ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ವೈಯಕ್ತಿಕ ಕ್ಷೌರಿಕ ನಝೀರ್ ಅಹ್ಮದ್ ಅವರ ಮರಿಮೊಮ್ಮಗ ಮತ್ತು ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಳಿಕ ಮಾತನಾಡಿದ ಅವರು, ‘ಇದುವರೆಗೆ ನಾನು ಕೂದಲಿನ ಚೌಕಿದಾರ ಆಗಿದ್ದೆ, ಈಗ ನಾನು ದೇಶದ ಚೌಕಿದಾರನಾಗಿ ಬದಲಾಗಿದ್ದೇನೆ. ಪ್ರಧಾನಿ ಮೋದಿಯವರ ಕಾರ್ಯ ವೈಖರಿಯಿಂದ ಪ್ರೇರಣೆಗೊಂಡು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ’ ಎಂದಿದ್ದಾರೆ.
ಯಾರೊಬ್ಬರು ತಮ್ಮ ಹಿನ್ನಲೆಯ ಬಗ್ಗೆ ನಾಚಿಗೆ ಪಟ್ಟುಕೊಳ್ಳಬಾರದು ಎಂದಿರುವ ಹಬೀಬ್, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಣೆ ಪಡೆದುಕೊಳ್ಳಬೇಕು, ಕ್ಷೌರಿಕರು ತಮ್ಮನ್ನು ತಾವು ಕ್ಷೌರಿಕ ಎಂದು ಕರೆಸಿಕೊಳ್ಳಲು ಯಾರೂ ಹಿಂಜರಿಯಬಾರದು, ಮೋದಿಯವರೇ ತಮ್ಮನ್ನು ಹೆಮ್ಮೆಯಿಂದ ಚಾಯ್ ವಾಲಾ ಎಂದು ಕರೆಸಿಕೊಳ್ಳುತ್ತಾರೆ, ಅದೇ ರೀತಿ ನಾವು ಕೂಡ ಕ್ಷೌರಿಕ ಎಂದು ಕರೆಸಿಕೊಳ್ಳಬೇಕು ಎಂದರು.
ಹಬೀಬ್ ಅವರ ಕುಟುಂಬ ಪಾರಂಪರಿಕವಾಗಿ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿದೆ, ದೇಶದ ಉನ್ನತ ನಾಯಕತ್ವದೊಂದಿಗೆ ಆತ್ಮೀಯ ಸಂಬಂಧವನ್ನೂ ಹೊಂದಿದೆ. ಇವರ ಮುತ್ತಜ್ಜ ನಝೀರ್ ಅಹ್ಮದ್ ಅವರು ನೆಹರೂ ಅವರ ವೈಯಕ್ತಿಕ ಕ್ಷೌರಿಕನಾಗಿದ್ದರು, ಲಾರ್ಡ್ ಮೌಂಟ್ ಬ್ಯಾಟನ್ಗೂ ಇವರು ಕ್ಷೌರ ಮಾಡುತ್ತಿದ್ದರು. ಜಾವೇದ್ ಅವರು ಹುಟ್ಟಿದ್ದೂ ರಾಷ್ಟ್ರಪತಿ ಭವನದಲ್ಲಿ, ಆ ವೇಳೆ ಜಾವೇದ್ ಅವರ ಕುಟುಂಬ ರಾಷ್ಟ್ರಪತಿ ಭವನದಲ್ಲಿ ನೆಲೆಸಿತ್ತು. ಜಾವೇದ್ ತಂದೆ ಹಬೀಬ್ ಅಹ್ಮದ್ ಕೂಡ ಖ್ಯಾತ ಕೇಶ ವಿನ್ಯಾಸಗಾರನಾಗಿದ್ದು, ನೆಹರೂ ಸೇರಿದಂತೆ ಅನೇಕ ಗಣ್ಯರಿಗೆ ಕ್ಷೌರ ಮಾಡುತ್ತಿದ್ದರು.
ಪ್ರಸ್ತುತ ಜಾವೇದ್ ಅರು ದೇಶದ 24 ರಾಜ್ಯಗಳಲ್ಲಿ 800 ಸೆಲೂನ್ಗಳನ್ನು ನಡೆಸುತ್ತಿದ್ದಾರೆ, ಹೇರ್ ಡ್ರೆಸ್ಸಿಂಗ್ ವಿಷಯದಲ್ಲಿ ಹಲವಾರು ವರ್ಕ್ ಶಾಪ್, ಸೆಮಿನಾರ್ಗಳನ್ನು ಆಯೋಜನೆಗೊಳಿಸುತ್ತಾರೆ. ಈ ವಿಷಯದಲ್ಲಿ ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.