ನವದೆಹಲಿ: ರಾಜಧಾನಿ, ಡುರಾಂಟೋ ಮತ್ತು ಶತಾಬ್ದಿಯಂತಕ ಪ್ರೀಮಿಯರ್ ರೈಲುಗಳು ಶೀಘ್ರದಲ್ಲೇ ಮಹಿಳೆಯರಿಗೆ ಮತ್ತು ದಿವ್ಯಾಂಗರಿಗೆ ಮೀಸಲಾದ ಹೆಚ್ಚುವರಿ ಕೋಚ್ಗಳನ್ನು ಹೊಂದಲಿದೆ. ಮಾತ್ರವಲ್ಲದೇ, ಈ ರೈಲುಗಳಿಗೆ ಅಪ್ಗ್ರೇಡ್ ಆದ ಪವರ್ ಕಾರ್ಗಳನ್ನು ಅಳವಡಿಸಲು ರೈಲ್ವೇ ಮಂಡಳಿಯು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, LHB ( ಲಿಂಕ್ ಹೋಫ್ಮನ್ನ್ ಬೋಶ್) ಈ ಕೋಚುಗಳನ್ನು ಉತ್ಪಾದನೆ ಮಾಡುವ ಸಾಧ್ಯತೆ ಇದೆ.
ಪ್ರಸ್ತುತ, ಈ ರೈಲುಗಳು ಎರಡು LHB ಪವರ್ ಕೋಚ್ಗಳನ್ನು ಹೊಂದಿದ್ದು, ಇದು ಇಡೀ ರೈಲಿಗೆ ವಿದ್ಯುತ್ ಸರಬರಾಜು ಮಾಡುತ್ತದೆ, ಏರ್ ಕಂಡೀಷನ್ಗೂ ವಿದ್ಯುತ್ ನೀಡುತ್ತದೆ. ಅಪ್ ಗ್ರೇಡೆಡ್ ಪವರ್ ಕಾರ್ಗಳ ಮೂಲಕ ಇಡೀ ರೈಲಿಗೆ ಒಂದು ಕೋಚಿನ ಮೂಲಕ ವಿದ್ಯುತ್ ಅನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಒಂದೇ ಪವರ್ ಕೋಚಿನ ಅಗತ್ಯವಿದ್ದರೂ, ಮಹಿಳೆಯರಿಗೆ ಮತ್ತು ವಿಕಲಚೇತನರಿಗೆ ಮೀಸಲಾದ ಕೋಚುಗಳಿಗೆ ವಿದ್ಯುತ್ ಪೂರೈಸಲು ಹೆಚ್ಚುವರಿಯಾಗಿ ಮತ್ತೊಂದು ಪವರ್ ಕೋಚ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ, ಡುರಾಂಟೋ ಮತ್ತು ಶತಾಬ್ದಿಯಂತಹ ಎಲ್ಲಾ ಪ್ರೀಮಿಯರ್ ರೈಲುಗಳು LHB ಕೋಚುಗಳನ್ನು ಹೊಂದಿರುವಂತೆ ನೋಡಿಕೊಳ್ಳಲಾಗುತ್ತಿದೆ. ಒಂದು ಪವರ್ ಕಾರ್ ಅನ್ನು ಪ್ರಮುಖ ವಿದ್ಯುತ್ ಮೂಲವಾಗಿ, ಮತ್ತೊಂದು ಬ್ಯಾಕ್ ಅಪ್ ಆಗಿ ಒಟ್ಟು ಎರಡು ಪವರ್ ಕಾರ್ಗಳನ್ನು ಅಳವಡಿಸಲಾಗುತ್ತದೆ.
ರೈಲುಗಳ ಹಳೆಯ ಕೋಚ್ಗಳನ್ನು ಆಧುನಿಕ ಮತ್ತು ಸುರಕ್ಷಿತ LHB ಕೋಚುಗಳಾಗಿ ಪರಿವರ್ತನೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.