ಪ್ರಜಾಪ್ರಭುತ್ವದ ಅನ್ವಯ ಚುನಾಯಿತಗೊಂಡ ತನ್ನ ದೇಶದ ಪ್ರಧಾನಮಂತ್ರಿಯನ್ನು ‘ಪ್ರಧಾನ ವಿಭಜಕ’ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಕರೆದಿರುವುದನ್ನು ಆತ್ಮಾಭಿಮಾನ, ದೇಶಪ್ರೇಮ ಇರುವವರು ಒಪ್ಪಿಕೊಳ್ಳಲು ಸಾಧ್ಯವೇ? ಅಲ್ಪದೃಷ್ಟಿ, ದೇಶ ವಿರೋಧಿ, ಸ್ವಾರ್ಥ ತುಂಬಿಕೊಂಡ ಜನರು ಮಾತ್ರ ಇಂತಹ ಬರವಣಿಗೆಯನ್ನು ಸಂಭ್ರಮಿಸಲು ಸಾಧ್ಯ. ಆ ಲೇಖನವನ್ನು ಬರೆದ ಪತ್ರಕರ್ತನ ವಿಶ್ವಾಸಾರ್ಹತೆ ಇನ್ನೂ ಕೆಳ ಮಟ್ಟದಲ್ಲಿದೆ. ಭಯೋತ್ಪಾದಕ ರಾಷ್ಟ್ರ ಪಾಕಿಸ್ಥಾನದೊಂದಿಗೆ ಗಾಢವಾದ ಬಾಂಧವ್ಯವನ್ನು ಹೊಂದಿರುವ ಮುಸ್ಲಿಂ ವ್ಯಕ್ತಿ ಮೋದಿಯನ್ನು ವಿಭಜಕ ಎಂದಿದ್ದಾನೆ.
ನಮ್ಮ ಭಿನ್ನಾಭಿಪ್ರಾಯಗಳು ಮತ್ತು ಅಧಿಕಾರಕ್ಕಾಗಿನ ಆಸೆ ಬೇರೆ ವಿಷಯ. ಆದರೆ ನಮ್ಮ ದೇಶದ ಮುಖ್ಯಸ್ಥನನ್ನು ಅವಮಾನಿಸಿರುವ ಟೈಮ್ಸ್ ಕ್ರಮವನ್ನು ಯಾರೊಬ್ಬರೂ ನಿರ್ಲಕ್ಷ್ಯ ಮಾಡುವುದಿಲ್ಲ. ನರೇಂದ್ರ ಮೋದಿ ಬರುವುದಕ್ಕೆ ಮುನ್ನ ಭಾರತದಲ್ಲಿ ಯಾವುದೇ ವಿಭಜನೆ ಇರಲಿಲ್ಲವೇ? ಜಾತಿ, ಧರ್ಮ, ಜನಾಂಗದ ವಿಷಯದಲ್ಲಿ ಜನರ ನಡುವೆ ಘರ್ಷಣೆಗಳು ನಡೆದಿರಲಿಲ್ಲವೇ? ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಯಾವುದಾದರೂ ನರಮೇಧ ಅಥವಾ ದಂಗೆ ನಡೆದಿದೆಯೇ? ಹಾಗಾದರೆ, ಯಾವ ಆಧಾರದಲ್ಲಿ ತವ್ಲೀನ್ ಸಿಂಗ್ ಅವರ ಪುತ್ರ ಮೋದಿಯನ್ನು ವಿಭಜಕ ಎಂದು ಕರೆದಿದ್ದಾನೆ? ಆತನ ಬಗೆಗಿನ ಮಾಹಿತಿಯ ಪ್ರಕಾರ, ಆತ ನವದೆಹಲಿ ಮತ್ತು ಲಂಡನ್ ನಡುವೆ ತನ್ನ ಸಮಯವನ್ನು ವಿಭಜನೆಗೊಳಿಸುತ್ತನೇ ಇರುತ್ತಾನೆ. ಹಾಗಾದರೆ ಕಳೆದ ಐದು ವರ್ಷದಲ್ಲಿ ಲಂಡನಿನಲ್ಲೇ ಇರುವಂತೆ ಆತನಿಗೆ ಏನಾದರೂ ಅನಾನುಕೂಲಕರವಾದ ಪರಿಸ್ಥಿತಿಗಳು ನಿರ್ಮಾಣವಾಗಿತ್ತೆ. ಇದರಿಂದಾಗಿ ಆತ ತನ್ನ ಭ್ರಷ್ಟ ಕಾಂಗ್ರೆಸ್ ಪಕ್ಷದ ಸ್ನೇಹಿತರಿಂದ ಮಾಹಿತಿ ಪಡೆದು ಲೇಖನವನ್ನು ಬರೆಯಬೇಕಾಯಿತೇ?
