ನವದೆಹಲಿ: ಭಯೋತ್ಪಾದಕರಿಗೆ ಹಣಕಾಸು ನೆರವು ಸಿಗುವುದರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲು ವಿಫಲವಾಗಿರುವ ಪಾಕಿಸ್ಥಾನವನ್ನು ಫಿನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATF) ಗ್ರೇ ಲಿಸ್ಟ್ಗೆ ಹಾಕಿದೆ, ಇಂತಹ ಸಂದರ್ಭದಲ್ಲಿ ಆ ದೇಶಕ್ಕೆ ಬೇಲೌಟ್ ನೀಡುವುದರ ವಿರುದ್ಧ ಇಂಟರ್ನ್ಯಾಷನಲ್ ಮಾನಿಟರ್ ಫಂಡ್ಗೆ ಭಾರತ ಸೇರಿದಂತೆ ಅನೇಕ ದೇಶಗಳು ಎಚ್ಚರಿಕೆ ರವಾನಿಸಿವೆ.
ಈಗಾಗಲೇ ಪಾಕಿಸ್ಥಾನ FATFನ ಗ್ರೇ ಲಿಸ್ಟ್ನಲ್ಲಿದೆ, ಭವಿಷ್ಯದಲ್ಲಿ ಅದು ಬ್ಲ್ಯಾಕ್ ಲಿಸ್ಟ್ಗೂ ಹೋಗುವ ಸಾಧ್ಯತೆ ಇದೆ. ಹೀಗಾಗಿ ಆ ದೇಶಕ್ಕೆ ಹಣಕಾಸು ನೆರವು ನೀಡಬಾರದು ಎಂದು ಭಾರತ ಸೇರಿದಂತೆ ಅನೇಕ ದೇಶಗಳು ಆಗ್ರಹಿಸಿವೆ.
ವಾಷಿಂಗ್ಟನ್ನಲ್ಲಿ ನಡೆದ ಐಎಂಎಫ್ನ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡ ಭಾರತೀಯ ಅಧಿಕಾರಿಗಳು, ಈ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ ಎನ್ನಲಾಗಿದೆ. FATF ಅಧಿಕಾರಿಗಳೊಂದಿಗಿನ ವಿಶ್ವಬ್ಯಾಂಕ್ ಸಭೆ ಕೂಡ ಇದೇ ವೇಳೆ ಜರುಗಿದೆ.
FATFನ ಬ್ಲ್ಯಾಕ್ ಲಿಸ್ಟ್ಗೆ ಸೇರ್ಪಡೆಗೊಂಡ ದೇಶಗಳಿಗೆ ಇತರ ದೇಶಗಳೊಂದಿಗೆ ಹಣಕಾಸು ವ್ಯವಹಾರವನ್ನು ನಿರ್ಬಂಧ ಮಾಡಲಾಗುತ್ತದೆ. ಹೀಗಾದರೆ ಐಎಂಎಫ್ ನೀಡುವ ಅನುದಾನವನ್ನು ಪಾಕಿಸ್ಥಾನಕ್ಕೆ ಮರು ಸಂದಾಯ ಮಾಡಲು ಕಷ್ಟವಾಗಬಹುದು ಎಂಬುದು ಭಾರತದ ವಾದವಾಗಿದೆ.
ಉಗ್ರರಿಗೆ ಹರಿದು ಬರುತ್ತಿರುವ ಹಣಕಾಸು ನೆರವನ್ನು ತಡೆಗಟ್ಟಲು ವಿಫಲಗೊಂಡಿರುವ ಪಾಕಿಸ್ಥಾನವನ್ನು FATF ಗ್ರೇ ಲಿಸ್ಟ್ನಲ್ಲಿ ಇಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.