ನವದೆಹಲಿ: ದೇಶ ಪ್ರಕಾಶಮಾನವಾದ ಸಂಶೋಧನೆ ಮತ್ತು ಅಭಿವೃದ್ಧಿಯ ಭವಿಷ್ಯವನ್ನು ಹೊಂದಿದೆ ಎಂಬುದು ಮತ್ತೊಮ್ಮೆ ಖಚಿತಗೊಂಡಿದೆ, ಐಐಟಿ-ಬಾಂಬೆ ವಿದ್ಯಾರ್ಥಿಗಳು AJIT ಎಂಬ ಮೈಕ್ರೊಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೈಕ್ರೋಪ್ರೊಸೆಸರ್ ಸಂಪೂರ್ಣವಾಗಿ ಪರಿಕಲ್ಪನೆಗೊಳಿಸಲ್ಪಟ್ಟಿದೆ, ವಿನ್ಯಾಸಗೊಳಿಸಲ್ಪಟ್ಟಿದೆ, ಅಭಿವೃದ್ಧಿಗೊಳಪಟ್ಟಿದೆ ಎಲ್ಲದಕ್ಕೂ ಮುಖ್ಯವಾಗಿ ಅದು ಭಾರತದಲ್ಲಿ ಉತ್ಪಾದನೆಯಾಗಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇಂತಹ ಬೆಳವಣಿಗೆಗಳು ದೇಶದ ಆಮದುಗಳನ್ನು ಕಡಿಮೆ ಮಾಡುವಲ್ಲಿ ಮತ್ತು ಎಲೆಕ್ಟ್ರಾನಿಕ್ಸ್ನಲ್ಲಿ ದೇಶ ಸ್ವಾವಲಂಬನೆಯನ್ನು ಪಡೆಯುವಲ್ಲಿ ಸಹಕಾರಿಯಾಗಲಿದೆ ಎಂದು ಐಐಟಿ-ಬಾಂಬೆಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಇಲಾಖೆಯ ಪ್ರೊಫೆಸರ್ ಮಾನವ್ ದೇಸಾಯಿಯವರು ಅಭಿಪ್ರಾಯಿಸಿದ್ದಾರೆ. ದೇಸಾಯಿ ಮೈಕ್ರೊಪ್ರೊಸೆಸರ್ ಅಭಿವೃದ್ಧಿಪಡಿಸಿದ ತಂಡದ ನೇತೃತ್ವ ವಹಿಸಿದವರಾಗಿದ್ದಾರೆ.
“ನಾನು ಮತ್ತು ನನ್ನ ಒಂಬತ್ತು ಸಂಶೋಧಕರ ತಂಡ ಈ ಸಂಸ್ಥೆಯಲ್ಲಿ ಸಂಪೂರ್ಣ ಪ್ರೊಸೆಸರ್ ಅನ್ನು ವಿನ್ಯಾಸಗೊಳಿಸಿದ್ದೇವೆ. ಛಂಡೀಗಢದ ಸರ್ಕಾರಿ ಸ್ವಾಮ್ಯದ ಸೆಮಿ-ಕಂಡಕ್ಟರ್ ಲ್ಯಾಬೊರೇಟರಿಯಲ್ಲಿ ಮೈಕ್ರೊಪ್ರೊಸೆಸರ್ ಚಿಪ್ ಅನ್ನು ತಯಾರು ಮಾಡಿದ್ದೇವೆ “ಎಂದಿದ್ದಾರೆ.
ಅಧಿಕ ಸಂಖ್ಯೆಯಲ್ಲಿ ಈ ಮೈಕ್ರೋಪ್ರೊಸೆಸರ್ ಅನ್ನು ಉತ್ಪಾದನೆ ಮಾಡಿದರೆ, ಇದರ ದರ ರೂ. 100 ಕ್ಕಿಂತಲೂ ಕಡಿಮೆಯಾಗಲಿದೆ ಎಂದಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಐಐಟಿ-ಬಾಂಬೆ ಜಂಟಿಯಾಗಿ ಈ ಯೋಜನೆಗೆ ಹಣವನ್ನು ಹೂಡಿದೆ. ಪೊವೈ ಲ್ಯಾಬ್ಗಳು ಕೂಡ ಮಾಲೀಕತ್ವ ಮತ್ತು ಮಾರಾಟ ಹಕ್ಕುಗಳನ್ನು ಹೊಂದುವ ಸಲುವಾಗಿ ಈ ಉತ್ಪನ್ನದಲ್ಲಿ ಹೂಡಿಕೆ ಮಾಡಲಿದೆ.
ಮಾರುಕಟ್ಟೆಯಲ್ಲಿನ ಹೆಚ್ಚಿನ ಮೈಕ್ರೊಪ್ರೊಸೆಸರ್ಗಳಂತೆ, AJIT ಕೂಡ ಅರ್ಥಮೆಟಿಕ್ ಲಾಜಿಕ್ ಯುನಿಟ್ ಅನ್ನು ಹೊಂದಿದ್ದು, ಮೂಲಭೂತ ಅಂಕಗಣಿತದ ಮತ್ತು ತಾರ್ಕಿಕ ಕಾರ್ಯಾಚರಣೆಗಳನ್ನು ಕೂಡಿಸುವಿಕೆ, ವ್ಯವಕಲನ ಮತ್ತು ಹೋಲಿಕೆ ಮಾಡುವಲ್ಲಿ ಸಹಾಯ ಮಾಡುವ ತಾರ್ಕಿಕ ಕಾರ್ಯಾಚರಣೆಗಳನ್ನು ಹೊಂದಿದೆ. ಮೈಕ್ರೋಪ್ರೊಸೆಸರ್ ಮೆಮೊರಿ ನಿರ್ವಹಣೆಯ ಯುನಿಟ್ ಅನ್ನೂ ಹೊಂದಿದೆ ಮತ್ತು ಇದು ಮೆಮೊರಿಯಿಂದ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ಹಿಂಪಡೆಯುತ್ತದೆ.
ವಿದ್ಯಾರ್ಥಿಗಳಾದ ಸಿ. ಅರುಣ್, ಎಂ. ಶರತ್, ನೆಹ ಕರಣ್ಕರ್, ಪಿಯುಶ್ ಸೋನಿ, ಟಿಟೊ ಅಬ್ಬದನ್, ಅಶ್ಫಾಕ್ ಅಹ್ಮದ್, ಅಸ್ವಿನ್ ಜಿತ್, ಸಿಎಚ್ ಕಲ್ಯಾಣಿ, ನಂದಿತಾ ರಾವ್ ಅವರು ಯೋಜನೆಯಲ್ಲಿ ದೇಸಾಯಿಗೆ ಸಹಾಯ ಮಾಡಿದವರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.