ಮುಂಬಯಿ: ಭಾರತೀಯ ನೌಕಾಸೇನೆಯ ನಾಲ್ಕನೇ ಸ್ಟೀಲ್ತ್ ಸ್ಕಾರ್ಪಿನ್ ಕ್ಲಾಸ್ ಸಬ್ ಮರೀನ್ ವೇಲಾವನ್ನು ಸೋಮವಾರ ಮುಂಬಯಿಯ ಮಝಗೋನ್ ಡಾಕ್ ಲಿಮಿಟೆಡ್ನಲ್ಲಿ ಪ್ರಾಯೋಗಿಕ ಪರೀಕ್ಷೆಗಾಗಿ ಅನಾವರಣಗೊಳಿಸಲಾಯಿತು. ನೌಕಾಸೇನೆಯ ಅಂಡರ್ ವಾಟರ್ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಜಲಾಂತರ್ಗಾಮಿ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ.
ನೌಕಾಸೇನೆಯು 2005ರಲ್ಲಿ ಸಹಿ ಹಾಕಿದ ಪ್ರಾಜೆಕ್ಟ್-75 ಅಡಿಯಲ್ಲಿ, ಫ್ರೆಂಚ್ನ DCNS ಮತ್ತು ಮಝಗೋನ್ ಡಾಕ್ ಲಿಮಿಟೆಡ್ ಆರು ಜಲಾಂತರ್ಗಾಮಿಗಳನ್ನು ಭಾರತಕ್ಕೆ ಪೂರೈಕೆ ಮಾಡಬೇಕಿದೆ.
ಮೊದಲ ಸ್ಕಾರ್ಪಿನ್ ಕ್ಲಾಸ್ ಜಲಾಂತರ್ಗಾಮಿ INS ಕಲವೆರಿ ಈಗಾಗಲೇ ನೌಕಾಸೇನೆಯನ್ನು ಸೇರ್ಪಡೆಗೊಂಡಿದೆ. 2017ರ ಡಿಸೆಂಬರ್ 14ರಂದು ಪ್ರಧಾನಿ ಇದನ್ನು ಅನಾವರಣಗೊಳಿಸಿದ್ದರು. ಎರಡನೇ ಸ್ಕಾರ್ಪಿನ್ ಕ್ಲಾಸ್ ಜಲಾಂತರ್ಗಾಮಿ INS ಖಂಡೇರಿಯನ್ನು 2017ರ ಜನವರಿಯಲ್ಲಿ ಸೇರ್ಪಡೆಗೊಳಿಸಲಾಯಿತು. ಮೂರನೇ ಜಲಾಂತರ್ಗಾಮಿ INS ಕಾರಂಜ್ ಅನ್ನು 2018ರ ಜನವರಿ 31ರಂದು ಸೇರ್ಪಡೆಗೊಳಿಸಲಾಯಿತು.
ಇದೀಗ ನಾಲ್ಕನೇ ಜಲಾಂತರ್ಗಾಮಿ INS ವೇಲಾ ಇಂದು ಪ್ರಾಯೋಗಿಕವಾಗಿ ಅನಾವರಣಗೊಂಡಿದ್ದು, ಅತೀ ಶೀಘ್ರದಲ್ಲೇ ನೌಕಾಸೇನೆಯನ್ನು ಸೇರಲಿದೆ. ಉಳಿದ ಎರಡು ಜಲಾಂತರ್ಗಾಮಿಗಳಾದ INS ವಗಿರ್ ಮತ್ತು ವಾಗ್ಶೀರ್ ನಿರ್ಮಾಣ ಹಂತದಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.