ಧಾರ್ಮಿಕ ಪ್ರವಾಸೋದ್ಯಮವು ದೇಶದ ಅತ್ಯಂತ ಪ್ರಸಿದ್ಧ ಪ್ರವಾಸೋದ್ಯಮ ವಿಧಾನಗಳಲ್ಲಿ ಒಂದು. ಜಮ್ಮು ಕಾಶ್ಮೀರದ ತಪ್ಪಲಲ್ಲಿರುವ ವೈಷ್ಣೋದೇವಿ ದೇಗುಲಕ್ಕೆ ಪ್ರತಿವರ್ಷ ಲಕ್ಷಾಂತರ ಮಂದಿ ಭಕ್ತಾದಿಗಳು ಆಗಮಿಸುತ್ತಾರೆ. ಅಂತೆಯೇ, ಅಮರನಾಥ ಯಾತ್ರೆಗೂ ಎಲ್ಲಾ ಅಡೆತಡೆಗಳನ್ನು ಎದುರಿಸಿಯೂ ಜನರು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಧಾರ್ಮಿಕ ಪ್ರವಾಸೋದ್ಯಮಕ್ಕೆ ಮಹತ್ವದ ಅವಕಾಶಗಳಿದ್ದರೂ ಹಿಂದಿನ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳನ್ನು ನಡೆಸಿರಲಿಲ್ಲ ಎಂಬುದು ದುರಾದೃಷ್ಟಕರವಾದ ಸಂಗತಿಯಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಮೂಲ ಸೌಕರ್ಯವನ್ನು ಹೆಚ್ಚಿಸುವ ಕಡೆಗೆ ಹಿಂದಿನ ಸರ್ಕಾರ ಹೆಚ್ಚಿನ ಗಮನವನ್ನು ನೀಡಿಲ್ಲ. ಜಾತ್ಯತೀತತೆಯ ಹಣೆಪಟ್ಟಿ ಕಟ್ಟಿಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ, ಹಿಂದೂ ಧಾರ್ಮಿಕ ಪ್ರವಾಸೋದ್ಯಮವನ್ನು ಬೆಳೆಸುವುದು ಸಾಧ್ಯವಾಗಲಿಲ್ಲ. ಇನ್ನೊಂದೆಡೆ, ಆ ಪಕ್ಷವು ಹಜ್ ಯಾತ್ರೆಗೆ ಸಬ್ಸಿಡಿಯನ್ನು ನೀಡಿತು, ಕ್ರೈಸ್ತ ಮಿಷನರಿಗಳಿಗೆ ಸರ್ಕಾರದ ವತಿಯಿಂದ ಬೆಂಬಲವನ್ನೂ ದೊರಕಿಸಿಕೊಟ್ಟಿತು. ಆದರೆ ದೇಶದ ಬಹುತೇಕ ಜನರು ಹಿಂದುಗಳು ಎಂಬ ಸತ್ಯವನ್ನು ಅರಿತಿದ್ದರೂ ಆ ಪಕ್ಷ ಹಿಂದೂಗಳಿಗಾಗಿ ಏನನ್ನೂ ಮಾಡದೆ ಕೈಕಟ್ಟಿ ಕುಳಿತುಬಿಟ್ಟಿತು. ಒಂದು ವೇಳೆ ಹಿಂದೂ ಪ್ರವಾಸೋದ್ಯಮವನ್ನು ಹಿಂದಿನ ಸರ್ಕಾರಗಳು ಹೆಚ್ಚು ಪ್ರಚುರಪಡಿಸಿದ್ದರೆ, ಈಗ ಭಾರತದ ಪ್ರವಾಸೋದ್ಯಮ ಕ್ಷೇತ್ರ ಬಿಲಿಯನ್ ಡಾಲರ್ನಷ್ಟು ಲಾಭವನ್ನು ಹೆಚ್ಚಿಸಿಕೊಳ್ಳುತ್ತಿತ್ತು.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ತನ್ನ ರಾಜ್ಯವನ್ನು ಧಾರ್ಮಿಕ ಪ್ರವಾಸೋದ್ಯಮದ ಕೇಂದ್ರವನ್ನಾಗಿಸಲು ಸರ್ವ ಪ್ರಯತ್ನವನ್ನು ಮಾಡುತ್ತಿದೆ. ಈ ರಾಜ್ಯವು ಶ್ರೀರಾಮಚಂದ್ರನ ಜನ್ಮ ಭೂಮಿ, ಮಾತ್ರವಲ್ಲ ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದ ಹಲವಾರು ಪುಣ್ಯ ಕ್ಷೇತ್ರಗಳು ಈ ರಾಜ್ಯದಲ್ಲಿವೆ. 2019ರ ಕುಂಭಮೇಳ ಇತಿಹಾಸದಲ್ಲಿ ವೈಭವೋಪೇತ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಐತಿಹಾಸಿಕ ಧಾರ್ಮಿಕ ಸಮ್ಮೇಳನವನ್ನು ಆಯೋಜಿಸುವಲ್ಲಿ ಯಾವುದೇ ಲೋಪದೋಷವನ್ನು ಯೋಗಿ ಸರಕಾರ ಮಾಡಿಲ್ಲ. ಕುಂಭಮೇಳಕ್ಕಾಗಿ 4200 ಕೋಟಿ ರೂಪಾಯಿಗಳನ್ನು ಅದು ಹೂಡಿಕೆ ಮಾಡಿತ್ತು. ಯೋಗಿ ಸರಕಾರ ನಡೆಸಿದ ಸಿದ್ಧತೆಗಳ ಪರಿಣಾಮವಾಗಿ 2019ರ ಕುಂಭಮೇಳದಿಂದ 1.2 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿತು.
