ಅರಿಝೋನಾ: ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ (NHRC) ಯಲ್ಲಿ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಆಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಛಾಯಾ ಶರ್ಮಾ ಅವರಿಗೆ, ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿನ McCain ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಲೀಡರ್ಶಿಪ್ ಸಂಸ್ಥೆಯು 2019ರ ಧೈರ್ಯ ಮತ್ತು ನಾಯಕತ್ವ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ಮೂಲ ಹಕ್ಕುಗಳಿಗಾಗಿ ಸದೃಢವಾಗಿ ನಿಲ್ಲುವ ಮತ್ತು ನಿಸ್ವಾರ್ಥ ಸೇವೆಗಾಗಿ ಜಗತ್ತಿನ ಗಮನ ಸೆಳೆದ ವ್ಯಕ್ತಿಗಳಿಗೆ ಪ್ರತಿವರ್ಷ McCain ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಲೀಡರ್ಶಿಪ್ ಧೈರ್ಯ ಮತ್ತು ನಾಯಕತ್ವ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತದೆ.
19ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಶರ್ಮಾ ಅವರು, ಮಾನವ ಹಕ್ಕುಗಳ ರಕ್ಷಕಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ, ಹಲವಾರು ಅಪರಾಧಗಳನ್ನು ಬೇಧಿಸುವ ಸಲುವಾಗಿ ಪತ್ತೆ ಕಾರ್ಯ ಮತ್ತು ತನಿಖೆಗಳನ್ನು ನಡೆಸಿ ಸಂತ್ರಸ್ಥರಿಗೆ ಹಕ್ಕುಗಳನ್ನು ದೊರಕಿಸಿಕೊಟ್ಟಿದ್ದಾರೆ. ಅದರಲ್ಲೂ ಮಹಿಳಾ ಮತ್ತು ಮಕ್ಕಳ ಪ್ರಕರಣಗಳಲ್ಲಿ ಅತ್ಯಂತ ಸೂಕ್ಷ್ಮ ಸಂವೇದನೆಯಿಂದ ಕಾರ್ಯನಿರ್ವಹಿಸಿ ಅವರ ಹಕ್ಕುಗಳನ್ನು ರಕ್ಷಣೆ ಮಾಡಿದ್ದಾರೆ.
2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ತನಿಖೆಯ ನೇತೃತ್ವವನ್ನೂ ಅವರೇ ವಹಿಸಿದ್ದರು. ಮಕ್ಕಳ ವೇಶ್ಯಾವಾಟಿಕೆಯ ದಂಧೆಯನ್ನು ಅವರು ಬೇಧಿಸಿದ್ದಾರೆ.
ಇದೀಗ ಅವರ ಧೈರ್ಯ ಮತ್ತು ಸಾಹಸಿತನವನ್ನು ಗಮನಿಸಿ ಇವರಿಗೆ ಉನ್ನತ ಪ್ರಶಸ್ತಿಯನ್ನು ನೀಡಲಾಗಿದೆ.
Congratulations to human rights defender and anti-trafficking crusader Chhaya Sharma for receiving the 2019 Award for Courage and Leadership by the McCain Institute. #USIndia pic.twitter.com/JoAbejN0zS
— U.S. Embassy India (@USAndIndia) May 9, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.