2014ರಿಂದ ಭಾರತ ಎಲ್ಲಾ ವಲಯದಲ್ಲೂ ಪ್ರಗತಿಯನ್ನು ಕಾಣುತ್ತಿದೆ. ಹಣದುಬ್ಬರ ಸಂಪೂರ್ಣ ನಿಯಂತ್ರಣದಲ್ಲಿದೆ. ಆರ್ಥಿಕತೆ ಸ್ಥಿರವಾಗಿದೆ ಅಥವಾ ಉತ್ತಮವಾಗಿದೆ. ಎಲ್ಲಾ ವಲಯದಲ್ಲೂ ಅಭಿವೃದ್ಧಿ ಕಾಣುತ್ತಿದೆ. ಎಲ್ಲದಕ್ಕೂ ಪ್ರಮುಖವಾಗಿ, ಹಿಂದೆ ತಾರಕಕ್ಕೇರಿದ್ದ ಭ್ರಷ್ಟಾಚಾರ ಈಗ ಕುಸಿತವಾಗಿದೆ. ಮೋದಿ ಮತ್ತು ಅವರ ಸಚಿವ ಸಹೋದ್ಯೋಗಿಗಳು ಭಾರತದ ಪ್ರಗತಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಲೇಖಕ ಅತಿಶ್ ತಸೀರ್ ಈ ಎಲ್ಲಾ ಅಂಶವನ್ನು ಪರಿಗಣಿಸಿ ತಮ್ಮ ‘ಡಿವೈಡರ್ ಇನ್ ಚೀಫ್’ ಲೇಖನದಲ್ಲಿ ಭ್ರಷ್ಟರು ಮತ್ತು ಭ್ರಷ್ಟಾಚಾರಿಗಳಲ್ಲದವರು, ಕಾರ್ಯ ಮಾಡಿದವರು ಮತ್ತು ಮಾಡದವರು, ಕಾಮ್ದಾರ್ ಮತ್ತು ನಾಮ್ದಾರ್ಗಳ ನಡುವಣ ವ್ಯತ್ಯಾಸವನ್ನು ಉಲ್ಲೇಖಿಸಿದ್ದರೆ ಒಳ್ಳೆಯದಿತ್ತು.
ಈ ಲೇಖನದ ವಿಷಯದಲ್ಲಿ ಟೈಮ್ಸ್ನ ತಾರತಮ್ಯ ಧೋರಣೆ ಅತ್ಯಂತ ಸ್ಪಷ್ಟವಾಗಿ ಗೋಚರಿಸಿದೆ. ಇಯಾನ್ ಬ್ರೆಮ್ಮರ್ ಅವರು ಬರೆದ “ಮೋದಿ ದಿ ಪರ್ಫಾರ್ಮರ್” ಲೇಖನದ ಕುರಿತು ಮುಖಪುಟದಲ್ಲಿ ಅತ್ಯಂತ ಚಿಕ್ಕ ಅಕ್ಷರದಲ್ಲಿ ಪ್ರಕಟಿಸಿ, “ಡಿವೈಡರ್ ಇನ್ ಚೀಫ್’ ಲೇಖನವನ್ನು ದೊಡ್ಡ ಅಕ್ಷರಗಳಲ್ಲಿ ಪ್ರಕಟ ಮಾಡಿದೆ. ತನ್ನ ಉದ್ಯಮವನ್ನು ವಿಸ್ತರಿಸಲು ಈ ಮಾಧ್ಯಮಗಳು ಅನೈತಿಕ ರೀತಿಯ ನಿಲುವುಗಳನ್ನು ತೆಗೆದುಕೊಳ್ಳುತ್ತಿವೆ. ಕಳೆದು ಹೋಗುತ್ತಿರುವ ಓದುಗರ ಸಂಖ್ಯೆಯನ್ನು ಮರಳಿ ಪಡೆಯಲು ಈ ನಿಯತಕಾಲಿಕೆ ಅತ್ಯಂತ ಕೀಳುಮಟ್ಟದ ತಂತ್ರಗಾರಿಕೆಯನ್ನು ಮಾಡುತ್ತಿದೆ. ಆದರೆ ಇದರ ಭಾರತೀಯ ಓದುಗರಿಗೆ ತುಸುವಾದರೂ ದೇಶಾಭಿಮಾನ, ಆತ್ಮಾಭಿಮಾನ ಇದ್ದರೆ ನಮ್ಮ ದೇಶದ ಘನತೆಯುತವಾದ ಸ್ಥಾನವನ್ನು ಅವಮಾನಿಸಿದ ಪತ್ರಿಕೆಗೆ ಬುದ್ಧಿ ಕಲಿಸಲೇಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.