ಕುಲ್ಲು: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸುಮಾರು 5200 ಮಹಿಳೆಯರು ತಮ್ಮ ಮತಹಾಕಿದ ಶಾಯಿವುಳ್ಳ ಕೈಬೆರಳಿನೊಂದಿಗೆ ವೋಟರ್ ಐಡಿಯನ್ನು ಹಿಡಿದುಕೊಂಡು ನೃತ್ಯ ಮಾಡಿ, ಮತದಾನದ ಮಹತ್ವವನ್ನು ಸಾರಿದ್ದಾರೆ. ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಅವರು ಈ ವಿಭಿನ್ನ ನೃತ್ಯವನ್ನು ಮಾಡಿದ್ದಾರೆ.
‘ಲೋಕತಂತ್ರದ ಮಹಾಪರ್ವ’ವನ್ನು ಸಂಭ್ರಮಿಸುವ ಸಲುವಾಗಿ ಅವರು ತಮ್ಮ ಜಾನಪದ ನೃತ್ಯಕ್ಕೆ ಹೆಜ್ಜೆಹಾಕಿದ್ದಾರೆ. ಮತದಾನವನ್ನು ಸಾಂಕೇತಿಸುವ ಕೈ ಬೆರಳು ಮತ್ತು ವೋಟರ್ ಐಡಿಯೊಂದಿಗೆ ದೇಶದ ಪ್ರಜೆಗಳಾಗಿರುವ ಜನರ ಹೆಮ್ಮೆ ಇದು ಎಂಬುದನ್ನು ಈ ಮಹಿಳೆಯರು ಸಾರಿದ್ದಾರೆ.
ಕುಲ್ಲುವಿನಲ್ಲಿನ ರಥ ಮೈದಾನದಲ್ಲಿ 5200 ಮಹಿಳೆಯರು ನಾಟಿ ಎಂಬ ಸಾಂಪ್ರದಾಯಿಕ ನೃತ್ಯವನ್ನು ಮಾಡಿದ್ದಾರೆ. ಕುಲ್ಲು ಜಿಲ್ಲಾಡಳಿತ ಆರಂಭಿಸಿರುವ ‘ಅಸ ರ ವೋಟ್, ಅಸ ರ ಅಧಿಕಾರ್’ ಎಂಬ ಮತದಾನ ಜಾಗೃತಿ ಅಭಿಯಾನದ ಭಾಗವಾಗಿ ಈ ನೃತ್ಯವನ್ನು ಪ್ರದರ್ಶಿಸಲಾಗಿದೆ. ಪ್ರಜಾಪ್ರಭುತ್ವದ ವಿಶೇಷ ಹಾಡನ್ನು ಇವರ ನೃತ್ಯಕ್ಕೆ ಹಾಕಲಾಗಿತ್ತು. ಈ ವೇಳೆ ಪ್ರತಿ ಚುನಾವಣೆಯಲ್ಲೂ ಮತ ಹಾಕುತ್ತೇವೆ ಎಂಬ ಪ್ರಮಾಣವನ್ನು ಮಹಿಳೆಯರು ಮಾಡಿದರು.
ಇಷ್ಟು ಮಾತ್ರವಲ್ಲದೇ, ಈ ಮಹಿಳೆಯರ ನೃತ್ಯ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ಗೂ ಸೇರ್ಪಡೆಗೊಂಡಿದೆ. ಕುಲ್ಲುವಿನ ಜಿಲ್ಲಾಧಿಕಾರಿ ಸರ್ಟಿಫಿಕೇಟ್ ಅನ್ನು ಸ್ವೀಕಾರ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.