News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಕಮಲಿ’: ವಿಶ್ವದ ಗಮನ ಸೆಳೆಯಿತು ತಮಿಳುನಾಡಿನ ತಾಯಿ, ಮಗಳ ಬಗೆಗಿನ ಯಶೋಗಾಥೆ

ಮೀನು ಮಾರಾಟ ಮಾಡಿ, ತನ್ನ 9 ವರ್ಷದ ಮಗಳನ್ನು ಸ್ಕೇಟ್­ಬೋರ್ಡರ್ ಆಗಿಸಿರುವ ಭಾರತೀಯ ತಾಯಿಯೊಬ್ಬಳ ಬಗೆಗಿನ ಕಿರುಚಿತ್ರ ಅಟ್ಲಾಂಟ ಫಿಲ್ಮ್ ಫೆಸ್ಟಿವಲ್­ನಲ್ಲಿ ಉನ್ನತ ಗೌರವಕ್ಕೆ ಭಾಜನವಾಗಿದೆ, ಈ ಮೂಲಕ ಭಾರತದ ಮತ್ತೊಂದು ನೈಜ ಕಥೆ ಆಧಾರಿತ ಕಿರುಚಿತ್ರ ಅಕಾಡಮಿ ಅವಾರ್ಡ್ ಗೆದ್ದ ಸಂಭ್ರಮದಲ್ಲಿದೆ.

‘ಕಮಲಿ’ ಕಿರುಚಿತ್ರವನ್ನು ಚೆನ್ನೈ ಹೊರವಲಯದ ಮಹಾಬಲಿಪುರಂನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದು ಸುಗಂತಿ ಎಂಬ ತಾಯಿಯೊಬ್ಬಳು ತನ್ನೆಲ್ಲಾ ಸವಾಲುಗಳನ್ನು ಮೀರಿ ನಿಂತು ಮಗಳನ್ನು ಸ್ಕೇಟ್ ಬೋರ್ಡರ್ ಆಗಿ ರೂಪಿಸಿದ ಕಥೆಯನ್ನು ಒಳಗೊಂಡಿದೆ. ಸ್ಕೇಟ್ ಬೋರ್ಡರ್ ಆರಂಭಿಸಿದ ಬಳಿಕ ಕಮಲಿಯ ಬದುಕಿನಲ್ಲಾದ ಪರಿವರ್ತನೆ ಮತ್ತು ಆಕೆಯ ಜೀವನಕ್ಕೆ ಸಿಕ್ಕ ಹೊಸ ಹುರುಪಿನ ಬಗ್ಗೆ ಈ ಸಿನಿಮಾ ಹೇಳುತ್ತದೆ.

ಮದುವೆ ಮುರಿದು ಬಿದ್ದ ಬಳಿಕ 34 ವರ್ಷದ ಸುಗಂತಿ, ಏಕಾಂಗಿಯಾಗಿ ತನ್ನ ಮಗಳು ಕಮಲಿಯನ್ನು ವಿದ್ಯಾವಂತಳನ್ನಾಗಿಸುವ ಮತ್ತು ಸ್ಕೇಟ್ ಬೋರ್ಡರ್ ಆಗಿಸುವ ಪಣತೊಟ್ಟಳು. ಸುಗಂತಿಯ ಸರ್ಫರ್ ಆಗಿರುವ ಸಹೋದರನ ಸ್ನೇಹಿತ ಕಮಲಿಗೆ ಸ್ಕೇಟ್ ಬೋರ್ಡರ್ ಅನ್ನು ಉಡುಗೊರೆಯಾಗಿ ನೀಡುತ್ತಾರೆ. ಇದು ಆಕೆಯ ಜೀವನದ ದಿಕ್ಕನ್ನೇ ಬದಲಾಯಿಸಿತು.