ಮೂಲಸೌಕರ್ಯಗಳ ಮೇಲಿನ ಹೂಡಿಕೆಯ ಕೊರತೆಯಿಂದಾಗಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ದೊಡ್ಡ ತಡೆಯುಂಟಾಗಿತ್ತು. ಭಾರತೀಯ ರೈಲ್ವೆಯು ರಾಮಾಯಣ ಸರ್ಕ್ಯೂಟ್ ಗೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದ್ದು, ಇದಕ್ಕೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಟಿಕೆಟ್ ಗಳನ್ನು ಮುಂಗಡವಾಗಿಯೇ ಕಾಯ್ದಿರಿಸಿ ಜನರು ರಾಮಾಯಣ ಪ್ಲಾರವಾಸವನ್ನು ಮಾಡುತ್ತಿದ್ದಾರೆ. ಈ ರೈಲು ಅಯೋಧ್ಯಾದಿಂದ ತಮಿಳುನಾಡುವರಿಗೆ ರಾಮಾಯಣದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿರುವ ಕ್ಷೇತ್ರಗಳಿಗೆ ಭೇಟಿ ನೀಡುತ್ತದೆ. ಇದರಲ್ಲಿನ ಪ್ರಯಾಣಿಕರು ತಮ್ಮ ರಾಮಾಯಣ ಪ್ರವಾಸವನ್ನು ಪೂರ್ಣಗೊಳಿಸಲು ಶ್ರೀಲಂಕಾಗೂ ಪ್ರಯಾಣಿಸಬಹುದಾಗಿದೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ, ಶಿವನಿಗೆ ಸಮರ್ಪಿಸಲಾಗಿರುವ ಕೇದಾರನಾಥ ದೇಗುಲವನ್ನು ಮೋದಿ ಸರ್ಕಾರವು ಪುನರುಜ್ಜೀವನಗೊಳಿಸಿದೆ. ಪುನರುಜ್ಜೀವನಗೊಂಡ ಬಳಿಕದಿಂದ ಇಲ್ಲಿಗೆ ಅಪಾರ ಪ್ರಮಾಣದ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
ಸಿಎಸ್ಡಿಎಸ್ ಸಂಶೋಧನೆಯ ಪ್ರಕಾರ, ಭಾರತದಲ್ಲಿನ ತೀರ್ಥ ಕ್ಷೇತ್ರಗಳು ಎಲ್ಲಾ ನಂಬಿಕೆಯ ಜನರಿಗೂ ಅತ್ಯಂತ ಪ್ರಿಯವಾದುದಾಗಿದೆ. ಭಾರತದ ಎಲ್ಲಾ ಆರ್ಥಿಕ ಸ್ಥಿತಿಗತಿಯ ಜನರೂ ಹೆಚ್ಚು ಧಾರ್ಮಿಕರಾಗಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಧಾರ್ಮಿಕ ನಂಬಿಕೆ, ಪದ್ಧತಿಗಳು ಆರ್ಥಿಕ ಸ್ಥಾನಮಾನವನ್ನು ಅವಲಂಬಿತಗೊಂಡಿರುತ್ತದೆ. ಸಿರಿವಂತಿಕೆ ಹೆಚ್ಚಾದಂತೆ ಭಾರತೀಯರ ಧಾರ್ಮಿಕತೆಯೂ ಹೆಚ್ಚಾಗುತ್ತಾ ಹೋಗುತ್ತಿದೆ.ವರ್ಷದಿಂದ ವರ್ಷಕ್ಕೆ ಭಾರತೀಯ ತೀರ್ಥಯಾತ್ರೆ ಖರ್ಚು ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿನ ಖರ್ಚು ಹೆಚ್ಚಾಗುತ್ತಲೇ ಇದೆ.
