ನವದೆಹಲಿ: ಭಾರತೀಯ ವಾಯುಸೇನೆಗೆ ಯುಎಸ್ಎನ ಬೋಯಿಂಗ್ ಸಂಸ್ಥೆಯು ಮೊದಲ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಫ್ಟರ್ ಅನ್ನು ಹಸ್ತಾಂತರ ಮಾಡಿದೆ. ಇದರಿಂದಾಗಿ ವಾಯುಸೇನೆಗೆ ಹೆಚ್ಚಿನ ಬಲ ಸಿಕ್ಕಿದೆ.
ಏರ್ ಮಾರ್ಷಲ್ ಎಎಸ್ ಬುಟೊಲಾ ಐಎಎಫ್ ನ ಪ್ರತಿನಿಧಿಯಾಗಿ ಸಮಾರಂಭದಲ್ಲಿ ಮೊದಲ ಅಪಾಚೆ ಹೆಲಿಕಾಫ್ಟರ್ ಅನ್ನು ಸ್ವೀಕಾರ ಮಾಡಿದರು.
#ApacheInduction: First AH-64E (I) Apache Guardian helicopter was formally handed over to the IAF at Boeing production facility in Mesa, Arizona, USA on 10 May 19. Air Mshl AS Butola, represented the IAF & accepted the first Apache in a ceremony at Boeing production facility. pic.twitter.com/FzA0IfRine
— Indian Air Force (@IAF_MCC) May 11, 2019
The addition of AH-64 E (I) helicopter is a significant step towards modernisation of IAF’s helicopter fleet. The helicopter has been customized to suit IAF’s future requirements and would have significant capability in mountainous terrain. pic.twitter.com/prN3vjx4dH
— Indian Air Force (@IAF_MCC) May 11, 2019
ವಾಯುಸೇನೆಯ ಮಾಹಿತಿಯ ಪ್ರಕಾರ, AH-64 E (I) ಹೆಲಿಕಾಫ್ಟರ್ ವಾಯುಸೇನೆಯ ಹೆಲಿಕಾಫ್ಟರ್ ಫ್ಲೀಟ್ನ ಆಧುನೀಕರಣದಲ್ಲಿ ಮಹತ್ವದ ಹೆಜ್ಜೆಯಾಗಿದೆ ಮತ್ತು ಇದನ್ನು ವಾಯುಸೇನೆಯ ಭವಿಷ್ಯದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿಇದನ್ನು ಕಸ್ಟಮೈಝ್ ಮಾಡಲಾಗಿದೆ, ಹಿಮಾಲಯ ಭೂಪ್ರದೇಶಗಳಲ್ಲಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.
AH-64 E ಅಪಾಚೆಯು ಪ್ರಮುಖ ಮಲ್ಟಿ ರೋಲ್ ಅಟ್ಯಾಕ್ ಹೆಲಿಕಾಫ್ಟರ್ ಆಗಿದ್ದು, ಯುಎಸ್ ಆರ್ಮಿ ಇದನ್ನು ಬಹುವಾಗಿ ಬಳಸುತ್ತದೆ.
2017ರಲ್ಲಿ ರಕ್ಷಣಾ ಸಚಿವಾಲಯವು ರೂ.4,168 ಕೋಟಿಗೆ ಆರು ಅಪಾಚೆ ಹೆಲಿಕಾಫ್ಟರ್ ಖರೀದಿಗೆ ಅನುಮೋದನೆಯನ್ನು ನೀಡಿತ್ತು. ಇದೀಗ ಮೊದಲ ಅಪಾಚೆ ವಾಯುಸೇನೆಯನ್ನು ಸೇರ್ಪಡೆಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.