ನವದೆಹಲಿ: ರಕ್ಷಣಾ ಪತ್ರಕರ್ತ ಶಿವ ಅರೂರ್ ಮತ್ತು ರಾಹುಲ್ ಸಿಂಗ್ ಅವರು, ಶೀಘ್ರದಲ್ಲೇ ತಮ್ಮ ಅತ್ಯುತ್ತಮ ಮಾರಾಟಗೊಂಡ ಪುಸ್ತಕ ‘ಇಂಡಿಯಾಸ್ ಮೋಸ್ಟ್ ಫಿಯರ್ಲೆಸ್’ನ ಮತ್ತೊಂದು ಸರಣಿಯನ್ನು ಹೊರತರುತ್ತಿದ್ದಾರೆ. ಭಾರತದ ಆಧುನಿಕ ಮಿಲಿಟರಿ ಹೀರೋಗಳ ಸಾಹಸಗಾಥೆಯನ್ನು ಇದು ಒಳಗೊಂಡಿರುತ್ತದೆ. ಬಾಲಾಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯ ವಿಸ್ತೃತ ವಿವರಗಳನ್ನು ಇದು ಹೊಂದಿರಲಿದೆ.
‘ಮೋಸ್ಟ್ ಫಿಯರ್ಲೆಸ್ 2’ ಊಹಿಸಲಸಾಧ್ಯವಾದ ಸಾಹಸ ಮತ್ತು ತ್ಯಾಗದ ಮಿಲಿಟರಿ ಕಥೆಯನ್ನು ಒಳಗೊಳ್ಳಲಿದೆ ಎಂದು ಶಿವ ಆರೂರ್ ಟ್ವಿಟ್ ಮಾಡಿದ್ದಾರೆ.
NEW BOOK ALERT! 📖🔥
‘INDIA’S MOST FEARLESS 2’
With a detailed account of India’s Feb 2019 air strikes in Pak’s Balakot + 14 stunning new tales of recent military heroes. Sequel to our bestseller #IndiasMostFearless out soon. PRE-ORDERS OPEN👉🏽 https://t.co/HeDeDDLYLq pic.twitter.com/iosaJwtkBq— Shiv Aroor (@ShivAroor) May 7, 2019
ಜೂನ್ 24ಕ್ಕೆ ಈ ಪುಸ್ತಕ ಓದುಗರಿಗೆ ಲಭ್ಯವಾಗಲಿದೆ. ಈಗಾಗಲೇ ಪೂರ್ವ ಆರ್ಡರ್ಗಳನ್ನು ಸ್ವೀಕರಿಸಲಾಗುತ್ತಿದೆ.
‘ಇಂಡಿಯಾಸ್ ಮೋಸ್ಟ್ ಫಿಯರ್ ಲೆಸ್’ ಭಾಗ 1 ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ನ ವಿಸ್ತೃತ ವಿವರವನ್ನು ಒಳಗೊಂಡಿತ್ತು.
ಫೆ. 26 ರಂದು ಭಾರತದ ವಾಯುಸೇನೆಯು ಪಾಕಿಸ್ಥಾನದ ಬಾಲಾಕೋಟ್ಗೆ ನುಗ್ಗಿ ಉಗ್ರರ ಶಿಬಿರಗಳನ್ನು ನಾಶಪಡಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.