ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್ (ಸಿಆರ್ಪಿಎಫ್)ನ ಯೋಧರೊಬ್ಬರು ಕರ್ತವ್ಯವನ್ನೂ ಮೀರಿ ತಾಯಿ ಮತ್ತು ಮಗುವಿನ ಜೀವ ಉಳಿಸಲು ರಕ್ತದಾನ ಮಾಡಿದ್ದಾರೆ. ಈ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
25 ವರ್ಷದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡುವ ವೇಳೆ ತೀವ್ರ ಸಂಕಷ್ಟಕ್ಕೀಡಾಗಿದ್ದರು, ಅಧಿಕ ರಕ್ತಸ್ರಾವವಾಗಿದ್ದ ಕಾರಣ ಅವರಿಗೆ ರಕ್ತದ ಅನಿವಾರ್ಯತೆ ಇತ್ತು. ಈ ವೇಳೆ 53ನೇ ಬೆಟಾಲಿಯನ್ನಿನ ಗೊಹಿಲ್ ಶೈಲೇಶ್ ಎಂಬ ಯೋಧ ತಕ್ಷಣವೇ ಮಹಿಳೆಯ ಸಹಾಯಕ್ಕೆ ಬಂದು ರಕ್ತದಾನ ಮಾಡಿದ್ದಾರೆ. ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದಾರೆ.
ಗುಲ್ಶನ್ ನಗರದ ಮಹಿಳೆ ಇವರಾಗಿದ್ದು, ಹೆರಿಗೆ ಸಂದರ್ಭದಲ್ಲಿ ಇವರ ಪರಿಸ್ಥಿತಿ ಹದಗೆಡುತ್ತಾ ಬಂದಾಗಲೇ ಇವರ ಕುಟುಂಬ ಸಿಆರ್ಪಿಎಫ್ ಮದದ್ಗಾರ್ ಅನ್ನು ಸಂಪರ್ಕಿಸಿತ್ತು. ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಎದುರಿಸುವ ಕಾಶ್ಮೀರ ಜನರಿಗಾಗಿ ಸಿರ್ಪಿಎಫ್ ಆರಂಭಿಸಿರುವ ಸಹಾಯವಾಣಿಯೇ ‘ಮದದ್ಗಾರ್’.
ಸಿರ್ಪಿಎಫ್ ಈ ವಿಷಯವನ್ನು ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ತಿಳಿಸಿದ್ದು, ‘ರಕ್ತದ ಸಂಬಂಧ” ಎಂದು ಕ್ಯಾಪ್ಶನ್ ನೀಡಿದೆ. ಸಿಆರ್ಪಿಎಫ್ ಕಾನ್ಸ್ಸ್ಟೇಬಲ್ ಮತ್ತು ಶಿಶುವಿನ ಫೋಟೋವನ್ನು ಹಂಚಿಕೊಂಡಿದ್ದು, ”ಇವರ ರಕ್ತ ತಾಯಿ, ಮಗು, ಕುಟುಂಬಕ್ಕೆ ಮರುಜೀವ ನೀಡಿದೆ ಮತ್ತು ಹೊಸ ಬಾಂಧವ್ಯವನ್ನು ಸೃಷ್ಟಿಸಿದೆ” ಎಂದು ಬರೆದುಕೊಂಡಿದೆ.
The relation of blood.
Constable Gohil Shailesh of #53Bn donated blood to 25 yr old lady of #Kashmir who urgently needed blood due to complications during delivery.
His blood saved a mother, a child, a family and created a bond for life. pic.twitter.com/kUM92pJQAy
— 🇮🇳CRPF🇮🇳 (@crpfindia) April 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.