ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳು ಅವರನ್ನು ಶಿವಾಜಿ ಮಹಾರಾಜನಿಗೆ ಹೋಲಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲವರು ಇದನ್ನು ವಿರೋಧಿಸಿದರೆ, ಕೆಲವರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಯಾಕೆ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು ಅವರನ್ನು ಛತ್ರಪತಿ ಶಿವಾಜಿಯೊಂದಿಗೆ ಹೋಲಿಸುತ್ತಾರೆ ಎಂಬುದಕ್ಕೆ ಕೆಲವೊಂದು ಕಾರಣಗಳು ಇಲ್ಲಿವೆ.
ಶಿವಭಕ್ತಿ: ಶಿವಾಜಿ ಮಹಾರಾಜ ಮತ್ತು ಮೋದಿ ಇಬ್ಬರೂ ಶಿವಭಕ್ತರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹರ ಹರ ಮಹಾದೇವ!
ಮಾತೃ ಭಕ್ತಿ: ತಾಯಿ ಜೀಜಾಬಾಯಿಯ ಪಾತ್ರವಿಲ್ಲದೆ ಶಿವಾಜಿ ಮಹಾರಾಜನ ಜೀವನವನ್ನು ಯಾರಾದರು ವಿವರಿಸಲು ಸಾಧ್ಯವೇ? ಸನಾತನ ಧರ್ಮ, ಧೈರ್ಯ, ನ್ಯಾಯ ಮತ್ತು ನಮ್ಮ ನೆಲದಿಂದ ಮೊಘಲರನ್ನು ನಿರ್ಮೂಲನೆ ಮಾಡುವುದನ್ನು ಶಿವಾಜಿಗೆ ಹೇಳಿಕೊಟ್ಟವಳೇ ಆತನ ತಾಯಿ. ಸಂಸ್ಕೃತಿಯ ಅವಸಾನವನ್ನು ನೋಡುವ ಧೈರ್ಯ ಮತ್ತು ಸಂಸ್ಕೃತಿ, ಪರಂಪರೆಯನ್ನು ಉಳಿಸುತ್ತ ಕಾರ್ಯೋನ್ಮುಖವಾಗುವಂತೆ ಶಿವಾಜಿಯನ್ನು ಉತ್ತೇಜಿಸಿದ್ದು ಆಕೆಯೇ.
ತನ್ನ ತಾಯಿಯ ಬಳಿ ಕುಳಿತು, ಅವರ ಆಶೀರ್ವಾದವನ್ನು ಪಡೆದುಕೊಳ್ಳುವ ಮೋದಿಯವರ ಚಿತ್ರವಿದ್ದಾಗ ಮಾತ್ರ ಅವರ ವರ್ಣನೆ ಪರಿಪೂರ್ಣಗೊಳ್ಳುತ್ತದೆ. ಆಕೆ ಎದುರಿಸಿದ ಸಂಕಷ್ಟಗಳು ಮೋದಿಯವರಿಗೆ ಗ್ರಾಮೀಣ ಮಹಿಳೆಯರ ಏಳಿಗೆಗೆ ಶ್ರಮಿಸಲು ಪ್ರೇರಣೆ ನೀಡಿತು. ಅವರ ಉಜ್ವಲ ಯೋಜನೆ, ಸ್ವಚ್ಛ ಭಾರತ, ವಸತಿ ನಿರ್ಮಾಣ, ಶೌಚಾಲಯ ನಿರ್ಮಾಣ ಇತ್ಯಾದಿಗಳ ಕೇಂದ್ರ ಬಿಂದು ಮಹಿಳೆಯೇ ಆಗಿದ್ದಾಳೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್: ಶಿವಾಜಿ ಎಲ್ಲಾ ಜನಾಂಗ, ಜಾತಿ, ಸಮುದಾಯ ಮತ್ತು ಧರ್ಮದ ಜನರಿಗೆ ನ್ಯಾಯ ಮತ್ತು ಸಮಾನತೆಯನ್ನು ನೀಡುವುದಕ್ಕೆ ಹೆಸರಾಗಿದ್ದರು, ಅವರೆಂದೂ ತಾರತಮ್ಯದ ಧೋರಣೆಗಳನ್ನು ಅನುಸರಿಸುತ್ತಿರಲಿಲ್ಲ.