ಗಂಡು ಮಕ್ಕಳೇ ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದ ಸ್ಕೇಟ್ ಬೋರ್ಡರ್ ಅನ್ನು ಹೆಣ್ಣು ಮಗಳೊಬ್ಬಳು ಆಯ್ಕೆ ಮಾಡಿಕೊಂಡಾಗ ಜನರ ಪ್ರತಿಕ್ರಿಯೆಯೇ ವಿಚಿತ್ರವಾಗಿತ್ತು. ಆಕೆ ಕಾಲು ಮುರಿದುಕೊಂಡಾಳೂ, ಆಕೆಯ ಎತ್ತರಕ್ಕೆ ಹೋಗಲಾರಳು ಎಂಬಿತ್ಯಾದಿ ಮಾತುಗಳು ಕೇಳಲಾರಂಭಿಸಿದವು. ಆದರೆ ಯಾವುದನ್ನೂ ತಲೆಗೆ ಹಚ್ಚಿಕೊಳ್ಳದ ಸುಗಂತಿ ಮಗಳಿಗೆ ಪ್ರೋತ್ಸಾಹ ನೀಡುತ್ತಲೇ ಬಂದರು. ಇಂದು ಆಕೆ ಅಪ್ರತಿಮ ಸ್ಕೇಟ್ ಬೋರ್ಡರ್ ಆಗಿ ಹೊರಹೊಮ್ಮಿದ್ದಾಳೆ.

ಸಮುದ್ರ ತೀರದಲ್ಲಿ ಮೀನು, ಇತರ ತಿಂಡಿ ತಿನಿಸುಗಳನ್ನು ಮಾರುತ್ತಾ ತನ್ನ ಮಗಳಲ್ಲಿ ಹೊಸ ಚೈತನ್ಯ ಮತ್ತು ಹುರುಪನ್ನು ತುಂಬಿದ ಸುಂಗತಿಯವರ ವ್ಯಕ್ತಿತ್ವ ನ್ಯೂಜಿಲ್ಯಾಂಡ್ ಮೂಲದ ಚಿತ್ರ ನಿರ್ಮಾಣಗಾರ ಸಶ ರೈನ್ಬೋ ಅವರನ್ನು ಸೆಳೆಯಿತು. ಸುಂಗತಿ ಮತ್ತು ಕಮಲಿಯ ಯಶೋಗಾಥೆಯನ್ನು ಜಗತ್ತಿಗೆ ತೋರಿಸಬೇಕು ಎಂಬ ಅದಮ್ಯ ಆಶಯದೊಂದಿಗೆ ಅವರು ಚೆನ್ನೈಗೆ ಬಂದು ಕಿರುಚಿತ್ರ ನಿರ್ಮಾಣ ಮಾಡಿದರು.

“ಕಮಲಿಯ ಕಥೆಯು ಭಾರತದಲ್ಲಿನ ಅಸಾಧಾರಣ ಕ್ಷಣವೊಂದನ್ನು ಪ್ರಸ್ತುತಪಡಿಸುತ್ತದೆ, ಬೃಹತ್ತಾದ ಬದಲಾವಣೆಯೊಂದನ್ನು ಒಬ್ಬ ವ್ಯಕ್ತಿ ಮಾಡಬಲ್ಲ ಎಂಬುದಕ್ಕೆ ಈ ಕಥೆ ಸಾಕ್ಷಿಯಾಗಿದೆ. ಸುಗಂತಿ ಮತ್ತು ಆಕೆಯಂತಹ ನಾಯಕರುಗಳ ಧೈರ್ಯವನ್ನು ನಾವು ಸಂಭ್ರಮಿಸಬೇಕು. ಸ್ಕೇಟ್ ಬೋರ್ಡಿಂಗ್ ಎಂದರೆ ಪ್ರಪಾತದ ವಿರುದ್ಧ ಹೋಗುವುದು, ಸಮಾಜದ ಎದುರು ದೃಢವಾಗಿ ನಿಲ್ಲುವುದು ಮತ್ತು ಬದುಕಿನ ಮಾಲಿಕತ್ವವನ್ನು ಪಡೆದುಕೊಳ್ಳುವುದು ಎಂಬುದು ನನ್ನ ನಂಬಿಕೆ’ ಎಂದು ರೈನ್ಬೋ ಹೇಳುತ್ತಾರೆ.

