ತ್ರಿಪುರ್ : ತಮಿಳುನಾಡಿನ ತಿರುಪುರ್ ಟೆಕ್ಸ್ಟೈಲ್ ರಫ್ತು ದಾಖಲೆಯ ಮಟ್ಟದಲ್ಲಿ ಏರಿಕೆಯನ್ನು ಕಾಣಲಿದ್ದು, ಈ ಹಣಕಾಸು ವರ್ಷದಲ್ಲಿ ರೂ. 30 ಸಾವಿರ ಕೋಟಿಯನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಬಾರಿಯೂ ಭಾರತದ ಟೆಕ್ಸ್ಟೈಲ್ ರಫ್ತು ಪ್ರಕಾಶಮಾನವಾದ ಸ್ಥಾನವನ್ನು ಹೊಂದುವುದನ್ನು ಮುಂದುವರೆಸುವುದು ಶತಸಿದ್ಧವಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ರೂ.26,300 ಕೋಟಿ ಮೊತ್ತದ ರಫ್ತನ್ನು ತಿರುಪುರ್ನ ಟೆಕ್ಸ್ಟೈಲ್ ಕಂಡಿತ್ತು. ಈ ಬಾರಿ ಅದರ ಪ್ರಮಾಣ ರೂ. 30 ಸಾವಿರ ಕೋಟಿಯನ್ನು ತಲುಪಲಿದೆ ಎಂದು ಇಂಡಿಯಾ ಇಂಟರ್ನ್ಯಾಷನಲ್ ಕಿಟ್ ಫೇರ್ (ಐಕೆಎಫ್) ಮುಖ್ಯಸ್ಥ ಶಕ್ತಿವೇಲ್ ಹೇಳಿದ್ದಾರೆ.
2019ರ ಹಣಕಾಸು ವರ್ಷದಲ್ಲಿ ರಫ್ತು ಶೇ.8.3ರಷ್ಟು ದರದಲ್ಲಿ ಸುಧಾರಣೆಯನ್ನು ಕಂಡಿತ್ತು ಮತ್ತು ದೇಶೀಯ ಮಾರಾಟ ರೂ.24,000 ಕೋಟಿಗಳನ್ನು ಕಂಡಿರುವುದರಿಂದ ಅಸೋಸಿಯೇಶನಿನ ಒಟ್ಟಾರೆ ವಹಿವಾಟು ಅರ್ಧ ಟ್ರಿಲಿಯನ್ ರೂಪಾಯಿ ಗಡಿಯನ್ನು ದಾಟಿದೆ ಎಂದಿದ್ದಾರೆ.
2019ರ ಎಪ್ರಿಲ್ ವೇಳೆಯಲ್ಲಿ ರಫ್ತು ರೂ.4,400 ಕೋಟಿಯನ್ನು ದಾಟಿದೆ. ಇದು ಅತ್ಯಂತ ಉತ್ತೇಜನಾಕಾರಿ ಅಂಶವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಅಮೆರಿಕಾ ಮತ್ತು ಚೀನಾದ ನಡುವೆ ವ್ಯಾಪಾರ ಕಿತ್ತಾಟಗಳು ಇರುವುದರಿಂದ ಖರೀದಿದಾರರು ಭಾರತದತ್ತ ಮುಖ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.