ನವದೆಹಲಿ: ಕಳೆದ ವರ್ಷ ಭಾರತದ ಮೂಲಸೌಕರ್ಯ ವಿಷಯದಲ್ಲಿ ಅತ್ಯಂತ ಫಲದಾಯಕ ವರ್ಷವಾಗಿದೆ. ನರೇಂದ್ರ ಮೋದಿ ಸರ್ಕಾರವು 2018ರ ಎಪ್ರಿಲ್ ಮತ್ತು ಡಿಸೆಂಬರ್ ಅವಧಿಯ ನಡುವೆ 101 ಪ್ರಮುಖ ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸಿದೆ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ನೀಡಿರುವ ವರದಿಯ ಪ್ರಕಾರ, ಪೂರ್ಣಗೊಂಡ ಕಾಮಗಾರಿಗಳ ಪೂರ್ಣ ಮೊತ್ತ ರೂ.1,06,966 ಕೋಟಿ.
2018ರ ಡಿಸೆಂಬರ್ವರೆಗೆ ಒಟ್ಟು 1,464 ದೊಡ್ಡ ಮೂಲಸೌಕರ್ಯ ಯೋಜನೆಗಳು ಸಚಿವಾಲಯದಿಂದ ವರದಿಯಾಗಿದೆ, ಈ ಯೋಜನೆಗಳ ಒಟ್ಟು ಬಜೆಟ್ ರೂ.18.45,993.53 ಕೋಟಿ. ಡಿಸೆಂಬರ್ ತನಕ 1,464 ಯೋಜನೆಗಳ ಪೈಕಿ 354 ಮೂಲಸೌಕರ್ಯ ಯೋಜನೆಗಳು ನಿಗದಿಗೊಳಿಸಲಾಗಿದೆ, 384 ಯೋಜನೆಗಳು ವಿಳಂಬವಾಗಿವೆ ಮತ್ತು 686 ಯೋಜನೆಗಳಿಗೆ ಯಾವುದೇ ಸಮಯವನ್ನು ನಿಗದಿಪಡಿಸಲಾಗಿಲ್ಲ.
ಕಳೆದ ಐದು ವರ್ಷದಲ್ಲಿ ಮೋದಿ ಸರ್ಕಾರವು ಗ್ರಾಮೀಣ ರಸ್ತೆಗಳ ನಿರ್ಮಾಣವನ್ನು ಮಾಡಿದ್ದು ಮಾತ್ರವಲ್ಲ, ಅತ್ಯಂತ ಕ್ಷಿಪ್ರಗತಿಯಲ್ಲಿ ಅದರ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.
ಫೆಬ್ರವರಿ 1ರಂದು ಬಜೆಟ್ ಮಂಡನೆಗೊಳಿಸಿದ ಸಚಿವ ಪಿಯೂಶ್ ಗೋಯಲ್ ಅವರು, ನಾವು ವಿಶ್ವದ ಅತೀ ವೇಗದ ಹೆದ್ದಾರಿ ನಿರ್ಮಾಣಗಾರರಾಗಿದ್ದೇವೆ ಎಂದಿದ್ದಾರೆ.
ದಿನಕ್ಕೆ 27 ಕಿಲೋಮೀಟರ್ ವೇಗದಲ್ಲಿ ಮೋದಿ ಸರ್ಕಾರವು ಹೆದ್ದಾರಿ ನಿರ್ಮಾಣ ಮಾಡಿದೆ. ಇದು ವಿಶ್ವದಲ್ಲೇ ಅತೀ ವೇಗದ್ದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.