ನವದೆಹಲಿ: ದೋಹಾದಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟೀಕ್ಸ್ ಚಾಂಪಿಯನ್ಶಿಪ್ನ ಆರಂಭಿಕ ದಿನವೇ ಭಾರತೀಯ ಕ್ರೀಡಾಪಟುಗಳು ಐದು ಪದಕಗಳನ್ನು ಜಯಿಸಿದ್ದಾರೆ. ಜಾವಲಿನ್ ಥ್ರೋವರ್ ಅನ್ನು ರಾಣಿ ಮತ್ತು 300 ಮೀಟರ್ ಸ್ಟೀಪಲ್ ಚೇಸರ್ ಅವಿನಾಶ ಸಬ್ಲೆ ಅವರು ನಿನ್ನೆ ಬೆಳ್ಳಿಯ ಪದಕಗಳನ್ನು ಜಯಿಸಿದ್ದಾರೆ.
400 ಮೀಟರ್ ಓಟಗಾರ್ತಿ ಎಂ.ಪಿ ಪೂವಮ್ಮ, 5000 ಮೀಟರ್ ರನ್ನರ್ ಪಾರೂಲ್ ಚೌಧರಿ ಮತ್ತು 1000 ಮೀಟರ್ ರನ್ನರ್ ಗವಿತ್ ಮುರಳಿ ಕುಮಾರ್ ಅವರು ತಲಾ ಒಂದೊಂದು ಕಂಚಿನ ಪದಕಗಳನ್ನು ಜಯಿಸಿದ್ದಾರೆ.
ಸ್ಪ್ರಿಂಟರ್ ದ್ಯುತಿ ಚಂದ್ ಅವರು, ಸೆಮಿ ಫೈನಲ್ಸ್ಗೆ ಲಗ್ಗೆ ಇಟ್ಟಿದ್ದಾರೆ, ಮಹಿಳೆಯರ 100 ಮೀಟರ್ ಓಟದಲ್ಲಿ ಅವರು ನಾಲ್ಕನೇ ಸ್ಥಾನ ಗಿಟ್ಟಿಸಿದ್ದಾರೆ. 11.28 ಸೆಕೆಂಡ್ನಲ್ಲಿ ಅವರು ಗುರಿ ತಲುಪುವ ಮೂಲಕ ತನ್ನ ಹಿಂದಿನ ದಾಖಲೆಯಾದ 11.29 ಸೆಕೆಂಟ್ ಅನ್ನು ಸರಿಗಟ್ಟಿದರು. ಪೂವಮ್ಮ ಅವರು 400 ಮೀಟರ್ ಓಟದಲ್ಲಿ ಎರಡನೇ ಸ್ಥಾನ ಪಡೆದು ಫೈನಲ್ಸ್ಗೆ ಲಗ್ಗೆ ಇಟ್ಟಿದ್ದಾರೆ.
ಜಿನ್ಸಾನ್ ಜಾನ್ಸನ್ 800 ಮೀಟರ್, ಮೊಹಮ್ಮದ್ ಅನಸ್ ಮತ್ತು ಅರೋಕಿ ರಾಜೀವ್ 400 ಮೀಟರ್, ಪ್ರವೀಣ್ ಚಿತ್ರವೆಲ್ ಟ್ರಿಪಲ್ ಜಂಪ್, ಗೋಮತಿ ಮಾರಿಮುತ್ತು 1500 ಮೀಟರ್ ಓಟದಲ್ಲಿ ಭಾರತವನ್ನು ಏಷ್ಯನ್ ಅಥ್ಲೆಟೀಕ್ಸ್ ಚಾಂಪಿಯನ್ಶಿಪ್ನಲ್ಲಿ ಪ್ರತಿನಿಧಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.