ಕೇವಲ ತಾಜ್ಮಹಲ್ ಮತ್ತು ಗೇಟ್ ವೇ ಆಫ್ ಇಂಡಿಯಾ ಭಾರತದ ಪ್ರವಾಸೋದ್ಯಮದ ದೊಡ್ಡ ಆಕರ್ಷಣೆಗಳಾಗಿತ್ತು. ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದ್ದ ಹಲವಾರು ಕ್ಷೇತ್ರಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿತ್ತು. ಇಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲಾಗುತ್ತಿರಲಿಲ್ಲ, ಇವುಗಳನ್ನು ಜನಪ್ರಿಯಗೊಳಿಸಲು ಯಾವುದೇ ಪ್ರಯತ್ನಗಳನ್ನೂ ನಡೆಸಲಾಗುತ್ತಿರಲಿಲ್ಲ, 2017ರ ಆಗಸ್ಟ್ ವರೆಗೆ ಯುನೆಸ್ಕೋ ಪರಿಗಣಿಸದಂತೆ ಭಾರತದಲ್ಲಿ ಒಟ್ಟು 36 ವಿಶ್ವ ಪಾರಂಪರಿಕ ತಾಣಗಳಿವೆ, ಇವುಗಳನ್ನು ಯುನೆಸ್ಕೋ ವಲ್ಡ್ ಹೆರಿಟೇಜ್ ಕನ್ವೆನ್ಷನ್, ಸಾಂಸ್ಕೃತಿಕ ಮತ್ತು ನೈಸರ್ಗಿಕ ಮೌಲ್ಯಗಳನ್ನು ಹೊಂದಿರುವ ತಾಣಗಳು ಎಂದು ಬಣ್ಣಿಸಿದೆ. 2017 ರಲ್ಲಿ ಪ್ರವಾಸೋದ್ಯಮ ವಲಯವು 230 ಶತಕೋಟಿ US $ ನಷ್ಟು ಅಥವಾ ರಾಷ್ಟ್ರದ GDP ಯ 9.4% ರಷ್ಟನ್ನು ಉತ್ಪಾದಿಸಿತ್ತು ಮತ್ತು 41.622 ದಶಲಕ್ಷ ಉದ್ಯೋಗಗಳನ್ನು ಬೆಂಬಲಿಸಿತು. ಇದು ಒಟ್ಟು ಉದ್ಯೋಗದ 8% ರಷ್ಟಾಗುತ್ತದೆ. ಭಾರತೀಯ ಪ್ರವಾಸೋದ್ಯಮವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ, ಉದ್ಯಮದಲ್ಲಿನ ಕಡಿಮೆ ಮಟ್ಟದ ಔಪಚಾರಿಕೀಕರಣ ಮತ್ತು ಮೂಲಸೌಕರ್ಯ ಕೊರತೆ.
ವಿಶ್ವದ ಪ್ರಮುಖ ಪ್ರವಾಸಿ ತಾಣವಾಗಿ ಭಾರತವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೋದಿ ಸರಕಾರವು ಗಂಭೀರವಾಗಿದೆ, ಮುಂಬರುವ ವರ್ಷಗಳಲ್ಲಿ ಈ ವಲಯದಲ್ಲಿ ಅನೇಕ ಉದ್ಯೋಗಗಳು ಸೃಷ್ಟಿಯಾಗುತ್ತವೆ. ವಿಶ್ವ ಪ್ರವಾಸೋದ್ಯಮ ರ್ಯಾಂಕಿಂಗ್ ಪ್ರಕಾರ, ಭಾರತವು 2016 ರಲ್ಲಿ 14.6 ಮಿಲಿಯನ್ ಅಂತರರಾಷ್ಟ್ರೀಯ ಪ್ರವಾಸಿಗರನ್ನು ತನ್ನತ್ತ ಸೆಳೆದಿದೆ. ಆದರೆ ಇದು ಭಾರತದ ಪ್ರವಾಸೋದ್ಯಮಕ್ಕಿರುವ ನಿಜವಾದ ಸಾಮರ್ಥ್ಯಕ್ಕಿಂತ ಕಡಿಮೆಯೇ ಎಂದು ಹೇಳಬಹುದು. ದಕ್ಷಿಣ ಯೂರೋಸ್ ನ ಸಣ್ಣ ದೇಶವಾದ ಫ್ರಾನ್ಸ್ ವಾರ್ಷಿಕವಾಗಿ 82.6 ಮಿಲಿಯನ್ ಅಂತರರಾಷ್ಟ್ರೀಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ, ಭಾರತಕ್ಕೆ ಹೋಲಿಸಿದರೆ ಇದು 6 ಪಟ್ಟು ಹೆಚ್ಚು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.