ಮೋದಿಯವರೂ ಪ್ರಧಾನಿಯಾದ ದಿನದಿಂದ ಸದಾ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದಾರೆ. ಅವರ ಎಲ್ಲಾ ಯೋಜನೆಗಳು ಜಾತಿ ಮತ್ತು ಧರ್ಮದ ಹಂಗಿಲ್ಲದೆ ಎಲ್ಲರಿಗೂ ಸಮಾನವಾಗಿ ತಲುಪಿವೆ.
ಕಳೆದುಕೊಂಡ ಪ್ರದೇಶವನ್ನು ವಾಪಾಸ್ ಪಡೆಯುವುದು: ಶಿವಾಜಿಯು ಮೊಘಲರ ಹಲವಾರು ಕೋಟೆಗಳನ್ನು ವಶಪಡಿಸಿಕೊಂಡರು ಮತ್ತು ಹಲವಾರು ಕೋಟೆಗಳನ್ನು ನಿರ್ಮಿಸಿದರು ಎಂದು ಎಲ್ಲರಿಗೂ ತಿಳಿದಿದೆ. ತನ್ನ ಅಧಿಕಾರಾವಧಿಯಲ್ಲಿ ಶಿವಾಜಿಯ ಬಳಿ 370 ಕೋಟೆಗಳಿದ್ದವು.
ಮೋದಿಯವರೂ ಕಾಂಗ್ರೆಸ್ಸಿನಿಂದ ಹಲವಾರು ಸ್ಥಾನಗಳನ್ನು ಮತ್ತು ರಾಜ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಾರಿ ಅವರ ರೋಡ್ ಶೋನಲ್ಲಿ ನೆರೆದ ಜನಸ್ತೋಮವನ್ನು ನೋಡಿದರೆ ಅವರು 370 ಸ್ಥಾನಗಳನ್ನು ಗೆದ್ದರೂ ಆಶ್ಚರ್ಯವಿಲ್ಲ ಎಂದೆನಿಸುತ್ತದೆ.
ಗೆರಿಲ್ಲಾ ತಂತ್ರ: ಗೆರಿಲ್ಲಾ ತಂತ್ರದಲ್ಲಿ ಶಿವಾಜಿ ಮಹಾರಾಜ ಅತೀ ಶ್ರೇಷ್ಠರಾಗಿದ್ದರು. ಯುದ್ಧಗಳನ್ನು ಗೆಲ್ಲಲು, ಶತ್ರುಗಳನ್ನು ಸೋಲಿಸಲು ಈ ತಂತ್ರವನ್ನು ಅವರು ಯೆಥೇಚ್ಛವಾಗಿ ಬಳಸುತ್ತಿದ್ದರು.
ಮೋದಿಯವರು ಹೇಗೆ ಗೆರಿಲ್ಲಾ ತಂತ್ರವನ್ನು ಬಳಸಿದರು ಎಂಬುದನ್ನು ತಿಳಿಯಲು ತಾರತಮ್ಯ ನಿಲುವು ಇಟ್ಟುಕೊಂಡಿರುವ ಮಾಧ್ಯಮ ಮತ್ತು ಪತ್ರಕರ್ತರ ಪ್ರತಿಕ್ರಿಯೆಯನ್ನು ನೋಡಿದರೆ ಸಾಕು. ಮೈ ಭಿ ಚೌಕಿದಾರ್ ಅಭಿಯಾನ, ಅಕ್ಷಯ್ ಕುಮಾರ್ ಅವರೊಂದಿಗೆ ಸಂದರ್ಶನ, ದಿಗ್ವಿಜಯ್ ಸಿಂಗ್ ವಿರುದ್ಧ ಸಾಧ್ವಿ ಪ್ರಗ್ಯಾ ಸಿಂಗ್ರನ್ನು ಕಣಕ್ಕಿಳಿಸಿದ್ದು, ಯೋಗಿ ಆದಿತ್ಯನಾಥರನ್ನು ಯುಪಿ ಸಿಎಂ ಮಾಡಿದ್ದು-ಇದೆಲ್ಲವೂ ತಾರತಮ್ಯ ಧೋರಣೆಯ ಮಾಧ್ಯಮ ಮತ್ತು ಕಾಂಗ್ರೆಸ್ಸಿಗೆ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗದ ತಂತ್ರಗಾರಿಕೆಯಾಗಿದೆ. ‘ಮೋದಿಯವರು ‘ಔಟ್ ಆಫ್ ಬಾಕ್ಸ್’ ಚಿಂತನೆಯಲ್ಲಿ ನಿಸ್ಸೀಮರು!
