ಕರುನಾಡ ರಾಜ’ಕುವರ’ರೆಲ್ಲಾ ಹೊರಾಡಿದ್ದೇನು? ಡಬ್ಬಿಂಗ್ ನಿಂದ ಭಾಷೆ, ಚಿತ್ರಪ್ರೇಮ ನಾಶ ಆಗುತ್ತದೆ, ನೂರಾರು ಕಾರ್ಮಿಕ ಕುಟುಂಬಗಳು ಬೀದಿಗೆ ಬರುತ್ತವೆ ಎಂದು. ಬಹುಶಃ ಅವರು ಮರೆತಿರಬೇಕು, ಅವರ ತಂದೆಯ ಚಿತ್ರಗಳೇ ಡಬ್ ಆಗಿರುವುದನ್ನು.
ಈಗ ಈ ವಿಚಾರಕ್ಕೆ ಏಕೆ ಬಂದೆ ಎಂದರೆ, ‘ಕೇಸರಿ’ ಇತ್ತೀಚೆಗೆ ಬಂದ ಅತ್ತ್ಯುತ್ತಮ ಚಿತ್ರ. ನಾನೇ ‘ವಿಲನ್’ ಎಂದು ಕಿರುಚಿಕೊಳ್ಳದ, ಕಥೆ ಮತ್ತು ಪಾತ್ರಗಳಿಂದ ಗೆದ್ದ ಚಿತ್ರ. 1897ರಲ್ಲಿ ಸರಾಗ್ರಹಿ ಕದನದ ಕಥೆ. ಆಂಗ್ಲರ ಸೇನೆಯ 36ನೇ ರೆಂಜಿಮೆಂಟಿನ 21 ಭಾರತೀಯ ಸೈನಿಕರು, ಹತ್ತು ಸಾವಿರಕ್ಕೂ ಹೆಚ್ಚಿನ ಅಫ್ಘಾನಿಸ್ತಾನ ಸೈನಿಕರ ವಿರುದ್ಧ ಹೋರಾಡಿ ಗೆದ್ದ ಕಥೆ. UNESCO ಪ್ರಕಟಿಸಿದ ಜಗತ್ತಿನ ಶ್ರೇಷ್ಠ ಎಂಟು ವೀರ ಯುದ್ಧ ಕತೆಗಳಲ್ಲಿ ಇದೂ ಒಂದು. ಅದು ಕೂಡ ಒಂದು ಹೆಮ್ಮೆಯ ಸಂಗತಿ. ಇದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಹವಲ್ದಾರ್ ಇಷಾರ್ ಸಿಂಗ್ ಪಾತ್ರ ಮಾಡಿದ್ದಾರೆ. 150 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಹೊಂದುತ್ತಿದೆ.
ಕೇಸರಿ, ಉರಿ ಅಂತಹ ಚಿತ್ರಗಳನ್ನು ಕನ್ನಡದಲ್ಲಿ ನಿರ್ಮಾಣ ಸಧ್ಯಕ್ಕಂತೂ ಸಾಧ್ಯವಿಲ್ಲ. ಆದರೆ ಡಬ್ ಮಾಡಿ ತೋರಿಸಬಹುದು. ಯಾಕೆಂದರೆ ಭಾರತ ತನ್ನದೇ ಶಕ್ತಿ ಮತ್ತು ಸಾಮರ್ಥ್ಯದಿಂದ ಒಂದು ದೇಶವಾಗಿ ಬೆಳೆದು ನಿಂತ ಪರಿಯನ್ನು ನೋಡಲು ನೀವು ಉರಿ ಚಿತ್ರ ನೋಡಲೇ ಬೇಕು. ವಿಷಯ ಚಿತ್ರಗಳ ವಿಮರ್ಶೆ ಮಾಡುವುದಲ್ಲ. ಇಂತಹ ಹೆಮ್ಮೆಯ ಚಲನಚಿತ್ರಗಳು ಎಷ್ಟು ಜನರಿಗೆ ತಲುಪಿವೆ ಮತ್ತು ಅರ್ಥ ಆಗಿವೆ ಎಂಬುದು. ಈ ರೀತಿಯ ಚಿತ್ರಗಳನ್ನು ನಿಜವಾಗಿಯೂ ನೋಡಲೇ ಬೇಕಾದವರು ಯುವಕರು ಮತ್ತು ವಿದ್ಯಾರ್ಥಿಗಳು. ಒಂದು ಮಾತಿದೆ ‘ಇತಿಹಾಸದ ಅರಿವಿದ್ದವನು ಮಾತ್ರ ಇತಿಹಾಸ ಸೃಷ್ಟಿ ಮಾಡಬಹುದು’ ಎಂದು. ಹೊಸ ಕನಸುಗಳೊಂದಿಗೆ ಹೊರ ಬರುವ ನವ ಪೀಳಿಗೆಗೆ ಭಾರತವನ್ನು ನೋಡುವ ದೃಷ್ಟಿ ಬದಲಾಗುತ್ತದೆ.