ಕಮಲಿ ಈಗಾಗಲೇ ಇಂಟರ್ನೆಟ್ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾಳೆ. ಚೆನ್ನೈ ಮೂಲದ ಐರಿಶ್ ಉದ್ಯಮಿ ಐನೆ ಎಡ್ವರ್ಡ್ಸ್ ಅವರು, ಅಂತಾರಾಷ್ಟ್ರೀಯ ಖ್ಯಾತಿಯ ಸ್ಕೇಟ್ ಬೋರ್ಡರ್ ಜಾಮೀ ಥೋಮಸ್ ಅವರನ್ನು ಕಮಲಿಗೆ ಭೇಟಿ ಮಾಡಿಸಿಕೊಟ್ಟಿದ್ದಾರೆ. ಅವರು ಈಕೆಗೆ ನೀಡುತ್ತಿರುವ ತರಬೇತಿಯ ದೃಶ್ಯವನ್ನು ಮತ್ತೋರ್ವ ವೃತ್ತಿಪರ ಸ್ಕೇಟ್ ಬೋರ್ಡರ್ ಟೋನಿ ಹೌಕ್ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದೆ.

‘ಸಶ ರೈನ್ಬೋ ಅವರು ಮಹಾಬಲಿಪುರಂನಲ್ಲಿ ದೊಡ್ಡ ಸ್ಕೇಟ್ ಬೋರ್ಡರ್ ಪಾರ್ಕ್ ನಿರ್ಮಾಣ ಮಾಡಲು ಬಯಸುತ್ತಿದ್ದಾರೆ. ಒಂದು ವೇಳೆ ನಿರ್ಮಾಣವಾದರೆ, ಎಲ್ಲಾ ಮಕ್ಕಳಿಗೂ ಇದು ಕಮ್ಯೂನಿಟಿ ಪ್ಲೇಸ್ ಆಗಲಿದೆ ಮತ್ತು ಕಮಲಿ ಇತರ ಎಲ್ಲಾ  ಮಕ್ಕಳಿಗೂ ಈ ಕ್ರೀಡೆ ತೆಗೆದುಕೊಳ್ಳಲು ಪ್ರೇರಣೆಯಾಗಲಿದ್ದಾಳೆ” ಎಂದು ಐನೆ ಎಡ್ವರ್ಡ್ಸ್ ಹೇಳಿದ್ದಾರೆ.

ಪ್ರಸ್ತುತ ಕಮಲಿ ಐದನೇ ತರಗತಿಯಲ್ಲಿ ಕಲಿಯುತ್ತಿದ್ದು, ಸ್ಕೇಟ್­ಬೋರ್ಡ್­ನಲ್ಲಿ ದೊಡ್ಡ ಸಾಧನೆಯನ್ನು ಮಾಡುವ ಕನಸನ್ನು ಹೊಂದಿದ್ದಾಳೆ.

ಈಗಾಗಲೇ ಕಮಲಿ ಕಿರುಚಿತ್ರವು ಮುಂಬಯಿ ಶಾರ್ಟ್ಸ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್­ನಲ್ಲಿ ‘ಬೆಸ್ಟ್ ಡೈರೆಕ್ಟರ್ ಅವಾರ್ಡ್’ ಅನ್ನು ಪಡೆದುಕೊಂಡಿದೆ.

2020ರ ಆಸ್ಕರ್ ಪ್ರಶಸ್ತಿಯ ಶಾರ್ಟ್­ಲಿಸ್ಟ್­­ಗೂ ಆಯ್ಕೆಗೊಂಡಿದೆ, ಮಹಾಬಲಿಪುರಂನ ನಾಗರಿಕರು ಈ ಸಿನಿಮಾ ಬಗ್ಗೆ ಭಾರೀ ಭರವಸೆಯನ್ನು ಇಟ್ಟುಕೊಂಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top