ಒಂದು ಮಹತ್ವದ ಹೆಜ್ಜೆಯಾಗಿದೆ. ದೇಶಕ್ಕೆ ಇಂಧನ ಸುರಕ್ಷತೆಯನ್ನೂ ಒದಗಿಸಲಿದೆ” ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ.
2020ರ ವೇಳೆಗೆ ಈ ರಿಫೈನರಿ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ. ರಿಫೈನರಿಯನ್ನು ಈಗಿರುವ ನೆಟ್ವರ್ಕ್ಗಳಿಗೆ ಕನೆಕ್ಟ್ ಮಾಡಲು ಇಲ್ಲಿ ಭಾರತ 19 ಕಿಮೀ ಪವರ್ ಟ್ರಾನ್ಸ್ಮಿಶನ್ ಕಾರ್ಯದಲ್ಲಿ ತೊಡಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.