ಡಬ್ಬಿಂಗ್ ಯಾಕೆ ಬೇಕು, ಅದಕ್ಕೆ ಕಾರಣವೂ ಇದೆ. ಬರೀ ಕನ್ನಡ ಅಷ್ಟೇ ಬರುವ, ಹಿಂದೀ ಭಾಷೆಯ ಅರಿಯದ ಎಷ್ಟು ಜನ ನಮ್ಮ ನಡುವೆ ಇದ್ದಾರೆ. ಒಂದು ಚಂದದ ಚಿತ್ರವನ್ನು ಮರುನಿರ್ಮಾಣ ಮಾಡುವುದಕ್ಕಿಂತ ಡಬ್ಬಿಂಗ್ ಮಾಡುವುದರಿಂದ ಸಮಯ, ಹಣ ಮತ್ತು ಶ್ರಮ ಉಳಿತಾಯ ಆಗುತ್ತದೆ. ಮಕ್ಕಳು ಕೂಡ ಇಂತಹ ಚಿತ್ರಗಳನ್ನು ನೋಡುವುದು ಅವಶ್ಯಕ. ಉರಿ, ಮೇರಿ ಕಿಮ್, ಏರ್ ಲಿಫ್ಟ್, ಪ್ಯಾಡ್ ಮ್ಯಾನ್, ಟ್ಯಾಯ್ಲೆಟ್ ಮತ್ತು ಕೇಸರಿ ಮುಂತಾದ ಸಿನಿಮಾಗಳು. ಆದರೆ ಹೇಗೆ ಸಾಧ್ಯ, ಅರ್ಥವೇ ಆಗದ ಭಾಷೆ. ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ಮುಂದೆ ಸಾರ್ವಜನಿಕ ಪ್ರದರ್ಶನಗಳ ಏರ್ಪಡಿಸಿ ನಿಜವಾದ ಭಾರತ ಏನು ಎಂದು ತೋರಿಸಬೇಕು.
ಆತ್ಮೀಯ ಪೋಷಕರು ಗಮನಿಸಲೇಬೇಕಾದ ವಿಷಯವೆಂದರೆ ಎಲ್ಲಿಯ ತನಕ ಪಠ್ಯಪುಸ್ತಕಗಳಲ್ಲಿ 130 ಕೋಟಿ ಜನಸಂಖ್ಯೆ ಭಾರತದ ಶಕ್ತಿ ಎಂದು ಬಿಂಬಿತವಾಗುವುದಿಲ್ಲವೋ ಅಲ್ಲಿಯ ತನಕ ದೇಶಪ್ರೇಮವನ್ನು ತಿಳಿಹೇಳಲೇಬೇಕು. ಭಾರತೀಯ ಶಿಕ್ಷಣ ವ್ಯವಸ್ಥೆ ಎಡಪಂಥೀಯರ ಕೈಗೆ ಸಿಕ್ಕು ಅಲ್ಲಿ ನಿಜವಾದ ಹಿಂದೂಸ್ಥಾನದ ಪರಿಚಯ ಆಗುವುದಿಲ್ಲ. ಅಲ್ಲಿರುವುದು ನಕಲಿ ಸಾಮ್ರಾಟರ, ಸ್ವಘೋಷಿತ ಹೋರಾಟಗಾರರ ಕಲ್ಪಿತ ಕಥೆ. ಕಾರ್ಗಿಲ್ ಯುದ್ಧದ ತರಹ ಬೆರಳೆಣಿಕೆಯಷ್ಟು ಕದನಗಳ ಹೊರತು ಪಡಿಸಿ ಉಳಿದೆಲ್ಲ ಯುದ್ಧಗಳಲ್ಲಿ ಭಾರತ ಸೋತಿದೆ ಎಂದು ಸಾರುವುದು ಆ ಇತಿಹಾಸ ಪಠ್ಯದಲ್ಲಿರುವ ಸಾರ. ಅಂತಹುದನ್ನೇ ಓದಿ ಕಲಿತು ಬಂದ ಮಕ್ಕಳ ಮನೋಸ್ಥಿತಿಯನ್ನು ಬಿಡಿಸಿ ಹೇಳಬೇಕಿಲ್ಲ. ಅದು ಕೇವಲ ಆ ಮಕ್ಕಳ ಸ್ಥಿತಿ ಅಲ್ಲ. ನಾವು ಅವರಿಗಿಂತ ಭಿನ್ನರಲ್ಲ.