ಬಂಧನದಿಂದ ತಪ್ಪಿಸಿಕೊಳ್ಳುವುದು: ಶಿವಾಜಿ ಮಹಾರಾಜರ ಜೀವನದ ಮುಖ್ಯ ಭಾಗವೆಂದರೆ, ಅದು ಮಗನೊಂದಿಗೆ ಔರಂಗಜೇಬನ ಜೈಲಿನಿಂದ ಪರಾರಿಯಾಗುವ ಸಂದರ್ಭ. ಭದ್ರತೆಯ ನಡುವೆಯೂ ಇವರಿಬ್ಬರು ಶತ್ರುಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಜೈಲಿನಿಂದ ಪರಾರಿಯಾಗಿ ಸುರಕ್ಷಿತವಾಗಿ ಮಹಾರಾಷ್ಟ್ರವನ್ನು ಸೇರಿದರು. ಶತ್ರುಗಳ ಕುತಂತ್ರಕ್ಕೆ ಇವರನ್ನು ಬಲಿ ಹಾಕಲು ಸಾಧ್ಯವಾಗಲಿಲ್ಲ. ಅವರು ಮತ್ತಷ್ಟು ಬಲಿಷ್ಠರಾಗುತ್ತಲೇ ಹೋದರು.
ಕೆಲ ಮಾಧ್ಯಮಗಳ, ಜಾನ್ ದಯಾಳ್ ಮತ್ತು ಅರುಂಧತಿ ರಾಯ್ ಅವರಂತಹ ಕಟು ದ್ವೇಷಿಗಳು, ಸಾವಿನ ವ್ಯಾಪಾರಿ ಹೇಳಿಕೆ ನೀಡಿದವರ ಶತ ಪ್ರಯತ್ನದ ಬಳಿಕವೂ ಮೋದಿ ಕಲ್ಲುಬಂಡೆಯಂತೆ ದೃಢವಾಗಿ ನಿಂತರು, ನ್ಯಾಯಸಮ್ಮತವಾಗಿ ಹೋರಾಡಿ ನ್ಯಾಯ ಪಡೆದುಕೊಂಡರು. ಗುಜರಾತ್ ದಂಗೆಗಾಗಿ ಜೈಲು ಪಾಲಾಗಿಲ್ಲ, ಬದಲಾಗಿ ಮತ್ತಷ್ಟು ಬಲಿಷ್ಠಗೊಂಡರು, ಪ್ರಬಲರಾದರು. ದೇಶದ ಪ್ರಧಾನಿಯಾದರು.
ಪ್ರೇರಣೆ: ಹಿರಿಯರೇ ಇರಲಿ, ಕಿರಿಯರೇ ಇರಲಿ ಶಿವಾಜಿ ಮಹಾರಾಜ ಮತ್ತು ನರೇಂದ್ರ ಮೋದಿ ಎಲ್ಲರಿಗೂ ಪ್ರೇರಣೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಪ್ರತಿ ಕಾಲಕ್ಕೂ ಅದರದ್ದೇ ಆದ ನಾಯಕರಿರುತ್ತಾರೆ. ಒಂದು ಕಾಲದ ನಾಯಕನನ್ನು ಮತ್ತೊಂದು ಕಾಲದ ನಾಯಕನೊಂದಿಗೆ ಹೋಲಿಕೆ ಮಾಡುವುದು ಸಮಂಜಸವಲ್ಲ ಮತ್ತು ಯಾರೂ ಅಂತಹ ಹೋಲಿಕೆಯನ್ನು ಮಾಡಲೂ ಬಾರದು. ಎಲ್ಲರೂ ತಮ್ಮದೇ ಆದ ವಿಭಿನ್ನಶೈಲಿಯಲ್ಲಿ ವಿಶೇಷರಾಗಿರುತ್ತಾರೆ. ಮೋದಿ ಮತ್ತು ಶಿವಾಜಿ ಇವರಿಬ್ಬರು ಸರಿಸಾಟಿಯಿಲ್ಲದ ನಾಯಕರು, ಇವರಿಬ್ಬರೂ ಅಪ್ರತಿಮ ದೇಶಭಕ್ತರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.