ನವದೆಹಲಿ: ರಾಷ್ಟ್ರಗೀತೆಯನ್ನು ರಚನೆ ಮಾಡಿರುವಂತಹ ದೇಶ ಕಂಡ ಮಹಾನ್ ಕವಿ ರವೀಂದ್ರನಾಥ ಠಾಗೋರ್ ಅವರ 158ನೇ ಜನ್ಮದಿನವನ್ನು ಮತ್ತು ಮಹಾನ್ ಸಮಾಜ ಸುಧಾರಕ ಗೋಪಾಲ ಕೃಷ್ಣ ಗೋಖಲೆ ಅವರ ಜನ್ಮದಿನವನ್ನು ಇಂದು ದೇಶದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ಪಶ್ಚಿಮಬಂಗಾಳದಲ್ಲಿ ಗುರುದೇವ ಎಂದು ಕರೆಯಲ್ಪಡುವ ಠಾಗೋರರ ಜನ್ಮದಿನವನ್ನು ನಾನಾ ಕಾರ್ಯಕ್ರಮಗಳ ಮೂಲಕ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಅವರ ಪ್ರತಿಮೆಗೆ ಮಾಲಾರ್ಪಣೆ, ಸಂಗೀತ ಕಾರ್ಯಕ್ರಮ ಮುಂತಾದವುಗಳನ್ನು ಏರ್ಪಡಿಸಲಾಗುತ್ತಿದೆ. ಈ ದಿನವನ್ನು ಅಲ್ಲಿ ಶಾಂತಿನಿಕೇತನ್ ಆಗಿ ಆಚರಣೆ ಮಾಡಲಾಗುತ್ತದೆ.
ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, “ಠಾಗೋರ್ ಅವರು ಭಾರತ ಕಲಿಕಾ ಮೌಲ್ಯ ಮತ್ತು ಅನುಭವಗಳನ್ನು ಪ್ರತಿಬಿಂಬಿಸುತ್ತಾರೆ” ಎಂದಿದ್ದಾರೆ.
“ಗುರುದೇವ ರವೀಂದ್ರನಾಥ ಠಾಗೋರ್ ಅವರ ಬಹುಮುಖ ವ್ಯಕ್ತಿತ್ವ, ಗದ್ಯ, ಕವಿತೆ ಮತ್ತು ಕಲಾಕೃತಿಗಳು ಅದ್ಭುತವಾದವು ಮತ್ತು ಪ್ರೇರಣೆಗೊಳಿಸುವಂತಹು” ಎಂದು ಅವರು ಹೇಳಿದ್ದಾರೆ. ಅಲ್ಲದೇ, ಗುರುದೇವ್ ಠಾಗೋರ್ ಭಾರತದ ಹೆಮ್ಮೆಯನ್ನು ಹೆಚ್ಚಿಸಿ ಸ್ವಾತಂತ್ರ್ಯ ಚಳವಳಿಗೆ ಸಮೃದ್ಧವಾಗಿ ಕೊಡುಗೆ ನೀಡಿದ್ದಾರೆ ಎಂದಿದ್ದಾರೆ.
ಗೋಪಾಲ ಕೃಷ್ಣಾ ಗೋಖಲೆ ಅವರನ್ನೂ ಟ್ವಿಟರ್ ಮೂಲಕ ಸ್ಮರಿಸಿರುವ ಮೋದಿಯವರು, “ಗೋಖಲೆ ಅವರು ತಮ್ಮ ಅನನ್ಯ ಕಲಿಕೆ ಮತ್ತು ಸಾಮಾಜಿಕ ಸುಧಾರಣೆಗೆ ಹೆಸಸರುವಾಸಿಯಾಗಿದ್ದರು. ಹಿಂದುಳಿದವರ ಸಬಲೀಕರಣದಲ್ಲಿ ಅವರು ಆಧಾರಸ್ಥಂಭವಾಗಿ ಬೆಂಬಲವಿತ್ತರು” ಎಂದಿದ್ದಾರೆ.
ಗೋಖಲೆ ಅವರು 1866ರ ಮೇ. 9ರಂದು ಜನಿಸಿದರು.
Tributes to the great Gopal Krishna Gokhale on his birth anniversary. He was known for his penchant for learning and social reform. He remained a strong pillar of support for the marginalised sections of society in their quest for empowerment.
— Chowkidar Narendra Modi (@narendramodi) May 9, 2019
Gurudev Tagore manifests the best of India’s ethos of learning and expressing. A multifaceted personality, his prose, poetry and artwork are brilliant and thought provoking. He enhanced India’s pride and richly contributed to the freedom movement. Tributes to him on his Jayanti.
— Chowkidar Narendra Modi (@narendramodi) May 9, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.