ಚಂದದ ನಾಯಕ, ಆತ ಶ್ರೀಮಂತ. ಆ ಸುಂದರಿಗಾಗಿ ಏನು ಬೇಕಾದರೂ ಮಾಡುತ್ತಾನೆ ಎಂಬುದು ಈಗಿನ ಚಿತ್ರಗಳ ಸಾರ. ಬಿಟ್ಟರೆ ಅವನ ಕೈಯಲ್ಲಿ ಆಯುಧ. ಆತ ಬುದ್ಧಿಶಾಲಿ ಮತ್ತು ಪರಾಕ್ರಮಿ. ಬರೀ ಮನೋರಂಜನೆಯೇ ಸಿನಿಮಾಗಳ ಸಾರವೇ? ಖಂಡಿತ ಅಲ್ಲ. ಅದೊಂದು ಅತ್ಯಂತ ಶಕ್ತಿಶಾಲಿ ಮಾಧ್ಯಮ. ಅಲ್ಲಿ ಭವ್ಯ ಭಾರತದ ಇತಿಹಾಸವನ್ನು ಮನ ಮುಟ್ಟುವಂತೆ ತೆರೆದು ಇಡಬಹುದು. ಮೇಲ್ವರ್ಗ ಕೆಳವರ್ಗಗಳ ಬಿಂಬಿಸಿ, ಕೆಲವು ಜನರ ಹಂಗಿಸಿ, ವಿಚಿತ್ರ ಶಬ್ಧಗಳ ತುರುಕಿ, ತಲೆ ಬುಡವೇ ಇಲ್ಲದ ಕಥೆಗಳ ಸಿನಿಮಾ ಮಾಡಿ ಅದಕ್ಕೆ ಗಡಚಿಕ್ಕುವ ಸಂಗೀತ ತುಂಬುವುದು ಸಾಮಾನ್ಯ ಲಕ್ಷಣ.
ಉರಿ ಚಿತ್ರ ನೋಡಿದ್ದೀರಾ? ಭಾರತ ಏನು ಮಾಡಬಹುದು ಎಂದು ಯೋಚಿಸಲು ಹಚ್ಚಿದ ಚಿತ್ರ. ಸೈನಿಕರು ನಮ್ಮ ಹೆಮ್ಮೆ, ಅವರ ಯೋಜನೆಗಳು ಮತ್ತು ಸಾಮರ್ಥ್ಯಗಳು ಎಲ್ಲವೂ ಧುಮ್ಮಿಕ್ಕುವ ಪರಿ ನಿಮ್ಮನ್ನು ನಿಜಕ್ಕೂ ಹೆಮ್ಮೆ ಪಡುವಂತೆ ಮಾಡುತ್ತದೆ.
ಮಹಾರಾಷ್ಟ್ರದಲ್ಲಿ ದಲಿತರು ಮತ್ತು ಮರಾಠರ ನಡುವೆ ಕಲಹ ಉಂಟು ಮಾಡಿ ಬೇಳೆ ಬೇಯಿಸಿಕೊಂಡ ಘಟನೆ ನಮ್ಮ ಕಣ್ಣ ಮುಂದೆಯೇ ಇದೆ. ಆದರೆ ಸರಾಗ್ರಹಿ ಕದನದ ಕಥೆ ಎಷ್ಟು ಗೊತ್ತಿತ್ತು ನಿಮಗೆ, ಅಲ್ಲವೇ? ದೇವಾಲಯಗಳ ಹಳಿಯುವ, ಇತಿಹಾಸ ತಿರುಚುವ ಮತ್ತು ಸ್ವಾಮಿ ಸಂತರ ಕೀಳಾಗಿ ತೋರಿಸುವ ಎಷ್ಟು ಚಿತ್ರಗಳು ಬಂದಿಲ್ಲ. ಅಂತಹ ವಿಕಲಾಂಗ ಮನಸ್ಸಿನ ಸಿನಿಮಾಗಳ ನಡುವೆ ಇಂತಹ ಹೆಮ್ಮೆಯ ಚಲನಚಿತ್ರಗಳು ಬಂದು ನೂರಾರು ಕೋಟಿ ಗಳಿಕೆ ಮಾಡಿ, ಆ ಹಣವನ್ನೂ ಸೈನಿಕರ ನಿಧಿಗೆ ತಲುಪಿದ ಉದಾಹರಣೆ ಇದೆ ಎಂಬುದೇ ಸಮಾಧಾನದ ವಿಷಯ. ಸಿನಿಮಾ ಯಾರ ಆಸ್ತಿಯೂ ಅಲ್ಲ. ಎಲ್ಲಾ ರಂಗಗಳಂತೆ ಅಲ್ಲೂ ಶಕ್ತರಷ್ಟೇ ಉಳಿಯಲಿ ಬಿಡಿ. ಅದು ಹರಿಯುವ ನೀರು. ಡಬ್ಬಿಂಗ್ ಒಂದು ನ್ಯಾಯಯುತ ವಿಧಾನ. ಅಧ್ಭುತ ಚಿತ್ರಗಳು ಜನರಿಗೆ ಬೇಗ ತಲುಪಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.