ಆನಂದಪುರ್ ಸಾಹೇಬ್: ಸರಿಗಟ್ಟಲಾಗದ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಶಕ್ತಿ ಮತ್ತು ಘನತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಶತ್ರುಗಳು ಭಯಪಡುವಂತಹ ಮತ್ತು ವಿಶ್ವ ಸಮುದಾಯ ಗೌರವ ನೀಡುವಂತಹ ಪ್ರಧಾನಿಗಳು ನಮ್ಮ ದೇಶಕ್ಕೆ ಬೇಕು ಎಂದು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಶತ್ರುಗಳು ಹೆದರುವಂತಹ, ವಿಶ್ವ ಸಮುದಾಯ ಗೌರವಿಸುವಂತಹ ವ್ಯಕ್ತಿತ್ವ ಇರುವ ಏಕೈಕ ನಾಯಕನೆಂದರೆ ಅದು ಮೋದಿ ಮಾತ್ರ’ ಎಂದಿದ್ದಾರೆ.
”ಮೋದಿಯವರು ದೇಶದ ಶಕ್ತಿ ಮತ್ತು ಘನತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ವಿಶ್ವಸಂಸ್ಥೆ ಮತ್ತು ಚೀನಾ, ಅಮೆರಿಕಾದಂತಹ ದೇಶಗಳು ಕೂಡ ಅವರ ಮಾತನ್ನು ಗೌರವದಿಂದ ಆಲಿಸುತ್ತವೆ. ಇದು ಮೋದಿ ನಾಯಕತ್ವದಡಿ ದೇಶದ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.
ಪಂಜಾಬಿನಲ್ಲಿನ ಹಾಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ‘ಲೋಕಸಭಾ ಚುನಾವಣೆಯ ಫಲಿತಾಂಶಗಳು ಪಂಜಾಬಿನ ಪ್ರಸ್ತುತ ಅಸಮರ್ಥ, ಅಲಭ್ಯ ಮತ್ತು ದೂರದೃಷ್ಟಿ ಇಲ್ಲದ ಸರ್ಕಾರದ ಬುಡವನ್ನು ಅಲ್ಲಾಡಿಸಲಿದೆ” ಎಂದಿದ್ದಾರೆ.
ಪಂಜಾಬಿನಲ್ಲಿ ಕಾಂಗ್ರೆಸ್ ಆಕ್ರೋಶದ ಅಲೆಯನ್ನು ಎದುರಿಸುತ್ತಿದೆ ಎಂದಿದ್ದಾರೆ.
ಪಂಜಾಬಿನಲ್ಲಿನ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳಗಳ ಮೈತ್ರಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಸಂರಕ್ಷಣೆ ಮಾಡುವ ಸಂಕೇತಗಳಾಗಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.