ನವದೆಹಲಿ: ಮುಂಬರುವ ಕೊರಿಯಾ ಟೂರ್ಗಾಗಿ ಭಾರತೀಯ ಮಹಿಳಾ ಹಾಕಿ ತಂಡ ಪ್ರಕಟಗೊಂಡಿದೆ. ಶುಕ್ರವಾರ 18 ಸದಸ್ಯರ ತಂಡವನ್ನು ಹಾಕಿ ಇಂಡಿಯಾ ಪ್ರಕಟಗೊಳಿಸಿದೆ. ಮೇ 20 ರಿಂದ ರಿಪಬ್ಲಿಕ್ ಆಫ್ ಕೊರಿಯಾ ಟೂರ್ ಆರಂಭವಾಗಲಿದೆ.
ಕೊರಿಯಾದ ಮಹಿಳಾ ಹಾಕಿ ತಂಡದ ವಿರುದ್ಧ ಭಾರತೀಯ ತಂಡವು ಮೂರು ದ್ವಿಪಕ್ಷೀಯ ಪಂದ್ಯಗಳನ್ನು ಆಡಲಿದೆ. ಕೊರಿಯಾದ ಜಿನ್ಚುನ್ ನ್ಯಾಷನಲ್ ಅಥ್ಲೇಟಿಕ್ ಸೆಂಟರ್ನಲ್ಲಿ ಪಂದ್ಯಾವಳಿಗಳು ನಡೆಯಲಿದೆ.
ಈ ವರ್ಷದ ಆರಂಭದಲ್ಲಿ ಭಾರತೀಯ ತಂಡವು ಸ್ಪೇನ್ಗೆ ಪ್ರವಾಸ ಕೈಗೊಂಡಿತ್ತು, ಆ ದೇಶದೊಂದಿಗೆ ಮತ್ತು ಐರ್ಲೆಂಡಿನೊಂದಿಗೆ ದ್ವಿಪಕ್ಷೀಯ ಪಂದ್ಯವನ್ನು ಆಡಿತ್ತು. ಇದರಲ್ಲಿ ಎರಡು ಪಂದ್ಯದಲ್ಲಿ ಜಯ, ಮೂರು ಡ್ರಾ ಮತ್ತು ಸೋಲುಗಳನ್ನು ಕಂಡಿತ್ತು. ಕಳೆದ ಎಪ್ರಿಲ್ ತಿಂಗಳಲ್ಲಿ ಮಲೇಷ್ಯಾ ಪ್ರವಾಸವನ್ನು ನಡೆಸಿ, ಅಲ್ಲಿನ ತಂಡದೊಂದಿಗೆ ನಾಲ್ಕು ಪಂದ್ಯಗಳನ್ನು ಗೆದ್ದು, ಒಂದು ಡ್ರಾವನ್ನು ಮಾಡಿಕೊಂಡಿತ್ತು.
ಇದೀಗ ಅದು ಕೊರಿಯಾಗೆ ಪ್ರವಾಸ ಕೈಗೊಳ್ಳಲು ಸಿದ್ಧವಾಗಿದ್ದು, ಗೆಲ್ಲುವ ಭರವಸೆಯನ್ನು ನೀಡಿದೆ.
Hockey India announced the 18-member Indian Women’s Hockey Team for the Republic of Korea Tour 2019. The bilateral series of three Test Matches is scheduled to begin on 20th May 2019 at the Jinchun National Athletic Center, Korea. Read more: https://t.co/0fw36zZngg#IndiaKaGame pic.twitter.com/756Jm5P6lB
— Hockey India (@TheHockeyIndia) May 10, 2019
ಕೊರಿಯಾ ಪ್ರವಾಸಕ್ಕೆ ಆಯ್ಕೆಯಾದ ಹಾಕಿಪಟುಗಳೆಂದರೆ:-
ಗೋಲ್ ಕೀಪರ್ಗಳು
ಸವಿತಾ (ವೈಸ್-ಕ್ಯಾಪ್ಟನ್)
ರಜನಿ ಎತಿಮಾರ್ಪು
ಡಿಫೆಂಡರ್ಸ್
ಸಲೀಮಾ ಟೆಟೆ
ಸುನಿತಾ ಲಕ್ರಾ
ದೀಪ್ ಗ್ರೇಸ್ ಎಕ್ಕಾ
ಕರಿಶ್ಮಾ ಯಾದವ್
ಗುರ್ಜಿತ್ ಕೌರ್
ಸುಶಿಲಾ ಚಾನು ಪುಖ್ರಂಬಂ
ಮಿಡ್ ಫಿಲ್ಡರ್ಸ್
ಮೋನಿಕಾ
ನವ್ಜೋತ್ ಕೌರ್
ನಿಕ್ಕಿ ಪ್ರಧಾನ್
ನೇಹಾ ಗೋಯಲ್
ಲಿಲಿಮಾ ಮಿಂಜ್
ಫಾರ್ವರ್ಡ್ಸ್
ರಾಣಿ (ಕ್ಯಾಪ್ಟನ್)
ವಂದನಾ ಕಟಾರಿಯಾ
ಲಾಲ್ರೆಮ್ಸಿಯಾಮಿ
ಜ್ಯೋತಿ
ನವ್ನೀತ್ ಕೌರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.